2ನೇ ದಿನಕ್ಕೆ ಕಾಲಿಟ್ಟ ಅಂಚೆ ನೌಕರರ ಮುಷ್ಕರ
ಹಾಸನ

2ನೇ ದಿನಕ್ಕೆ ಕಾಲಿಟ್ಟ ಅಂಚೆ ನೌಕರರ ಮುಷ್ಕರ

December 20, 2018

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಅಂಚೇ ಕಚೇರಿಯ ಮುಂಭಾಗ ಮಂಗಳವಾರದಿಂದ ಮುಷ್ಕರ ಆರಂಭಿಸಿರುವ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರು 2ನೇ ದಿನವಾದ ಬುಧವಾರವೂ ಮುಷ್ಕರ ಮುಂದುವರೆಸಿದರು.

ಕಮಲೇಶ್ ಚಂದ್ರ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಗೊಳಿಸಬೇಕು. ಇಲಾಖಾ ನೌಕರರಿಗೆ ನೀಡುವ ಎಲ್ಲಾ ಸೇವಾ ಭದ್ರತೆಯನ್ನು ಗ್ರಾಮೀಣ ಅಂಚೆ ನೌಕರರಿಗೂ ನೀಡಬೇಕು. ವಾರ್ಷಿಕವಾಗಿ 30 ದಿನಗಳ ರಜೆಯನ್ನು ಒದಗಿಸಿ, ಅದರಲ್ಲಿ 180 ದಿನಗಳ ರಜೆಯನ್ನು ನೌಕರರ ಖಾತೆಗೆ ಜಮಾಗೊಳಿಸ ಬೇಕು. ನಿವೃತ್ತಿ ಹೊಂದಿದಾಗ 6 ತಿಂಗಳ ಸಂಬಳ ಸಹಿತ ರಜೆಯನ್ನು ಅವರಿಗೆ 7ನೇ ವೇತನ ವರದಿಯಂತೆ ಜಾರಿಗೊಳಿಸಬೇಕು ಸೇರಿ ದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮುಷ್ಕರದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಹಾಸನ ವಿಭಾಗ ಅಧ್ಯಕ್ಷ ಜಿ.ಬಿ.ಕಾಳಿಂಗೇಗೌಡ, ಕಾರ್ಯದರ್ಶಿ ಕೆ.ಜೆ.ಶಿವಾಜಿ, ಗೌರವಾಧ್ಯಕ್ಷ ಟಿ.ಡಿ.ರಂಗಯ್ಯ, ಖಜಾಂಚಿ ಜಯಕುಮಾರ್, ಎನ್‍ಯುಜಿಡಿಎಸ್ ಅಧ್ಯಕ್ಷ ಹೊನ್ನೇಗೌಡ ಇತರರು ಪಾಲ್ಗೊಂಡಿದ್ದರು.

Translate »