ಯಶಸ್ವಿಯಾಗಿ ನಡೆದ 12ನೇ ಸರ್ವ ಸದಸ್ಯರ ಸಭೆ ಲಾಭದಲ್ಲಿ ಶ್ರೀ ವೀರಶೈವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ
ಮೈಸೂರು

ಯಶಸ್ವಿಯಾಗಿ ನಡೆದ 12ನೇ ಸರ್ವ ಸದಸ್ಯರ ಸಭೆ ಲಾಭದಲ್ಲಿ ಶ್ರೀ ವೀರಶೈವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ

September 25, 2018

ನಂಜನಗೂಡು:  ಕಳೆದ 11 ವರ್ಷಗಳ ಹಿಂದೆ ನಗರದ ಹಿರಿಯ ವಕೀಲ ಹಾಗೂ ಸಮಾಜದ ಚಿಂತಕ ಬಿ.ಮಹದೇವಪ್ಪರವರು ಹುಟ್ಟು ಹಾಕಿದ ಶ್ರೀವೀರಶೈವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಲಾಭದಾಯಕವಾಗಿ ನಡೆಯುತ್ತಿದ್ದು, 2017-18ನೇ ಸಾಲಿನಲ್ಲಿ 6 ಲಕ್ಷ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ ತಿಳಿಸಿದ್ದಾರೆ.
ಅವರು ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ 12ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಗರ ಮತ್ತು ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದವರಿಗೂ ಹಾಗೂ ಕೆಳ ಮಧ್ಯಮ ವರ್ಗದವರಿಗೂ ಆರ್ಥಿಕವಾಗಿ ಹಿಂದುಳಿದ ವೀರಶೈವ ಸಮಾಜದ ಬಂಧುಗಳಿಗೆ ಸುಲಭ ಬಡ್ಡಿ ದರದಲ್ಲಿ ಹಣವನ್ನು ಸಾಲದ ರೂಪದಲ್ಲಿ ದೊರೆಯುವಂತೆ ಮಾಡಿ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಆರ್ಥಿಕವಾಗಿ ಮೇಲೆತ್ತಲು ಈ ಸಂಸ್ಥೆ ಸಹಕಾರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಈ ಸೊಸೈಟಿಯನ್ನು ಗಣಕೀಕರಣ ಗೊಳಿಸಲಾಗುವುದು. ಇದರಿಂದ ಸದಸ್ಯರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಲು ಅನುಕೂಲವಾಗಲಿದೆ. ಮತ್ತು ಮರಣಾನಿಧಿಯನ್ನು ಹೆಚ್ಚಿಸುವುದು ಮತ್ತಿತರ ಕಾರ್ಯಕ್ರಮಗಳ ಅಭಿವೃದ್ಧಿಪಡಿಸಲು ನಿಮ್ಮೆಲ್ಲರ ಒಪ್ಪಿಗೆ, ಸಹಕಾರ ನೀಡಬೆಕೇಂದು ಮನವಿ ಮಾಡಿದಾಗ ಮಹಾಸಭೆಯು ಒಪ್ಪಿಗೆ ಸೂಚಿಸಿತು.
ಸೊಸೈಟಿಯ ಸರ್ವತೊಮುಖ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಂಡು ಮೈಸೂರು ಜಿಲ್ಲೆಯಲ್ಲೆ ಇಂದೊಂದು ಉತ್ತಮ ಮಾದರಿ ಸೊಸೈಟಿಯನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ಅಧ್ಯಕ್ಷ ಎನ್.ಸಿ.ಬಸವಣ್ಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಮುಖ್ಯ ಶಿಕ್ಷಕ ಎನ್.ಪಿ.ನಟರಾಜು, ಪ್ರಗತಿಪರ ರೈತ ಚುಂಚನಹಳ್ಳಿ ಚನ್ನಬಸಪ್ಪ, ನಿವೃತ್ತ ಸೈನಿಕರಾದ ಗಿರೀಶ್, ರಾಜೇಶ್, ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪುರಸ್ಕರಿಸಲಾಯಿತು.

ನಿರ್ದೇಶಕ ಎನ್.ವಿ.ವಿನಯ್‍ಕುಮಾರ್ ಸ್ವಾಗತಿಸಿದರು. 2017-18ನೇ ಸಾಲಿನ ಬಜೆಟ್ ಮತ್ತು ಲೆಕ್ಕ ಪತ್ರ ವರದಿಯನ್ನು ಕಾರ್ಯದರ್ಶಿ ಬಸಪ್ಪ ಮಂಡಿಸಿದರು. ನಿರ್ದೇಶಕ ಎನ್.ವಿ.ವಿನಯ್‍ಕುಮಾರ್ ಕಳೆದ ಸಾಲಿನ ಮಹಾ ಸಭೆ ನಡಾವಳಿಯನ್ನು ಸಭೆಗೆ ಮಂಡಿಸಿದರು. ಕಾರ್ಯಕ್ರಮವನ್ನು ನಿರ್ದೇಶಕಿ ಮಂಜುಳಾ ಮಧು ನಿರೂಪಿಸಿದರು. ನಿರ್ದೇಶಕ ರಮೇಶ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ಮಹದೇವಪ್ಪ, ಅಧ್ಯಕ್ಷ ಎನ್.ಸಿ.ಬಸವಣ್ಣ, ಉಪಾಧ್ಯಕ್ಷ ಮಲ್ಕುಂಡಿ ಎಂ.ವಿ.ಶಿವಕುಮಾರ್, ಹಾಲಿ ನಿರ್ದೇಶಕರುಗಳಾದ ಕೆ.ವಿ.ಶಿವಕುಮಾರ್, ಜಿ.ಚೆನ್ನಬಸಪ್ಪ, ಜಿ.ಎಸ್.ಶೇಖರಪ್ಪ, ಇ.ಶಾಂತಕುಮಾರಿ, ಜಿ.ಎಸ್.ಶೇಖರಪ್ಪ, ಹೆಚ್.ಎಂ.ಮಂಜುಳಾ ಮಧು, ಡಿ.ಎಸ್.ಕೆಂಡಗಣ್ಣಸ್ವಾಮಿ, ಎನ್.ವಿ.ವಿನಯ್‍ಕುಮಾರ್, ಪಿ.ರಮೇಶ್, ಗೀತಾದೇವಿ. ಕಾರ್ಯದರ್ಶಿ ಬಸಪ್ಪ, ಕಾನೂನು ಸಲಹೆಗಾರ ಸಿ.ಎಲ್.ಬಸವರಾಜು, ಸಿಬ್ಬಂದಿ ವರ್ಗದವರಾದ ಎನ್.ಆರ್. ಪ್ರಭಾಕರ್, ಮಂಜುಳಾ, ಚೈತ್ರಾ, ಪ್ರಸನ್ನಕುಮಾರ್, ಲಿಂಗರಾಜು ಹಾಗೂ ನೂರಾರು ಸದಸ್ಯರು ಭಾಗವಹಿಸಿದ್ದರು.

Translate »