Tag: Kushalanagar

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಕೊಡಗು

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ

August 23, 2018

ಕುಶಾಲನಗರ : ಕಳೆದ ಏಳು ದಿನಗಳ ಕಾಲ ಮುಳುಗಡೆ ಯಾಗಿದ್ದ ಜನವಸತಿ ಪ್ರದೇಶಗಳಲ್ಲಿ ಈಗ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗಿದ್ದು, ಕುಶಾಲನಗರ ಪಟ್ಟಣ ಸಹಜ ಸ್ಥಿತಿಗೆ ಮರಳಿದೆ. ಆದರೆ ಕಾವೇರಿ ನದಿ ಹಾಗೂ ಮಳೆಯ ನೀರಿನಿಂದ ಜಲಾವೃತ್ತವಾಗಿದ್ದ ಪ್ರದೇಶಗಳಲ್ಲಿ ಗಿಡ-ಗಂಟೆಗಳು, ಕಸ-ಕಡ್ಡಿಗಳು ಕರಗಿ ನೀರು ಸಂಪೂರ್ಣ ಕಲುಷಿತ ಗೊಂಡಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಕೆಸರುಮಿಶ್ರಿತ ನೀರಿ ನಿಂದ ಬಡಾವಣೆಗಳ ಮನೆ ಹಾಗೂ ರಸ್ತೆಗಳು ಕೆಸರಿ ನಿಂದ…

ಸಿಎಂ ಕಾರು ತಡೆದು ನೋವು ತೋಡಿಕೊಂಡ ಸಂತ್ರಸ್ತರು
ಕೊಡಗು

ಸಿಎಂ ಕಾರು ತಡೆದು ನೋವು ತೋಡಿಕೊಂಡ ಸಂತ್ರಸ್ತರು

August 20, 2018

ಕುಶಾಲನಗರ:  ನೆರೆ ಪ್ರವಾಹ ದಿಂದ ಕುಶಾಲನಗರದ ಪಟ್ಟಣ ಭಾಗಶಃ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭೇಟಿ ನೀಡಿದ ಸಂದರ್ಭ ಸಿಎಂ ಅವರ ಕಾರನ್ನು ಅಡ್ಡಗಟ್ಟಿದ ಮಹಿಳೆ ಯರು ನಮ್ಮ ಬಡಾವಣೆಗಳಿಗೂ ಭೇಟಿ ನೀಡಿ ನಮಗೂ ಸಹಾಯ ಮಾಡಿ ಎಂದು ಅಂಗಲಾಚಿದ ಪ್ರಸಂಗ ನಡೆಯಿತು. ಧಾರಾಕಾರವಾಗಿ ಸುರಿದ ಮಳೆಯಿಂ ದಾಗಿ ನದಿ ದಂಡೆ ಮೇಲಿರುವ ಬಡಾವಣೆ ಗಳು ಮುಳುಗಡೆಯಾಗಿದ್ದು, ಇಲ್ಲಿನ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿದ…

ಕುಶಾಲನಗರ ಭಾಗಶಃ ಜಲಾವೃತ ರಕ್ಷಣಾ ಪಡೆಗಳಿಂದ ಹಲವರ ರಕ್ಷಣೆ
ಕೊಡಗು

ಕುಶಾಲನಗರ ಭಾಗಶಃ ಜಲಾವೃತ ರಕ್ಷಣಾ ಪಡೆಗಳಿಂದ ಹಲವರ ರಕ್ಷಣೆ

August 18, 2018

ಮಡಿಕೇರಿ: ಆಶ್ಲೇಷಾ ಮಳೆ ಆರ್ಭಕ್ಕೆ ಸಿಲುಕಿ ನಲುಗಿ ಹೋಗಿರುವ ಕುಶಾಲನಗರದಲ್ಲಿ ಶುಕ್ರವಾರ ಕೂಡ ಪ್ರವಾಹ ಮಂದೂವರೆದಿದೆ. ಪಟ್ಟಣದಲ್ಲಿ ಶುಕ್ರವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಜಿಲ್ಲೆಯ ತಲಾಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಇದ್ದ ಪರಿಣಾಮ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಈ ಹಿನ್ನೆಲೆ ಯಲ್ಲಿ ನೀರಿನಲ್ಲಿ ಮುಳುಗಿರುವ ನೂರಾರು ಮನೆಗಳ ಜನರು ತೀವ್ರ ಆತಂಕವನ್ನು ಹೊಂದಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ 296 ಮನೆಗಳು, ಎರಡು ಅಂಗನ ವಾಡಿಗಳು ನೀರಿನಲ್ಲಿ ಮುಳುಗಿದ್ದು, 6ಕ್ಕೂ ಹೆಚ್ಚಿನ ಮನೆಗಳು ನೀರಿನಲ್ಲಿ ಕುಸಿದು ಬಿದ್ದಿವೆ….

