ಶಿಕ್ಷಿತರ ಸಂಖ್ಯೆ ಹೆಚ್ಚಿದರೂ ಮಾನವೀಯ ಮೌಲ್ಯಗಳ ಕೊರತೆ ಇದೆ
ಮೈಸೂರು

ಶಿಕ್ಷಿತರ ಸಂಖ್ಯೆ ಹೆಚ್ಚಿದರೂ ಮಾನವೀಯ ಮೌಲ್ಯಗಳ ಕೊರತೆ ಇದೆ

January 4, 2022

ಮೈಸೂರು, ಜ.3(ಎಸ್‍ಬಿಡಿ)- ಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ವೈಚಾರಿಕತೆ ಏಕೆ ಬೆಳೆಯಲಿಲ್ಲವೆಂದು ಎಲ್ಲರೂ ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅವರ ಅಭಿನಂದನಾ ಸಮಾರಂಭ ದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಶೇ.18ರಷ್ಟಿದ್ದ ಅಕ್ಷರಸ್ಥರ ಪ್ರಮಾಣ ಪ್ರಸ್ತುತ ಶೇ.78ಕ್ಕೆ ಹೆಚ್ಚಿದೆ. ಹೀಗೆ ಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದ್ದರೂ ವೈಚಾರಿಕತೆ ಹಾಗೂ ಮಾನವೀಯ ಮೌಲ್ಯಗಳ ಕೊರತೆ ಇದೆ. ಉನ್ನತ ಶಿಕ್ಷಣ ಪಡೆದವರೇ ಜಾತಿ ವಾದಿಗಳಾದರೆ ಸಮಾಜದಲ್ಲಿ ಯಾವ ರೀತಿಯ ಬದಲಾವಣೆ ತರಲು ಸಾಧ್ಯ?. ಇದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಬುದ್ಧ, ಬಸವರ ಆಶಯ ಇನ್ನೂ ಸಾಕಾರವಾಗಿಲ್ಲ. ಜ್ಞಾನ ವಿಕಾಸವಾಗುವ ಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಇದರ ಬಗ್ಗೆ ಎಲ್ಲಾ ಶಿಕ್ಷಿತರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಐತಿಹಾಸಿಕ ಅನ್ಯಾಯ: ಇಂದಿನ ಸಾಮಾ ಜಿಕ, ಆರ್ಥಿಕ, ರಾಜಕೀಯ ಅಸಮಾ ನತೆಗೆ ಐತಿಹಾಸಿಕ ಅನ್ಯಾಯವೇ ಕಾರಣ. ಬಹುಸಂಖ್ಯಾತ ಜನ ಅಕ್ಷರ ಸಂಸ್ಕøತಿ ಯಿಂದ ವಂಚಿತರಾಗಿದ್ದರು. ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರು, ದಲಿತರು, ಅಸ್ಪøಶ್ಯರು ನೂರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತರಾಗಿದ್ದರು. ಇದರಿಂದ ಸಾಮಾ ಜಿಕ ಸಮಾನತೆ ಹಾಗೂ ಕಾಯಕ ಸಮಾಜದ ಬದುಕು ಹಸನಾಗಲು ಸಾಧ್ಯವಾಗಲಿಲ್ಲ. `ವ್ಯಾಪಾರಕ್ಕೆಂದು ಬಂದ ಮೊಗಲರು 600 ವರ್ಷ ಹಾಗೂ ಬ್ರಿಟಿಷರು 200 ವರ್ಷ ದೇಶವನ್ನು ಆಳಿದರು. ದೇಶದಲ್ಲಿದ್ದ ಹಲವು ಸಂಸ್ಥಾನಗಳ ನಡುವಿನ ಒಗ್ಗಟ್ಟಿನ ಕೊರತೆ ಹಾಗೂ ಶೂದ್ರರಿಗೆ ಸೈನ್ಯದಲ್ಲಿ ಅವಕಾಶ ನೀಡ ದಿರುವುದು ಇದಕ್ಕೆ ಪ್ರಮುಖ ಕಾರಣ’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿ ದ್ದರು. ಶೂದ್ರರಿಗೆ ಸೈನ್ಯದಲ್ಲಿ ಅವಕಾಶ ನೀಡಿ ದ್ದರೆ ದೇಶ ಸ್ವತಂತ್ರವಾಗಿಯೇ ಇರುತ್ತಿತ್ತು. ಚಾತುರ್ವರ್ಣ ವ್ಯವಸ್ಥೆಯಲ್ಲಿ ಧರ್ಮದ ಚೌಕಟ್ಟು ನಿರ್ಮಿಸಿ, ಮೌಢ್ಯ, ಗೊಡ್ಡು ಸಂಪ್ರ ದಾಯ, ಕಂದಾಚಾರವನ್ನು ಬಿತ್ತಿದ್ದು ಈ ಸ್ಥಿತಿಗೆ ಕಾರಣವಾಯಿತು ಎಂದರು.

