ಯಶಸ್ವಿ ದಸರಾ ಆಚರಣೆ: ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಲ್‍ಖುಷ್
ಮೈಸೂರು

ಯಶಸ್ವಿ ದಸರಾ ಆಚರಣೆ: ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಲ್‍ಖುಷ್

October 10, 2019

ಮೈಸೂರು,ಅ.9(ಆರ್‍ಕೆ)- ಈ ಬಾರಿ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಿದ್ದರಿಂದ ನಿಟ್ಟುಸಿರು ಬಿಟ್ಟಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಿರೀಕ್ಷೆಗೂ ಮೀರಿ ಯಶಸ್ವಿ ಉತ್ಸವ ಆಚರಣೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂ ಗಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಿಗದಿತ ವೇಳೆಗೆ ಎಲ್ಲಾ ಕಾರ್ಯಕ್ರಮಗಳೂ ನಡೆದು, ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳೂ ಸಂಭವಿಸದೆ ವಿಶ್ವ ಖ್ಯಾತಿಯ ವಿಜಯದಶಮಿ ಮೆರವಣಿಗೆ ಯಶಸ್ವಿಯಾಗಿ ನಡೆದಿದೆ ಎಂದರು.

ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಪೊರೇಟರ್‍ಗಳು ಸೇರಿದಂತೆ ಎಲ್ಲಾ ಜನ ಪ್ರತಿನಿಧಿ ಗಳು, ಮೇಯರ್, ಉಪಮೇಯರ್, ಮಾಜಿ ಮೇಯರ್ ಗಳು, ವಿವಿಧ ಉಪಸಮಿತಿ ಪದಾಧಿಕಾರಿಗಳು, ಜಿಲ್ಲಾಧಿ ಕಾರಿ, ಪೊಲೀಸ್ ಆಯುಕ್ತರು, ಪಾಲಿಕೆ-ಮುಡಾ ಆಯುಕ್ತರು ಹೀಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಸರಾ ಉತ್ಸವದಲ್ಲಿ ಹಗಲಿರುಳೂ ಶ್ರಮಿಸಿದ್ದಾರೆ ಎಂದು ಸೋಮಣ್ಣ ಸ್ಮರಿಸಿದರು.

ಎಲ್ಲಾ ನಾಗರಿಕ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಾಧ್ಯಮದವರು ಸಂಪೂರ್ಣ ಸಹಕಾರ ನೀಡಿದ್ದರಿಂದಾಗಿ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ನೆರವೇರಲು ಸಾಧ್ಯವಾಯಿತು ಎಂದು ನುಡಿದರು.

ಪಾಸ್, ಟಿಕೆಟ್ ಗೊಂದಲ, ಕೆಲ ಕಾರ್ಯಕ್ರಮ ಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗಿದ್ದನ್ನು ಹೊರತು ಪಡಿಸಿ ಉಳಿದಂತೆ ಶಾಂತಿಯುತವಾಗಿ ನಾಡಹಬ್ಬ ಮುಗಿದಿದೆ. ಮುಂದಿನ ವರ್ಷದಿಂದ ಈ ಲೋಪ ಗಳಾಗದಂತೆ ಎಚ್ಚರ ವಹಿಸಿ, ವಿಭಿನ್ನ ರೀತಿಯಲ್ಲಿ ದಸರಾ ಆಚರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಇದುವರೆಗೆ ದಸರಾ ಸಚಿವನಾಗಿದ್ದೆ. ಇಂದಿನಿಂದ ಕ್ಯಾಬಿನೆಟ್ ಮಿನಿಸ್ಟರ್ ಆಗಿ ನನ್ನ ವಸತಿ ಖಾತೆಯತ್ತ ಗಮನ ಹರಿಸುತ್ತೇನೆ. ಉತ್ತರ ಕರ್ನಾಟಕದ ನೆರೆ ಹಾವಳಿಯಿಂದ ಬೆಳೆ, ಮನೆ ಹಾನಿಗೊಳಗಾದವರ ಸಂಕಷ್ಟ ಕೇಳಿ ಪರಿ ಹಾರ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.

ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಮುಖ್ಯಮಂತ್ರಿ ಗಳು ಯಶಸ್ವಿ ದಸರಾ ಬಗ್ಗೆ ಹರ್ಷ ವ್ಯಕ್ತಪಡಿಸಿ, ಮುಂದಿನ 3 ವರ್ಷವೂ ನೀವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ದಸರಾ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸೋಮಣ್ಣ ಅವರಿಗೆ ಹೇಳಿದ್ದಾರೆ ಎಂದು ಹೇಳುವ ಮೂಲಕ ಮುಂದೆಯೂ ಸೋಮಣ್ಣ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಗಿರುತ್ತಾರೆ ಎಂಬುದನ್ನು ಪರೋಕ್ಷವಾಗಿ ಖಚಿತ ಪಡಿಸಿದರು. ಶಾಸಕ ನಾಗೇಂದ್ರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅ.26ರಂದು ದಸರಾ ಖರ್ಚು ವೆಚ್ಚದ ಲೆಕ್ಕ ಕೊಡುವೆ
ಮೈಸೂರು,ಅ.9(ಆರ್‍ಕೆ)- ಅಕ್ಟೋಬರ್ 26ರಂದು 2019ರ ದಸರಾ ಮಹೋತ್ಸವಕ್ಕೆ ಮಾಡಿದ ಖರ್ಚು -ವೆಚ್ಚಗಳ ಲೆಕ್ಕ ನೀಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದೀಪಾಲಂಕಾರ, ಯುವ ಸಂಭ್ರಮ, ಪಂಜಿನ ಕವಾಯತು ಪ್ರದರ್ಶನ, ಕ್ರೀಡೆ, ಯೋಗ, ಪ್ರಚಾರ ಸೇರಿದಂತೆ ದಸರಾ ಹಬ್ಬಕ್ಕೆ ಯಾವ ಯಾವ ಬಾಬತ್ತಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದನ್ನು ಐಟಂವಾರು ಲೆಕ್ಕ ಕೊಡುತ್ತೇವೆ ಎಂದ ಅವರು, ಎಲ್ಲಿಯೂ ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡಿಲ್ಲ. ಎಲ್ಲದಕ್ಕೂ ಲೆಕ್ಕವಿದೆ ಎಂದರು.

