ಕೇಂದ್ರದ ರೆಡ್ ಜೋನ್ ಪಟ್ಟಿಯಲ್ಲಿರುವ ಬೆಂಗಳೂರು ಲಾಕ್‍ಡೌನ್!
News

ಕೇಂದ್ರದ ರೆಡ್ ಜೋನ್ ಪಟ್ಟಿಯಲ್ಲಿರುವ ಬೆಂಗಳೂರು ಲಾಕ್‍ಡೌನ್!

January 3, 2022

ಬೆಂಗಳೂರು, ಜ.2- ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗ ಳೂರಿನಲ್ಲಿ ಕೋವಿಡ್ ಹಾಗೂ ಒಮಿಕ್ರಾನ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸಲು ಕಠಿಣ ನಿಯಮಗಳ ಜೊತೆಗೆ ಲಾಕ್‍ಡೌನ್‍ನಂತಹ ಕ್ರಮಗಳನ್ನು ಕೈಗೊಳ್ಳು ವಂತಹ ಅನಿವಾರ್ಯತೆಯನ್ನು ತಳ್ಳಿಹಾಕಲಾಗದು ಎಂದರು. ಬೆಂಗಳೂರಿನಲ್ಲಿ ನಿನ್ನೆ 850 ಕೋವಿಡ್ ಪ್ರಕರಣಗಳು ದಾಖ ಲಾಗಿವೆ. ಇಂದು 923 ಪ್ರಕರಣಗಳು ಕಂಡುಬಂದಿವೆ. ವಿದೇಶ ದಿಂದ ಆಗಮಿಸಿದ್ದ 6 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಒಮಿಕ್ರಾನ್ ಶಂಕೆ ಹಿನ್ನೆಲೆಯಲ್ಲಿ ಅವರ ಸ್ಯಾಂಪಲ್‍ಗಳನ್ನು ಜಿನೋ ಮಿಕ್ ಸ್ವೀಕೆನ್ಸಿಗೆ ರವಾನಿಸಲಾಗಿದೆ ಎಂದರು.

ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಕೇಸ್‍ಗಳು ಉಲ್ಬಣಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಪಟ್ಟಿ ಮಾಡಿ ಕಳುಹಿಸಿರುವ ರೆಡ್ ಜೋನ್ ನಗರಗಳಲ್ಲಿ ಬೆಂಗಳೂರು ಕೂಡಾ ಇದೆ ಎಂದರು. ಕೊಂಚ ನಿರ್ಲಕ್ಷ್ಯದಿಂದಾಗಿ ರಾಜ್ಯ ಹಾಗೂ ದೇಶದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಆಗ ಸಂಭವಿಸಿದ್ದ ಸಾವು-ನೋವಿನ ಭೀಕರತೆ ಬಗ್ಗೆ ಎಲ್ಲರಗೂ ಅರಿವಿದೆ. ಹೀಗಾಗಿ ನಾವು ಈಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಬೆಂಗಳೂರಿನಲ್ಲಿ ಹೈ ಅಲರ್ಟ್ ಮಾಡಬೇಕಿದೆ. ಕಠಿಣ ನಿಯಮಗಳನ್ನು ಜಾರಿಗೆ ತಂದರೆ, ಜನರ ಸಾವನ್ನು ಹಾಗೂ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಹುದಾಗಿದೆ. ಸರ್ಕಾರದ ನಿಯಮಗಳನ್ನು ಜನರು ಪಾಲಿಸುವ ಮೂಲಕ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯಂತೆ ಬೆಂಗಳೂರಿನಲ್ಲಿ ಲಾಕ್‍ಡೌನ್ ಜಾರಿ ಮಾಡುವ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಹೇಳಿದರು. ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು, ತಜ್ಞರು ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರ್.ಅಶೋಕ್ ಹೇಳಿದರು.

Translate »