ಸಮಾಜಮುಖಿಯಾಗಬೇಕು: ವಿಜ್ಞಾನಿ, ವೈದ್ಯ, ಇಂಜಿನಿಯರ್ ಹೀಗೆ ಯಾವ ವೃತ್ತಿಯೇ ಆಗಲಿ ಸಮಾಜಮುಖಿ ಜ್ಞಾನ ಬೆಳೆಸಿಕೊಳ್ಳುವುದು ಮುಖ್ಯ. ಆದರೆ ಶಿಕ್ಷಣ ದಲ್ಲಿ ಏನೋ ಕೊರತೆ ಇದೆ. ನಾವು ನಡೆ ಯುತ್ತಿರುವ ದಾರಿ ಸರಿಯಿದೆಯೇ? ಸಮಾ ಜಕ್ಕೆ ನಮ್ಮ ಕೊಡುಗೆ ಏನು? ಎಂದು ಪರಾ ಮರ್ಶೆ ಮಾಡಿಕೊಳ್ಳಬೇಕು. ಬದುಕಿನಲ್ಲಿ ಅಡ್ಡದಾರಿಗೆ ಎಳೆಯುವ ಪಟ್ಟಭದ್ರ ಹಿತಾ ಸಕ್ತಿಗಳು ಬಹಳಷ್ಟಿದ್ದಾರೆ. ಸಮಾಜದ ಜೊತೆ ರಾಜೀ ಮಾಡಿಕೊಂಡು ನಡೆಯುವುದು ತುಂಬಾ ಸುಲಭ. ಆದರೆ ಅಡ್ಡಿಗಳನ್ನು ಸವಾಲಾಗಿ ಪರಿಗಣಿಸಿ ಮುನ್ನಡೆಯುವುದು ತುಂಬಾ ಕಷ್ಟ. ಸಮಾಜಮುಖಿ ಶಿಕ್ಷಣ ಪಡೆಯದಿದ್ದರೆ ಇದೊಂದು ಕೇವಲ ಹೊಟ್ಟೆಪಾಡಿನ ಮಾರ್ಗವಾಗಬಹುದು. ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಭಿನಂದನೆ: ಮೈಸೂರು ವಿವಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ ರಾಗಿ, ಅಧ್ಯಕ್ಷರಾಗಿ, ಗುಲ್ಬರ್ಗಾ ವಿವಿ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಪ್ರೊ. ಎಸ್.ಆರ್.ನಿರಂಜನ ಅವರು ನಿವೃತ್ತಿ ನಂತರವೂ ಮೈಸೂರು ವಿವಿ ಡಿಸ್ಟಿಂಗ್ವಿಷ್ಡ್ ಪ್ರೊಫೆಸರ್(ಜೀವಮಾನ) ಹಾಗೂ ಯುಜಿಸಿ ವತಿಯಿಂದ ಬೇಸಿಕ್ ಸೈಂಟಿ ಫಿಕ್ ರೀಸರ್ಚ್ ಫ್ಯಾಕಲ್ಟಿ ಫೆಲೋ ಆಗಿ ಸೇವೆ ಸಲ್ಲಿಸುತ್ತಿದ್ದು, ಇವರ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸೇವೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಪ್ರೊ.ಎಸ್.ಆರ್.ನಿರಂಜನ ಹಾಗೂ ಶ್ರೀಮತಿ ಜಿ.ಎಸ್.ವಾಣಿ ನಿರಂ ಜನ್ ದಂಪತಿಯನ್ನು ಆತ್ಮೀಯವಾಗಿ ಅಭಿ ನಂದಿಸಲಾಯಿತು. ಇದೇ ವೇಳೆ ಸುತ್ತೂರು ಶ್ರೀಗಳ ಸೂಚನೆ ಮೇರೆಗೆ ಪ್ರೊ.ನಿರಂಜನ ಅವರ ತಾಯಿ ರತ್ನಮ್ಮ ರಾಮಚಂದ್ರ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿ ಸಲಾಯಿತು. ಇದೇ ಸಂದರ್ಭದಲ್ಲಿ ಪ್ರೊ. ನಿರಂಜನ ಅವರ ಭಾಷಣಗಳ ಗುಚ್ಛ `ನಿರಂಜನ ಉವಾಚ’ ಹಾಗೂ ಗುಲ್ಬರ್ಗಾ ವಿವಿ ಕುಲಪತಿಯಾಗಿ ಸಾಧನೆ ಕುರಿತ `ಜ್ಞಾನ ಗಂಗೆ ಒಡಲು’ ಪುಸ್ತಕಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹೈದ ರಾಬಾದ್ ಒಸ್ಮಾನಿಯಾ ವಿವಿ ವಿಶ್ರಾಂತ ಕುಲ ಪತಿ ಪ್ರೊ.ಸಿ.ಮನೋಹರಚಾರಿ ಅಭಿನಂದನಾ ನುಡಿಗಳನ್ನಾಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಪ್ರೊ.ಎಸ್. ಆರ್.ನಿರಂಜನ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರೂ ಆದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Translate »