Tag: Kushalanagar

ಪ್ರಕೃತಿ ವಿಕೋಪ ಸಂತ್ರಸ್ತ ವೃದ್ಧ ಸಾವು
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತ ವೃದ್ಧ ಸಾವು

September 26, 2018

ಕುಶಾಲನಗರ: ಮಕ್ಕಂದೂರು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಕುಟುಂಬ ಸದಸ್ಯರ ಆಶ್ರಯದಲ್ಲಿ ನೆಲೆಸಿದ್ದ ವೃದ್ಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಕ್ಕಂದೂರು ಗ್ರಾಮದ ತಂತಿಪಾಲ ರಸ್ತೆಯ ನಿವಾಸಿ ರಾಮಣ್ಣ (75) ಮಂಗಳವಾರ ಬೆಳಗ್ಗೆ ತನ್ನ ಪುತ್ರಿಯ ಮನೆಯಲ್ಲಿ ಮೃತರಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತದ ಹಿನ್ನಲೆಯಿಂದ ಅವರು ಸ್ವಲ್ಪಕಾಲ ಮಡಿಕೇರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ನಂತರ ಕುಶಾಲನಗರದಲ್ಲಿರುವ ತನ್ನ ಪುತ್ರನ ನಿವಾಸದಲ್ಲಿ ಆಶ್ರಯ ಪಡೆದು ನಿನ್ನೆಯಷ್ಟೆ ಮಕ್ಕಂದೂರಿನ ತನ್ನ ಪುತ್ರಿಯ ಮನೆಗೆ ಬಂದು ತನ್ನ ಮನೆಯ…

ಸಾಮಿಲ್ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ : ರೂ.10 ಲಕ್ಷ ಮೌಲ್ಯದ ಬೀಟೆ ನಾಟ, ವಾಹನ ವಶ
ಕೊಡಗು

ಸಾಮಿಲ್ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ : ರೂ.10 ಲಕ್ಷ ಮೌಲ್ಯದ ಬೀಟೆ ನಾಟ, ವಾಹನ ವಶ

September 25, 2018

ಕುಶಾಲನಗರ: ಸೋಮವಾರಪೇಟೆ ಮೀಸಲು ಅರಣ್ಯದಿಂದ ಬೀಟೆ ಮರ ಗಳನ್ನು ಅಕ್ರಮವಾಗಿ ಕಡಿದು ವಾಹನದಲ್ಲಿ ಸಾಗಿಸುವ ಮೂಲಕ ಹಾಸನ ಜಿಲ್ಲೆಯ ಗಡಿ ಗ್ರಾಮದ ಸಾಮಿಲ್‍ನಲ್ಲಿ ತುಂಡು ಮಾಡುತ್ತಿದ್ದ ವೇಳೆ ಎರಡು ಜಿಲ್ಲೆಗಳ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.10 ಲಕ್ಷ ಮೌಲ್ಯದ ಬೀಟೆ ನಾಟ ಹಾಗೂ ವಾಹನ ವನ್ನು ವಶಪಡಿಸಿಕೊಂಡಿರುವ ಘಟನೆ ಭಾನು ವಾರ ನಡೆದಿದೆ. ಆರೋಪಿಗಳಾದ ಸೋಮ ವಾರಪೇಟೆ ಬಳಿಯ ಹಾನಗಲ್ಲು ಗ್ರಾಮದ ನಿವಾಸಿ ಗಳಾದ ನಂದ, ಅಭಿಜಿತ್, ನಿತ್ಯ ಅವರುಗಳು ಸಾಮಿಲ್ ಬಳಿಯಿಂದ ಪರಾರಿಯಾಗಿದ್ದಾರೆ. ಸೋಮವಾರಪೇಟೆ…

ರೂ.6 ಲಕ್ಷ ಮೌಲ್ಯದ ಬಿಲ್ವಾರ ಮರದ ನಾಟಾ, ವಾಹನ ವಶ
ಕೊಡಗು

ರೂ.6 ಲಕ್ಷ ಮೌಲ್ಯದ ಬಿಲ್ವಾರ ಮರದ ನಾಟಾ, ವಾಹನ ವಶ

September 23, 2018

ಕುಶಾಲನಗರ:  ಅಕ್ರಮವಾಗಿ ಬಿಲ್ವಾರ ಮರ ನಾಟಗಳನ್ನು ಸಾಗಾಟ ಮಾಡುತ್ತಿದ್ದಾಗ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.6 ಲಕ್ಷ ಮೌಲ್ಯದ ಮರದ ನಾಟಗಳು ಹಾಗೂ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಬಸವನಹಳ್ಳಿ ಮಾರ್ಗದಲ್ಲಿ ಮಿನಿಗೂಡ್ಸ್ ವಾಹನದಲ್ಲಿ ಬಿಲ್ವಾರ ಮರದ ನಾಟಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಮಾಲು ಮತ್ತು ವಾಹನವನ್ನು ವಶಪಡಿಸಿಕೊಂಡು ಚಾಲಕ ಮಾದಾಪಟ್ಟಣದ ನಿವಾಸಿ ರವಿ ಬಂಧಿಸಿ…

