ಪ್ರವಾಹದಿಂದ ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟು ಜೀವನ ಛಿದ್ರ
ಕೊಡಗು

ಪ್ರವಾಹದಿಂದ ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟು ಜೀವನ ಛಿದ್ರ

September 1, 2018

 23 ವರ್ಷದ ತಷ್ಮಾ ಮುತ್ತಪ್ಪ ಸರ್ಕಾರಿ ಕೆಲಸಕ್ಕಾಗಿ ಪರದಾಟ

ಕುಶಾಲನಗರ: ಕೊಡಗಿನಲ್ಲಿ ಸುರಿದ ಮರಣ ಮಳೆಯಿಂದ ಪ್ರವಾಹ ಸಂಭವಿಸಿ ಅಲ್ಲಿನ ಜನರು ಮನೆ, ಮಠ, ಜಾನುವಾರುಗಳನ್ನು ಕಳೆದುಕೊಂಡಿದ್ದಲ್ಲದೆ, ಕೆಲವರು ತಮ್ಮ ಜೀವನವನ್ನೇ ನಾಶಮಾಡಿಕೊಂಡಿದ್ದಾರೆ. ಅವರಲ್ಲಿ ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ತಷ್ಮಾ ಒಬ್ಬರು.

ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ತಷ್ಮಾ ಮುತ್ತಪ್ಪ ಅವರು ಮಡಿಕೇರಿಯಲ್ಲಿದ್ದ ಮನೆಯನ್ನು ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ. ಅವರು ತಮ್ಮ ಜೀವನವನ್ನು ಪುನರ್ ನಿರ್ಮಿಸಿಕೊಳ್ಳಲು ಸಹಾಯ ಕೋರಿ ಕೆಲಸಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಆಗಸ್ಟ್ 15 ರಿಂದ ಕೊಡಗು ಜಿಲ್ಲೆಯ ಉತ್ತರ ಭಾಗದಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಮಡಿ ಕೇರಿಯ ಮೊನ್ನಂಗೇರಿಯಲ್ಲಿದ್ದ ಅವರ ಮನೆ ನೀರು ಪಾಲಾ ಗಿದೆ. ಕಳೆದು ಒಂದೂವರೆ ವರ್ಷಗಳ ಹಿಂದೆಯಷ್ಟೇ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿತ್ತು. ಮನೆ ಸಂಪೂರ್ಣವಾಗಿ ನೆಲ ಸಮಾಧಿಯಾಗಿವೆ.

