ರೂ.6 ಲಕ್ಷ ಮೌಲ್ಯದ ಬಿಲ್ವಾರ ಮರದ ನಾಟಾ, ವಾಹನ ವಶ
ಕೊಡಗು

ರೂ.6 ಲಕ್ಷ ಮೌಲ್ಯದ ಬಿಲ್ವಾರ ಮರದ ನಾಟಾ, ವಾಹನ ವಶ

September 23, 2018

ಕುಶಾಲನಗರ:  ಅಕ್ರಮವಾಗಿ ಬಿಲ್ವಾರ ಮರ ನಾಟಗಳನ್ನು ಸಾಗಾಟ ಮಾಡುತ್ತಿದ್ದಾಗ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.6 ಲಕ್ಷ ಮೌಲ್ಯದ ಮರದ ನಾಟಗಳು ಹಾಗೂ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ.

ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಬಸವನಹಳ್ಳಿ ಮಾರ್ಗದಲ್ಲಿ ಮಿನಿಗೂಡ್ಸ್ ವಾಹನದಲ್ಲಿ ಬಿಲ್ವಾರ ಮರದ ನಾಟಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಮಾಲು ಮತ್ತು ವಾಹನವನ್ನು ವಶಪಡಿಸಿಕೊಂಡು ಚಾಲಕ ಮಾದಾಪಟ್ಟಣದ ನಿವಾಸಿ ರವಿ ಬಂಧಿಸಿ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖ ಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾ ಚರಣೆಯಲ್ಲಿ ಸತ್ತೂರು ಉಪ ವಲಯದ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕ ಸಿ.ಎನ್.ಪೂಣಚ್ಚ, ವಿ.ಎಸ್.ಮಂಜೇ ಗೌಡ, ಕೆ.ಬಿ.ಚಂದ್ರ, ಎಂ.ಕೆ.ಗಣೇಶ್, ಪಿ.ಬಿ.ತಮ್ಮಯ್ಯ ಮತ್ತು ಆರ್.ಆರ್.ಟಿ. ಸಿಬ್ಬಂದಿಗಳಾದ ರವಿ, ಮನೋಜ್ ಪಾಲ್ಗೊಂಡಿದ್ದರು.

Translate »