ತಹಶೀಲ್ದಾರ್ ಮಹೇಶ್ ಅಮಾನತ್ತಿಗೆ ರೈತ ಸಂಘ ಆಗ್ರಹ
ಕೊಡಗು

ತಹಶೀಲ್ದಾರ್ ಮಹೇಶ್ ಅಮಾನತ್ತಿಗೆ ರೈತ ಸಂಘ ಆಗ್ರಹ

September 21, 2018

ಕುಶಾಲನಗರ:  ಸಮೀಪದ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಮೇಲೆ ತಹಶೀಲ್ದಾರ್ ಮಹೇಶ್ ದೌರ್ಜನ್ಯ ನಡೆಸಿದ್ದು, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ರಾತ್ರಿ 11 ಗಂಟೆ ವೇಳೆಗೆ ಪರಿಹಾರ ಕೇಂದ್ರಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ್ ಅವರು ಮಲಗಿರುವ ಮಹಿಳೆಯನ್ನು ಎಬ್ಬಿಸಿ ಮೈಮುಟ್ಟಿ ಅವಾಚ್ಯಕ ಶಬ್ದಗಳಿಂದ ನಿಂದಿಸ ಹಲ್ಲೆ…

ಕೂಡಿಗೆ: ಸ್ಮಶಾನ ಜಾಗಕ್ಕೆ ಒತ್ತಾಯಿಸಿ ಶವಯಾತ್ರೆ
ಕೊಡಗು

ಕೂಡಿಗೆ: ಸ್ಮಶಾನ ಜಾಗಕ್ಕೆ ಒತ್ತಾಯಿಸಿ ಶವಯಾತ್ರೆ

September 17, 2018

ಕುಶಾಲನಗರ: ಕುಶಾಲನಗರ ಹೋಬಳಿಯ ಕೂಡಿಗೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತ ಜಾಗ ಕಲ್ಪಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಕಚೇರಿ ಮುಂದೆ ಶವಯಾತ್ರೆ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹಳೆ ಕೂಡಿಗೆಯ ನಿವಾಸಿ ತಿಮ್ಮಪ್ಪ (60) ಎಂಬುವರು ಭಾನುವಾರ ನಿಧನರಾದರು. ಅಂತ್ಯಕ್ರಿಯೆ ನೆರವೇರಿಸಲು ಸೂಕ್ತ ಸ್ಥಳ ಇಲ್ಲದೆ ತೊಂದರೆ ಉಂಟಾಯಿತು. ಕಳೆದ ಅನೇಕ ವರ್ಷಗಳಿಂದಲೂ ಸ್ಮಶಾನಕ್ಕೆ ಜಾಗ ಒದಗಿಸಬೇಕು ಎಂದು ಗ್ರಾಮ ಪಂಚಾ ಯಿತಿಗೆ ಮನವಿ ಸಲ್ಲಿಸಿದರೂ ಇದುವ ರೆಗೂ…

ಅಪಾಯದ ಅಂಚಿನಲ್ಲಿ ಕೊಡಗು-ಮೈಸೂರು ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ತೂಗು ಸೇತುವೆ
ಕೊಡಗು

ಅಪಾಯದ ಅಂಚಿನಲ್ಲಿ ಕೊಡಗು-ಮೈಸೂರು ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ತೂಗು ಸೇತುವೆ

September 16, 2018

ಕುಶಾಲನಗರ: ಸೋಮವಾರಪೇಟೆ ತಾಲೂಕಿನ ಧಾರ್ಮಿಕ ಕ್ಷೇತ್ರ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ಮತ್ತು ಹಾರಂಗಿ ನದಿಯ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಹಾನಿ ಯಾಗಿದ್ದು, ಇದರಿಂದ ಎರಡು ಜಿಲ್ಲೆಗಳ ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ಏಕೈಕ ತೂಗು ಸೇತುವೆ ಕಳಚಿ ಬಿದ್ದಂತಾಗಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಣಿವೆ ಶ್ರೀರಾಮಲಿಂಗೇ ಶ್ವರ ದೇವಸ್ಥಾನದ ಬಳಿ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು….

ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕೊಡಗು

ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

September 15, 2018

ಕುಶಾಲನಗರ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೊರ್ವ ಮೃತಪಟ್ಟಿರುವ ಘಟನೆ ಗುರುವಾರ ಸಿದ್ಧಲಿಂಗಪುರ ಬಳಿಯ ಅರಶಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಸಿದ್ದಲಿಂಗಪುರ ಗ್ರಾಮದ ಅನಂತ ಕುಮಾರ್ ಹಾಗೂ ಪದ್ಮ ದಂಪತಿಯ ಎರಡನೇ ಪುತ್ರ ಹೇಮಂತ್ (13) ಮೃತಪಟ್ಟ ದುರ್ದೈವಿ. ಈತ ಸಿದ್ಧಲಿಂಗಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಗ್ರಾಮದಲ್ಲಿ ಬಾಲಕರ ತಂಡ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗಿದ ಬಳಿಕ ವಿಸರ್ಜನೆಗಾಗಿ ಸಿದ್ಧಲಿಂಗಪುರದ ಬಿದಿರುಕಟ್ಟೆ…

ಪ್ರವಾಹದಿಂದ ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟು ಜೀವನ ಛಿದ್ರ
ಕೊಡಗು

ಪ್ರವಾಹದಿಂದ ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟು ಜೀವನ ಛಿದ್ರ

September 1, 2018

 23 ವರ್ಷದ ತಷ್ಮಾ ಮುತ್ತಪ್ಪ ಸರ್ಕಾರಿ ಕೆಲಸಕ್ಕಾಗಿ ಪರದಾಟ ಕುಶಾಲನಗರ: ಕೊಡಗಿನಲ್ಲಿ ಸುರಿದ ಮರಣ ಮಳೆಯಿಂದ ಪ್ರವಾಹ ಸಂಭವಿಸಿ ಅಲ್ಲಿನ ಜನರು ಮನೆ, ಮಠ, ಜಾನುವಾರುಗಳನ್ನು ಕಳೆದುಕೊಂಡಿದ್ದಲ್ಲದೆ, ಕೆಲವರು ತಮ್ಮ ಜೀವನವನ್ನೇ ನಾಶಮಾಡಿಕೊಂಡಿದ್ದಾರೆ. ಅವರಲ್ಲಿ ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ತಷ್ಮಾ ಒಬ್ಬರು. ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ತಷ್ಮಾ ಮುತ್ತಪ್ಪ ಅವರು ಮಡಿಕೇರಿಯಲ್ಲಿದ್ದ ಮನೆಯನ್ನು ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ. ಅವರು ತಮ್ಮ ಜೀವನವನ್ನು ಪುನರ್ ನಿರ್ಮಿಸಿಕೊಳ್ಳಲು ಸಹಾಯ ಕೋರಿ ಕೆಲಸಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆಗಸ್ಟ್ 15…

ಕಾವೇರಿ ನದಿಗೆ ಹಾರಿ ಯುವಕ ಆತ್ಮಹತ್ಯೆ
ಕೊಡಗು

ಕಾವೇರಿ ನದಿಗೆ ಹಾರಿ ಯುವಕ ಆತ್ಮಹತ್ಯೆ

August 30, 2018

ಕುಶಾಲನಗರ:  ಇಲ್ಲಿನ ಟೋಲ್ ಗೇಟ್ ಬಳಿ ತುಂಬಿ ಹರಿಯುತ್ತಿ ರುವ ಕಾವೇರಿ ನದಿಗೆ ಹಾರಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕ ರಣ ಬುಧವಾರ ನಡೆದಿದೆ. ಈತ ಸಮೀಪದ ಕೊಪ್ಪ ಗ್ರಾಮದ ನಿವಾಸಿ ಲೋಕೇಶ್ (27) ಎಂದು ತಿಳಿದು ಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದರು. ಆದರೆ ಸಂಜೆವರೆಗೂ ಯುವಕನ ಮೃತದೇಹ ಪತ್ತೆಯಾಗಿಲ್ಲ. ಯುವಕ ನದಿಗೆ ಹಾರುವ ದೃಶ ಗೇಟ್ ಬಳಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ…

ಕೊಡಗಿನ ನೆರೆಯಲ್ಲೂ ನುಂಗಣ್ಣರು…!
ಮೈಸೂರು

ಕೊಡಗಿನ ನೆರೆಯಲ್ಲೂ ನುಂಗಣ್ಣರು…!

August 23, 2018

ಕುಶಾಲನಗರ:  ಆಘಾತಕಾರಿಯಾದರೂ ಇದು ಸತ್ಯ. ಕಳೆದ ಒಂದು ವಾರದಿಂದಲೂ ಧಾರಾ ಕಾರವಾಗಿ ಸುರಿದ ಮಳೆ ಮತ್ತು ಬೆಟ್ಟ ಗುಡ್ಡಗಳ ಕುಸಿತ ದಿಂದ ಕೊಡಗಿನ ಜನತೆ ತತ್ತರಿಸಿದ್ದು, ಮೈಸೂರು ಜಿಲ್ಲೆ ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಕೊಡಗಿಗೆ ಪರಿಹಾರ ಸಾಮಗ್ರಿಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ನೆರೆ ಸಂತ್ರಸ್ತರಿಗಾಗಿ ಬಂದ ಪರಿಹಾರ ಸಾಮಗ್ರಿಗಳನ್ನು ಮುಂಬರುವ ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಈ ಸಾಮಗ್ರಿಗಳನ್ನು ವಿತರಿಸಲು ರಾಜಕಾರಣಿಗಳು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಖಾಸಗಿ…

1 2 3 4 5 7
Translate »