ಆಂಬುಲೆನ್ಸ್‍ನಲ್ಲಿ ಹರಳು ಕಲ್ಲು ಸಾಗಾಣೆ: ನಾಲ್ವರ ಬಂಧನ
ಕೊಡಗು

ಆಂಬುಲೆನ್ಸ್‍ನಲ್ಲಿ ಹರಳು ಕಲ್ಲು ಸಾಗಾಣೆ: ನಾಲ್ವರ ಬಂಧನ

December 20, 2018

ಕುಶಾಲನಗರ: ಆಂಬುಲೆನ್ಸ್‍ನಲ್ಲಿ ಹರಳು ಕಲ್ಲು ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯ ರಫೀಉಲ್ಲಾ ಖಾನ್, ಎಂ.ಎಂ. ಸಿರಾಜ್, ಸಿಕಂದರ್, ಎಂ.ಎಂ.ಮೊಹಮ್ಮದ್ ಆಲಿ ಬಂಧಿತ ಆರೋಪಿಗಳು. ಆರೋಪಿಗಳು ಮೇಕೇರಿ ಗ್ರಾಮದಿಂದ ಹರಳು ಕಲ್ಲುಗಳನ್ನು ತುಂಬಿಕೊಂಡು ಮೈಸೂರಿಗೆ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಶಾಲನಗರ ಪೊಲೀಸರು ಮಾದಪಟ್ಟಣ ಬಳಿ ಆಂಬು ಲೆನ್ಸ್ ಅನ್ನು ಪರಿಶೀಲಿಸಿದಾಗ ಸುಮಾರು 50 ಸಾವಿರ ರೂ. ಮೌಲ್ಯದ ಹರಳು ಕಲ್ಲುಗಳು ಪತ್ತೆಯಾಗಿವೆ. ಇದರಿಂದ ವಾಹನ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿರುವ ಕುಶಾಲ ನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »