ಮೈಸೂರಿನಲ್ಲಿ ನಾಳೆಯಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ
ಮೈಸೂರು

ಮೈಸೂರಿನಲ್ಲಿ ನಾಳೆಯಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ

October 10, 2019

ಮೈಸೂರು, ಅ.9(ಪಿಎಂ)- ವೈದ್ಯ ವಿಜ್ಞಾನದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಸಾಧನೆ ಹಾಗೂ ಸಂಶೋಧನೆಗಳನ್ನು ವಿನಿಮಯ ಮಾಡಿಕೊಳ್ಳುವ ಅಂತಾರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಕಾಲೇಜಿನ (ಜಾಗತಿಕ ಸಂಘಟನೆ) ಭಾರತ ವಿಭಾಗದ 65ನೇ ವಾರ್ಷಿಕ ಸಮ್ಮೇಳನ ಮೈಸೂರಿನಲ್ಲಿ ಅ.11ರಿಂದ 13ರವ ರೆಗೆ 3 ದಿನಗಳು ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಬಿ.ವಸಂತಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಕಾಲೇಜು (ಇಂಟರ್‍ನ್ಯಾಷನಲ್ ಕಾಲೇಜ್ ಆಫ್ ಸರ್ಜನ್ಸ್) 112 ದೇಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿ ಹೊಂದಿದೆ. ಭಾರತ ವಿಭಾಗದ 65ನೇ ವಾರ್ಷಿಕ ಸಮ್ಮೇ ಳನ ಮೈಸೂರಿನ ಹೋಟೆಲ್ ರಿಯೋ ಮೆರಿಡಿಯನ್‍ನಲ್ಲಿ ನಡೆಯಲಿದೆ ಎಂದರು.

1942ರಲ್ಲಿ ಪ್ರಾರಂಭವಾದ ಭಾರತದ ವಿಭಾಗ ವಿಶ್ವದ ಎರಡನೇ ಅತಿ ದೊಡ್ಡ ಸಂಘ ಟನೆ. ಶಸ್ತ್ರಚಿಕಿತ್ಸೆ ಸುಧಾರಣೆ ಹಾಗೂ ಪ್ರಗತಿಯ ಲಾಭಗಳನ್ನು ಜನಸಾಮಾನ್ಯರಿಗೆ ತಲು ಪಿಸಲು ಯುವ ಶಸ್ತ್ರಚಿಕಿತ್ಸಕರಿಗೆ ಅಗತ್ಯ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಇಂತಹ ಸಮ್ಮೇಳನ ಮಹತ್ವದ ಪಾತ್ರ ವಹಿಸಲಿದೆ. ಒಂದು ವರ್ಷ ಉತ್ತರ ಭಾರತದಲ್ಲಿ ಹಾಗೂ ಮತ್ತೊಂದು ವರ್ಷ ದಕ್ಷಿಣ ಭಾರತದಲ್ಲಿ ಈ ಸಮ್ಮೇಳನ ನಡೆಸಿಕೊಂಡು ಬರಲಾಗುತ್ತಿದೆ. 1999ರಲ್ಲೂ ಮೈಸೂರು ಈ ಸಮ್ಮೇಳನಕ್ಕೆ ಆತಿಥ್ಯ ನೀಡಿತ್ತು ಎಂದರು.

ಶಸ್ತ್ರಚಿಕಿತ್ಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸೇರಿದಂತೆ ಸುಮಾರು 400 ಮಂದಿ ಸಮ್ಮೇಳನಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದಾರೆ. 40 ಮಂದಿ ಪರಿಣಿತ ಶಸ್ತ್ರಚಿಕಿತ್ಸಕರು ವಿಷಯ ಕುರಿತಂತೆ ತಮ್ಮ ಅನುಭವ ಹಾಗೂ ಸಾಧನೆ ಹಂಚಿಕೊಳ್ಳಲಿದ್ದು, ಸುಮಾರು 60 ಮಂದಿ ಯುವ ಶಸ್ತ್ರಚಿಕಿತ್ಸಕರು ತಮ್ಮ ಪ್ರಬಂಧ ಮಂಡಿಸಲಿದ್ದಾರೆ ಎಂದು ವಿವರಿಸಿದರು. ಶಸ್ತ್ರಚಿಕಿತ್ಸಕ ವೈದ್ಯರಾದ ಡಾ. ಹೆಚ್.ಆರ್.ಸಂಜಯ್, ಡಾ. ಚಂದನ್ ಸುದ್ದಿಗೋಷ್ಠಿಯಲ್ಲಿದ್ದರು.

Translate »