ತಷ್ಮಾ ಮುತ್ತಪ್ಪ ಅವರ ವಿಹಾಹವು ದುಬೈನಲ್ಲಿರುವ ಮಡಿಕೇರಿ ಸಮೀಪದ ಬೆಟ್ಟಂಗೇರಿ ನಿವಾಸಿ ಮಂಜೇಶ್ ಅವರೊಂದಿಗೆ ನಿಶ್ಚಯವಾಗಿತ್ತು. ಪೋಷಕರು ವಿವಾಹ ಮಹೋತ್ಸವವನ್ನು ಡಿಸೆಂಬರ್‍ನಲ್ಲಿ ನೆರವೇರಿಸಲು ತೀರ್ಮಾನಿಸಿ, ಸುಮಾರು 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನೂ ಸಹ ಖರೀದಿಸಿದ್ದರು. ಪ್ರವಾಹದಿಂದ ತಷ್ಮಾ ಮುತ್ತಪ್ಪ ಅವರ ಪದಕ ಗಳು, ಟ್ರೋಫಿಗಳು ಮತ್ತು ಸರ್ಟಿಫಿಕೇಟ್ ಸೇರಿದಂತೆ ಎಲ್ಲಾ ಚಿನ್ನಾ ಭರಣ ಮತ್ತು 50,000 ನಗದು ನೀರಿನಲ್ಲಿ ಕೊಚ್ಚಿ ಹೋಯಿತು. ಈಗ ಇವರ ವಿವಾಹ ಮಹೋತ್ಸವವನ್ನು ಬರುವ ವರ್ಷ ಏಪ್ರಿಲ್‍ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ತಷ್ಮಾ ಅವರು ತಮ್ಮ ಥ್ರೋಬಾಲ್ ಕ್ರೀಡೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಆರಂಭಿಸಿ, ಕೊಡಗು ಜಿಲ್ಲೆ, ಕರ್ನಾಟಕ ಮತ್ತು ದೇಶವನ್ನು ಪ್ರತಿನಿಧಿಸಿ, ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿ ಸಿದ್ದಾರೆ. ಅಲ್ಲದೆ ಕರ್ನಾಟಕ ತಂಡದಲ್ಲಿ ಭಾಗವಹಿಸಿ ನಾಲ್ಕು ಭಾರಿ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‍ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ತಷ್ಮಾ ಅವರು 2014ರಲ್ಲಿ ತಮ್ಮ ಕ್ರೀಡಾ ವೃತ್ತಿಜೀವನ ಆರಂಭಿಸಿ, ರಾಜ್ಯ ತಂಡವನ್ನು ಪ್ರತಿನಿಧಿಸಿ ಹರಿಯಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ನಡೆದ ಪಂದ್ಯಾವಳಿ ಗಳಲ್ಲಿ ಭಾಗವಹಿಸಿದಾಗ ಅವರ ಪ್ರತಿಭೆ ಅತೀ ಎತ್ತರಕ್ಕೆ ಸಾಗಿತು. ಬೆಂಗಳೂರಿನ ಸಿಂಧಿ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ತಷ್ಮಾ ಚಿನ್ನದ ಪದಕ ಪಡೆದಿದ್ದರು. ಹಲವಾರು ಬಾರಿ ತಷ್ಮಾ ಅವರು ಉತ್ತಮ ಆಟಗಾರ್ತಿ ಬಹುಮಾನಕ್ಕೆ ಪಾತ್ರರಾಗಿದ್ದರು.

ತಷ್ಮಾ ಅವರ ಕ್ರೀಡಾ ಜೀವನ 2016ರಲ್ಲಿ ಹಠಾತ್ ಆಗಿ ನಿಂತು ಹೋಯಿತು. ಬಳಿಕ ಅವರು ಮಡಿಕೇರಿಯ ಕೊಡಗು ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರುವಂತಾಯಿತು. ಈ ಉದ್ಯೋಗದಿಂದಾಗಿ ಮಡಿಕೇರಿಯ ರೆಸಾರ್ಟ್‍ವೊಂದರಲ್ಲಿ ಕೆಲಸ ಮಾಡುತ್ತಿರುವ ತಂದೆ ಮುತ್ತಪ್ಪ ಮತ್ತು ತಾಯಿ ಗಿರಿಜಾ ಅವರಿಗೆ ಸಹಾಯವಾಗಿದೆ. ಅಲ್ಲದೆ ಕಿರಿಯ ಸಹೋದರನನ್ನು ನೋಡಿಕೊಳ್ಳುವ ಜವಾ ಬ್ದಾರಿಯೂ ಕೂಡ ಅವರ ಮೇಲಿತ್ತು.

