ಕ್ರಿಕೆಟ್: ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪ್ರಥಮ
ಮೈಸೂರು

ಕ್ರಿಕೆಟ್: ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪ್ರಥಮ

September 25, 2018

ಸೋಮವಾರಪೇಟೆ: ರೋಟರಿ ಹಿಲ್ಸ್ ಆಶ್ರಯದಲ್ಲಿ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ ರೋಟರಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಯನ್ನು ಅತಿಥೇಯ ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪಡೆಯಿತು. ರೋಟರಿ ಶನಿವಾರಸಂತೆ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಜೇತ ತಂಡ, 8 ಓವರ್‍ಗಳಲ್ಲಿ 72 ರನ್‍ಗಳನ್ನು ಪೇರಿಸಿತು. ಗುರಿ ಬೆನ್ನ ತ್ತಿದ ಶನಿವಾರಸಂತೆ ತಂಡ 8 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 60 ರನ್‍ಗಳನ್ನು ಹೊಡೆದು ಸೋಲೊಪ್ಪಿ ಕೊಂಡಿತು. ವಿಜೇತ ತಂಡದ ಅಭಿನಂದನ್ ಅತಿ ಹೆಚ್ಚು 18 ರನ್ ಗಳಿಸಿದರೆ, ಶನಿವಾರಸಂತೆ ತಂಡದ ಸುರೇಶ್ 29 ರನ್ ಹೊಡೆದರು.
ಮೊದಲ ಸೆಮಿಫೈನಲ್‍ನಲ್ಲಿ ಸೋಮ ವಾರಪೇಟೆ ರೋಟರಿ, ಕುಶಾಲನಗರ ರೋಟರಿ ತಂಡವನ್ನು ಸೋಲಿಸಿ ಫೈನಲ್ ತಲುಪಿದರೆ, ಎರಡನೆ ಸೆಮೀಸ್‍ನಲ್ಲಿ ಶನಿವಾರಸಂತೆ ರೋಟರಿ ತಂಡ, ಹುಣ ಸೂರು ರೋಟರಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಶನಿವಾರಸಂತೆ ಸಾಗರ್ ಪಡೆದರು. ಕುಶಾಲನಗರ ಹರೀಶ್ ಉತ್ತಮ ಬೌಲರ್ ಆಗಿ ಹೊರಹೊಮ್ಮಿದರು. ಉತ್ತಮ ಕ್ಯಾಚರ್ ಪ್ರಶಸ್ತಿಗೆ ಸೋಮವಾರಪೇಟೆ ಅಭಿನಂದನ್ ಭಾಜನರಾದರು. ತೀರ್ಪುಗಾರ ರಾಗಿ ಶಿವಪ್ರಸಾದ್, ಅಬ್ದುಲ್ ರಶೀದ್ ಕಾರ್ಯನಿರ್ವಹಿಸಿದರು. ಮಾ.ಅಶಿತೋಷ್ ವೀಕ್ಷಕ ವಿವರಣೆ ನೀಡಿದರು. ರೋಟರಿ ಮಹಿಳಾ ಸದಸ್ಯರಿಗೆ ಅಯೋಜಿಸಿದ್ದ ಕೀಡಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ರಾಜ್ಯಪಾಲ ರವಿ ಅಪ್ಪಾಜಿ, ಜಿಲ್ಲಾ ಸಹಾ ಯಕ ರಾಜ್ಯಪಾಲ ಧರ್ಮಾಪುರ ನಾರಾ ಯಣ, ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಪಿ.ಕೆ.ರವಿ, ವಲಯ ಕಾರ್ಯದರ್ಶಿ ಕ್ರಿಸ್ವೆಲ್ ಕೋಟ್ಸ್, ವಲಯ ಸಂಯೋಜಕ ಪ್ರಕಾಶ್ ಕುಮಾರ್, ಕಾರ್ಯದರ್ಶಿ ಪಿ.ನಾಗೇಶ್, ಕ್ರೀಡಾಧ್ಯಕ್ಷ ಉದಯ್ ಉದ್ದೂರಯ್ಯ ಇದ್ದರು.

ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ 25 ಸಂತ್ರಸ್ತರನ್ನು ರಕ್ಷಿಸಿ, ಸಂತ್ರಸ್ತರ ಕೇಂದ್ರಕ್ಕೆ ಕರೆತಂದ ರೋಟರಿ ಸದಸ್ಯರುಗಳಾದ ಬಗ್ಗನ ಅಭಿನಂದನ್, ಬಿ.ಡಿ. ಸಂದೀಪ್, ದೇವದಾಸ್ ಅವರುಗಳನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.

Translate »