ಸಾಮಿಲ್ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ : ರೂ.10 ಲಕ್ಷ ಮೌಲ್ಯದ ಬೀಟೆ ನಾಟ, ವಾಹನ ವಶ
ಕೊಡಗು

ಸಾಮಿಲ್ ಮೇಲೆ ಅರಣ್ಯ ಸಿಬ್ಬಂದಿಗಳ ದಾಳಿ : ರೂ.10 ಲಕ್ಷ ಮೌಲ್ಯದ ಬೀಟೆ ನಾಟ, ವಾಹನ ವಶ

September 25, 2018

ಕುಶಾಲನಗರ: ಸೋಮವಾರಪೇಟೆ ಮೀಸಲು ಅರಣ್ಯದಿಂದ ಬೀಟೆ ಮರ ಗಳನ್ನು ಅಕ್ರಮವಾಗಿ ಕಡಿದು ವಾಹನದಲ್ಲಿ ಸಾಗಿಸುವ ಮೂಲಕ ಹಾಸನ ಜಿಲ್ಲೆಯ ಗಡಿ ಗ್ರಾಮದ ಸಾಮಿಲ್‍ನಲ್ಲಿ ತುಂಡು ಮಾಡುತ್ತಿದ್ದ ವೇಳೆ ಎರಡು ಜಿಲ್ಲೆಗಳ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.10 ಲಕ್ಷ ಮೌಲ್ಯದ ಬೀಟೆ ನಾಟ ಹಾಗೂ ವಾಹನ ವನ್ನು ವಶಪಡಿಸಿಕೊಂಡಿರುವ ಘಟನೆ ಭಾನು ವಾರ ನಡೆದಿದೆ. ಆರೋಪಿಗಳಾದ ಸೋಮ ವಾರಪೇಟೆ ಬಳಿಯ ಹಾನಗಲ್ಲು ಗ್ರಾಮದ ನಿವಾಸಿ ಗಳಾದ ನಂದ, ಅಭಿಜಿತ್, ನಿತ್ಯ ಅವರುಗಳು ಸಾಮಿಲ್ ಬಳಿಯಿಂದ ಪರಾರಿಯಾಗಿದ್ದಾರೆ.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಅರಕಲಗೂಡು ವಲಯ ಅರಣ್ಯಾಧಿಕಾರಿ ವಿನಯ ಚಂದ್ರ ಹಾಗೂ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಪಿ.ಪಿ.ಮಹಾದೇವನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು. ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮವಾದ ಅರಕಲ ಗೂಡು ತಾಲೂಕಿನ ಹೆತ್ತಗೌಡನಹಳ್ಳಿ ಶ್ರೀಕಂಠೇಶ್ವರ ಸಾಮಿಲ್ ಮೇಲೆ ದಾಳಿ ಮಾಡಿ ಅಕ್ರಮವಾಗಿ ಕುಯ್ಯುತ್ತಿದ್ದ ಸುಮಾರು 112 ತುಂಡುಗಳನ್ನು ವಶಕ್ಕೆ ಪಡೆದರು. ಅದೇ ರೀತಿ ಆರೋಪಿಗಳು ಬಿಟ್ಟು ಪರಾರಿಯಾದ ಸಿಪ್ಟ್ ಡಿಸೈರ್ ಕಾರು (ಕೆಎ 12,ಎನ್.6250) ವಶಪಡಿಸಿಕೊಂಡಿದ್ದಾರೆ. ಈ ಕುರಿತು ಅರಕಲಗೂಡು ವಲಯ ಅರಣ್ಯಾಧಿಕಾರಿಗಳು ಅರಣ್ಯ ಕಾಯ್ದೆಯಡಿ ಸಾಮಿಲ್ ಮಾಲೀಕ ಯೋಗೇಶ್ ಹಾಗೂ ಹಾನಗಲ್ಲು ಗ್ರಾಮದ ಮೂವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ಗಳ ಪತ್ತೆಗೆ ಅರಣ್ಯ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ಸುಭಾಷ್, ಪ್ರಮೋದ್ ಚಾಲಕ ಚಂದ್ರನ್ ಪಾಲ್ಗೊಂಡಿದ್ದರು.

Translate »