ಗೋಲ್ಡ್ ಕಾರ್ಡ್, ಪಾಸ್, ಟಿಕೆಟ್‍ಗಳ ಮುದ್ರಣ, ಮಾರಾಟದ ಬಗ್ಗೆಯೂ ನಿಖರ ಮಾಹಿತಿಗಳಿವೆ. ಅಕ್ಟೋ ಬರ್ 26ರಂದು ಸುದ್ದಿಗೋಷ್ಠಿ ಕರೆದು ಎಲ್ಲದರ ಬಗ್ಗೆ ಲೆಕ್ಕ ಕೊಡುತ್ತೇನೆ. ಅನಗತ್ಯವಾಗಿ ಹಣ ಖರ್ಚು ಮಾಡಿಲ್ಲ, ಉಪಸಮಿತಿಗಳ ಸದಸ್ಯರು ಅವರೇ ಕೈಯ್ಯಿಂದ 5, 10 ಸಾವಿರ ಖರ್ಚು ಮಾಡಿ ದಸರಾ ಯಶಸ್ಸಿಗೆ ಕೆಲಸ ಮಾಡಿದ್ದಾರೆಯೇ ಹೊರತು, ದುಂದು ವೆಚ್ಚಕ್ಕೆ ಅವ ಕಾಶ ನೀಡಿಲ್ಲ ಎಂದು ಸಚಿವರು ನುಡಿದರು.

ಪಾಸ್ ಪದ್ಧತಿಯನ್ನು ಸಂಪೂರ್ಣವಾಗಿ ರದ್ದು ಮಾಡಲು ಸಾಧ್ಯವಾಗುವುದಿಲ್ಲ, ಗೊಂದಲಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಬಹುದು. ಯಾವುದೇ ಸರ್ಕಾರ ಬಂದಾಗ ಸಹಜವಾಗಿ ಆಪ್ತರಿಗೆ ಪಾಸ್ ನೀಡುವುದು ಅನಿವಾರ್ಯ ವಾಗಬಹುದು, ಹಾಗಂತ ನಾವು ಬೇಕಾಬಿಟ್ಟಿ ಹಂಚಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಮುಂದಿನ ವರ್ಷದಿಂದ ಸರ್ಕಾರದ ಅನುದಾನದ ಜೊತೆಗೆ ಖಾಸಗಿ ಸಹಭಾಗಿತ್ವ ಪಡೆದು ವಿನೂತನವಾಗಿ ದಸರಾ ಆಚರಿಸಲು ಚಿಂತನೆ ನಡೆಸಲಾಗಿದೆ. ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಯೋಚಿಸಲಾಗುತ್ತಿದೆ ಎಂದ ಸೋಮಣ್ಣ, ಮುಂದೆ ಚಾಮುಂಡಿಬೆಟ್ಟಕ್ಕೆ ಕಾಯಕಲ್ಪದಂತಹ ಹಲವು ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ಎಂದರು. ಅ.26ರ ನಂತರ ದಸರಾ ಅನುದಾನ ಉಳಿದಲ್ಲಿ ಆ ಹಣವನ್ನು ನೆರೆ ಸಂತ್ರಸ್ತರ ಸಹಾಯಕ್ಕೆ ಬಳಸುವ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದರು. ಈ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ದಸರಾದಲ್ಲಿ ಕಾನ್ಸ್‍ಟೇಬಲ್‍ನಿಂದ ಆಯುಕ್ತ ರವರೆಗೂ ಪೊಲೀಸರು ಉತ್ತಮವಾಗಿ ಕೆಲಸ ಮಾಡಿ ದ್ದಾರೆ. ಚಾಮುಂಡಿಬೆಟ್ಟದಲ್ಲಿ ನಡೆದ ಘಟನೆ ಬಗ್ಗೆ ತಾವು ಈಗಾಗಲೇ ಡಿಸಿಪಿ ಹಾಗೂ ಪೊಲೀಸ್ ಆಯು ಕ್ತರ ಕ್ಷಮೆ ಕೇಳಿದ್ದೇನೆ. ನಮ್ಮ ಉದ್ದೇಶ ದಸರಾ ಹಬ್ಬವನ್ನು ಯಶಸ್ವಿಗೊಳಿಸಬೇಕೆಂಬುದೇ ಆಗಿತ್ತು ಎಂದರು.

Translate »