ವಲ್ರ್ಡ್ ಹೆರಿಟೇಜ್‍ಗೆ ಮೈಸೂರು ದಸರಾ ಸೇರಿಸಲು ಚಿಂತನೆ
ಮೈಸೂರು

ವಲ್ರ್ಡ್ ಹೆರಿಟೇಜ್‍ಗೆ ಮೈಸೂರು ದಸರಾ ಸೇರಿಸಲು ಚಿಂತನೆ

January 4, 2022

ಮೈಸೂರು,ಜ.3(ಆರ್‍ಕೆ)-ವಲ್ರ್ಡ್ ಹೆರಿಟೇಜ್‍ಗೆ ಐತಿಹಾಸಿಕ ಮೈಸೂರು ದಸರಾವನ್ನು ಸೇರಿಸಲು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಪಾರಂಪರಿಕ ಇಲಾಖೆ ಆಯುಕ್ತರಾದ ಬಿ.ಆರ್.ಪೂರ್ಣಿಮಾ, ಯುನೆಸ್ಕೋ ದವರು ಪಶ್ಚಿಮಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆ ನಾಡಹಬ್ಬವನ್ನು ವಿಶ್ವ ಪಾರಂಪರಿಕ ತಾಣ (Woಡಿಟಜ ಊeಡಿiಣಚಿge Siಣe) ಎಂದು ಗುರ್ತಿಸಿರುವು ದರಿಂದ ಮೈಸೂರಿನ ದಸರಾ ಹಬ್ಬವನ್ನೂ ಆ ಸಾಲಿಗೆ ಸೇರಿಸಲು ಚಿಂತಿಸಲಾಗಿದೆ ಎಂದರು.

ಕರ್ನಾಟಕದ ಹಂಪಿ, ಪಟ್ಟದ ಕಲ್ಲು ಇತಿಹಾಸ ಪ್ರಸಿದ್ಧ ಸ್ಥಳ ವನ್ನು ವಿಶ್ವ ಪಾರಂಪರಿಕ ಪ್ರದೇಶ ಎಂದು ಗುರ್ತಿಸಲಾಗಿದ್ದು, ಇದೀಗ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನೂ ಆ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ ಅನು ಮತಿ ಪಡೆದು ಮೈಸೂರು ದಸರಾ ನಾಡಹಬ್ಬದ ಹಿನ್ನೆಲೆ, ಇತಿಹಾಸ ಹಾಗೂ ಫೋಟೋ, ವಿಡಿಯೋ ಗಳೊಂದಿಗೆ ಡ್ರಾಫ್ಟ್ ಸಿದ್ಧಪಡಿಸಿ ಮತ್ತೆ ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾಗೆ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ನಂತರ ಪ್ರಸ್ತಾವನೆಯನ್ನು ಯುನೆಸ್ಕೋಗೆ ಸಲ್ಲಿಸ ಲಾಗುತ್ತದೆ. ಅವರ 8 ಅಂಶಗಳ ಪೈಕಿ ಕನಿಷ್ಠ 2 ತೃಪ್ತಿಕರವಾದಲ್ಲಿ ಮಾತ್ರ ವಿಶ್ವ ಪಾರಂಪರಿಕ ತಾಣ ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮೈಸೂರು ದಸರಾ ನಾಡಹಬ್ಬದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲು ಪ್ರಕ್ರಿಯೆ ಆರಂಭಿü ಸಿದೆ ಎಂದು ಆಯುಕ್ತರು ತಿಳಿಸಿದರು.

ಈ ಹಿಂದೆ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಆಳ್ವಿಕೆ, ಬೇಲೂರು-ಹಳೇಬೀಡಿನ ಹೊಯ್ಸಳರ ಆಳ್ವಿಕೆ, ಬೀದರ್-ಗುಲ್ಬರ್ಗದ ದೆಹಲಿ ಸುಲ್ತಾನರ ಆಳ್ವಿಕೆಯನ್ನೂ ವಿಶ್ವ ಪಾರಂಪರಿಕ ಪ್ರದೇಶ ಎಂದು ಪರಿಗಣಿಸಲು ಇಲಾಖೆಯಿಂದ ಪ್ರಸ್ತಾ ವನೆ ಸಲ್ಲಿಸಲಾಗಿತ್ತಾದರೂ, ಈವರೆಗೂ ಸಾಕಾರ ವಾಗಿಲ್ಲ ಎಂಬುದಿಲ್ಲಿ ಗಮನಾರ್ಹ.

Translate »