ಸಾಂಪ್ರದಾಯಕ ದಸರಾಗೆ ನಿರ್ಧಾರ
ಕೊಡಗು

ಸಾಂಪ್ರದಾಯಕ ದಸರಾಗೆ ನಿರ್ಧಾರ

September 25, 2018

ಗೋಣಿಕೊಪ್ಪಲು: ದೇವಿ ಚಾಮುಂಡೇಶ್ವರಿ ಪೂಜೆಯೊಂದಿಗೆ ಸಾಂಪ್ರದಾಯಿಕವಾಗಿ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರವನ್ನು ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಹಳೆಯ ಕಟ್ಟಡ ಸಭಾಂಗಣದಲ್ಲಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಕೊಡಗಿನಲ್ಲಿ ಉಂಟಾದ ಭೂಕುಸಿತದಿಂದಾಗಿ ದಸರಾ ಹೇಗೆ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆಸಲಾಯಿತು.

ಸರ್ಕಾರ ನೀಡುವ ಅನುದಾನವನ್ನು ಬಳಸಿಕೊಂಡು ದಸರಾ ಆಚರಿಸುವಂತೆ ನಿರ್ಧರಿಸಲಾಯಿತು. ಚಾಮುಂಡೇಶ್ವರಿ ಪೂಜೆ ಸಾಂಪ್ರದಾಯಿಕವಾಗಿ ನಡೆಸಬೇಕಿದೆ. ಇದರಂತೆ ನಡೆಯಲಿದೆ. ಆದರೆ, ಜಿಲ್ಲೆಯಲ್ಲಿ ಸಾವು-ನೋವು ನಡೆದಿರುವುದ ರಿಂದ ಸರ್ಕಾರದ ಅನುದಾನ ಘೋಷಣೆಯಾದ ನಂತರ ಪ್ರತ್ಯೇಕ ಸಭೆ ನಡೆಸಿ ತೀರ್ಮಾನಿಸುವಂತೆ ನಿರ್ಧರಿಸಲಾಯಿತು.

ದಸರಾಕ್ಕೆ ಬರುವ ಅನುದಾನ ಒಂದಷ್ಟು ಭಾಗವನ್ನು ಜಿಲ್ಲೆಯ ಸಂತ್ರಸ್ತರ ನಿಧಿಗೆ ನೀಡುವಂತೆ ಸಲಹೆಗಳು ಬಂದವು. ಅನುದಾನ ಕಡಿಮೆ ಬಂದರೆ ಶೋಭಾಯಾತ್ರೆ ನಡೆಸುವುದು ಕೂಡ ಕಷ್ಟ. ಯಾರನ್ನೂ ಕೂಡ ಹಣ ಕೇಳಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಕಡಿಮೆ ಹಣ ಬಂದರೆ ಶೋಭಾಯಾತ್ರೆಗೆ ಉಪ ಸಮಿತಿಗಳ ತೇರು ನಿರ್ಮಿಸಲು ಆರ್ಥಿಕ ಮುಗ್ಗಟ್ಟು ಎದುರಾಗ ಲಿದೆ. ಇದರಿಂದಾಗಿ ಶೀಘ್ರದಲ್ಲಿಯೇ ತೇರು ಅನಾವರಣ ಬೇಕೆ ಎಂಬ ಬಗ್ಗೆ ಸರ್ಕಾರದ ಅನುದಾನ ಘೋಷಣೆಯಾದಾಗ ಸಭೆ ನಡೆಸಿ ನಿರ್ಧರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಕಳೆದ ದಸರಾ ಆಚರಣೆಯಲ್ಲಿ ತೀರ್ಪುಗಾರರು ಎಲ್ಲಾ ಮಂಟಪ ಗಳನ್ನು ವೀಕ್ಷಿಸದೆ ತೀರ್ಪು ನೀಡಿದ ಬಗ್ಗೆ ಉಪಸಮಿತಿ ಗಳ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಮುಂದೆ ನಡೆಯಬಾರದು. ಲಕ್ಷಾಂತರ ಖರ್ಚು ಮಾಡಿ ಅನಾವರಣ ಗೊಳಿಸಿದ ಮಂಟಪಗಳನ್ನು ವೀಕ್ಷಿಸದೆ ತೀರ್ಪು ನೀಡಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದವು. ಕಳೆದ ಬಾರಿಯ ದಸರಾಕ್ಕೆ ಒಟ್ಟು 25.26 ಲಕ್ಷ ಖರ್ಚಾಗಿರುವ ಬಗ್ಗೆ ಲೆಕ್ಕ ಪತ್ರ ನೀಡಲಾಯಿತು. ಉಪ ಸಮಿತಿಗಳಿಗೆ ತೇರು ನಿರ್ಮಾಣಕ್ಕೆ ತಲಾ 50 ಸಾವಿರ ಹಾಗೂ ಬಹುಮಾವನ್ನು ವಿತರಿಸ ಲಾಯಿತು. ಪ್ರ. ಕಾರ್ಯದರ್ಶಿ ಚೇಂದೀರ ಪ್ರಭಾವತಿ ಕಳೆದ ಬಾರಿಯ ವರದಿ ವಾಚಿಸಿದರು. ಸಭೆಯಲ್ಲಿ ಕಾರ್ಯಧ್ಯಕ್ಷ ಬಿ. ಎನ್. ಪ್ರಕಾಶ್, ಖಜಾಂಜಿ ಧ್ಯಾನ್ ಸುಬ್ಬಯ್ಯ, ಸ್ಥಳೀಯ ಗ್ರಾ. ಪಂ. ಅಧ್ಯಕ್ಷೆ ಸೆಲ್ವಿ, ಹಿರಿಯರುಗಳಾದ ಬಾಲಕೃಷ್ಣರೈ, ರಾಮಾಚಾರ್ ಉಪಸ್ಥಿತರಿದ್ದರು.

Translate »