ತಷ್ಮಾ ಅವರು ಕ್ರೀಡಾ ವೃತ್ತಿ ಜೀವನವನ್ನು ತ್ಯಾಗ ಮಾಡಿ ಕೆಲಸಕ್ಕೆ ಸೇರಿದ ಮೇಲೆ ಅವರ ಆದಾಯದಿಂದ ಕುಟುಂಬದ ನಿರ್ವಹಣೆ ಸುಗಮವಾಗಿ ಸಾಗುತ್ತಿತ್ತು. ಆದರೆ ಕುಟುಂಬದ ಸದಸ್ಯರು ಕಷ್ಟಪಟ್ಟು ಸಂಪಾದಿಸಿ, ಸಾಲ ಸೋಲ ಮಾಡಿ ಅರ್ಧ ಎಕರೆ ಪ್ರದೇಶದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಮನೆ ನೆಲಸಮವಾಗಿದೆ. ತಷ್ಮಾ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಮಾಡಿರುವ ಸಾಲವನ್ನು ತೀರಿಸಲು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುರದೃಷ್ಟವಶಾತ್, ತಷ್ಮಾ ಅವರ ಸಹೋದರ ಕಳೆದ ವರ್ಷ ಸಾವನ್ನಪ್ಪಿದರು. ಅವರ ಸಾವಿನಿಂದ ಕುಟುಂಬದ ಮನಸ್ಸುಗಳು ಇನ್ನಷ್ಟು ದುಃಖದ ಮಡಿಲಲ್ಲಿ ಮುಳುಗಿತ್ತು. ತಮ್ಮ ಪ್ರೀತಿಯ ಸಹೋ ದರನ ಸಾವಿನ ದುಃಖದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಪ್ರವಾಹ ಸಂಭವಿಸಿ ಮನೆ, ಮಠ, ಜಾನುವಾರುಗಳು ಕೊಚ್ಚಿ ಹೋಯಿತು.

ಪೋಷಕರು ಪರಿಹಾರ ಕೇಂದ್ರದಲ್ಲಿ ವಾಸ: ಮನೆಯನ್ನು ಕಳೆದುಕೊಂಡ ಬಳಿಕ, ತಷ್ಮಾ ಮತ್ತವರ ಕುಟುಂಬ ಚೇರಂಬಾಣೆಯಲ್ಲಿ ಸ್ಥಾಪಿಸಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯಿತು. ನಂತರ ಮಡಿಕೇರಿ ಛೇಂಬರ್ ಅಫ್ ಕಾಮರ್ಸ್ ಬಿಲ್ಡಿಂಗ್‍ನಲ್ಲಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಯಿತು. ತಷ್ಮಾ ಅವರು ಪ್ರಸ್ತುತ ತನ್ನ ಸ್ನೇಹಿತರ ಮನೆಯಲ್ಲಿದ್ದು, ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಅವರ ಪೋಷಕರು ಇನ್ನೂ ಪರಿ ಹಾರ ಕೇಂದ್ರದಲ್ಲಿಯೇ ಇದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದ ತಷ್ಮಾ, ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಅಲ್ಲದೆ, ಅವರು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದರು. ದುರದೃಷ್ಟವಶಾತ್, ಇಂತಹ ಪ್ರತಿಭೆಯ ಸಾಧನೆಯನ್ನು ದೇಶವಾಗಲಿ ಅಥವಾ ರಾಜ್ಯವಾಗಲಿ ಗುರುತಿಸುತ್ತಿಲ್ಲ. ಅವರು ಅಕ್ಷರಶಃ ಎಲ್ಲಿಗೆ ಹೋಗಬೇಕೆಂಬುದರ ಬಗ್ಗೆ ಜಿಜ್ಞಾಸೆಯಲ್ಲಿ ನಿಂತಿದ್ದಾರೆ.

ತಷ್ಮಾ ರಾಜ್ಯ ಸರ್ಕಾರದಲ್ಲಿ ಒಂದು ಕೆಲಸವನ್ನು ಪಡೆದು ಕೊಂಡು ತಮ್ಮ ಕುಟುಂಬಕ್ಕೆ ಸಹಕಾರಿಯಾಗ ಬೇಕೆಂದು ಅವರ ಕನಸಾಗಿದೆ. “ಎಲ್ಲವನ್ನೂ ಕಳೆದುಕೊಂಡು ನಮ್ಮ ಪೋಷಕರಿಗೆ ಬೆಂಗಾವಲಾಗಿರಬೇಕು’’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ಹಲವಾರು ಬಾರಿ ರಾಜ್ಯಕ್ಕೆ ಗೌರವ ತಂದಿದ್ದು, ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದನ್ನು ಪರಿಗಣಿಸಿ ಸಹಾಯ ಮಾಡುವುದೆಂಬ ಆಶಯ ವಿದೆ’’ ಎಂದು ಅವರು ಹೇಳಿದ್ದಾರೆ.

Translate »