ಸಂತ್ರಸ್ತರ ನಿಧಿಗೆ ಆರ್ಥಿಕ ನೆರವು
ಕೊಡಗು

ಸಂತ್ರಸ್ತರ ನಿಧಿಗೆ ಆರ್ಥಿಕ ನೆರವು

November 14, 2018

ಕುಶಾಲನಗರ:  ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಕುಶಾಲನಗರ ಹೋಬಳಿ ಘಟಕದ ವತಿಯಿಂದ 40 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟದ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಮಂಗಳವಾರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು. ಈ ವೇಳೆ ಸಂಘದ ಅಧ್ಯಕ್ಷ ಡಿ.ಕೆ. ಬೊಮ್ಮಯ್ಯ, ಉಪಾಧ್ಯಕ್ಷ ಕೆ.ಇ. ಉತ್ತಪ್ಪ, ಖಜಾಂಚಿ ಸಿ.ಸಿ. ರಾಘವಯ್ಯ ಹಾಗೂ ನಿರ್ದೇಶಕ ಕೆ.ಎಂ. ಗಿರೀಶ್ ಇದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Translate »