ಮಾರ್ಬಲ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಕೊಡಗು

ಮಾರ್ಬಲ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

August 3, 2018

ಕುಶಾಲನಗರ:  ಪಟ್ಟಣದ ಟಾಟಾ ಪೆಟ್ರೋಲ್ ಬಂಕ್ ಎದುರಿನಲ್ಲಿರುವ ಕಾವೇರಿ ಮಾರ್ಬಲ್ಸ್ ಬೃಹತ್ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಬೆಂಕಿಗೆ ಅಹುತಿಯಾಗಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ. ರಾಜಾಸ್ಥಾನ ಮೂಲದ ಪುರುಷೋತ್ತಮ ಎಂಬುವವರಿಗೆ ಸೇರಿದ ಅಂಗಡಿಯಾಗಿದ್ದು ಬೆಂಕಿ ಅನಾಹುತದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬುಧವಾರ ಮಧ್ಯರಾತ್ರಿ ಅಂಗಡಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಕ್ಕಪಕ್ಕದ ಅಂಗಡಿಯವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರುವಷ್ಟರಲ್ಲಿ ಬೆಂಕಿ ವ್ಯಾಪಕವಾಗಿ ಹರಡಿತು….

ಕಾಡಾನೆ ಬಲ ಗಾಲಿಗೆ ಗಂಭೀರ ಗಾಯ ಅರಣ್ಯ ಇಲಾಖೆಯಿಂದ ಆರೈಕೆ
ಕೊಡಗು

ಕಾಡಾನೆ ಬಲ ಗಾಲಿಗೆ ಗಂಭೀರ ಗಾಯ ಅರಣ್ಯ ಇಲಾಖೆಯಿಂದ ಆರೈಕೆ

July 28, 2018

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನರಕ ಯಾತನೆ ಅನುಭವಿಸುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡುವ ಮೂಲಕ ಆರೈಕೆಗೆ ಕ್ರಮ ಕೈಗೊಂಡಿದೆ. ಅರಣ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಈ ಆನೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಬಲಗಾಲಿಗೆ ಪೆಟ್ಟು ಬಿದ್ದು ಊತ ಕಾಣಿಸಿ ಕೊಂಡದ್ದು, ನಡೆದಾಟಲು ಸಾಧ್ಯವಾಗದೆ ತೊಂದರೆಯಾಗಿತ್ತು. ಈ ಕಾಡಾನೆ ಕೆಲವು ದಿನಗಳಿಂದ ಆಹಾರ ನೀರು ಇಲ್ಲದೆ ಸೂರಗಿ ಹೋಗಿದೆ….

ಚಿನ್ನದ ಅಂಗಡಿಗೆ ಕನ್ನ ಹಾಕಲು ಯತ್ನ
ಕೊಡಗು

ಚಿನ್ನದ ಅಂಗಡಿಗೆ ಕನ್ನ ಹಾಕಲು ಯತ್ನ

July 25, 2018

ಕುಶಾಲನಗರ:  ಇಲ್ಲಿನ ಹೆಬ್ಬಾಲೆ ಬಸ್ ನಿಲ್ದಾಣ ಬಳಿ ಇರುವ ಲಕ್ಷ್ಮೀ ಜ್ಯೂಯಲ್ಲರಿ ಹಾಗೂ ಬ್ಯಾಂಕರ್ಸ್ ಅಂಗಡಿಯಲ್ಲಿ ಸೋಮವಾರ ರಾತ್ರಿ ಕಳ್ಳರ ಗುಂಪೊಂದು ಕಳವಿಗೆ ಯತ್ನಿಸಿ ವಿಫಲರಾಗಿದ್ದಾರೆ. ಹೆಬ್ಬಾಲೆ ನಿವಾಸಿ ರಾಜಸ್ಥಾನ ಮೂಲದ ಮೋಹನ್ ಚೌದರಿ ಎಂಬುವವರಿಗೆ ಸೇರಿದ ಚಿನ್ನಾಭರಣ ಅಂಗಡಿಗೆ ಕನ್ನ ಹಾಕಲು ಕಳ್ಳರ ಗುಂಪೊಂದು ಅಂಗಡಿಯ ಹಿಂದಿನ ಭಾಗಿಲಿನಿಂದ ನುಗ್ಗಲು ಯತ್ನಿಸುತ್ತಿರುವ ಸಂದರ್ಭ ಚೌದರಿ ಮಗ ವಿನೋದ ಅಲ್ಲಿಗೆ ಆಗಮಿಸಿದ್ದಾನೆ. ಈ ಸಂದರ್ಭ ಕಳ್ಳರು ಬ್ಲೇಡಿನಿಂದ ವಿನೋದ್ ಕುತ್ತಿಗೆಗೆ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ವಿದ್ಯುತ್ ಇಲ್ಲದ…

ಜೇನುಕಲ್ಲು ಅರಣ್ಯದಲ್ಲಿ ಹಂದಿ ಬೇಟೆ: ಆರೋಪಿ ಬಂಧನ
ಕೊಡಗು

ಜೇನುಕಲ್ಲು ಅರಣ್ಯದಲ್ಲಿ ಹಂದಿ ಬೇಟೆ: ಆರೋಪಿ ಬಂಧನ

July 25, 2018

ಕುಶಾಲನಗರ:  ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನು ಕಲ್ಲುಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಭೇಟೆ ಉರುಳು ಅಳವಡಿಸಿ ಮುಳ್ಳು ಹಂದಿ ಬೇಟೆ ಯಾಡಿದ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಚಿನ್ನೇಹಳ್ಳಿ ಗ್ರಾಮದ ನಿವಾಸಿ ರಾಮಪ್ಪ ರೆಡ್ಡಿ ಎಂಬುವವರ ಮಗ ಎಚ್.ಆರ್. ಹನುಮಂತ ರೆಡ್ಡಿ(70 ವರ್ಷ) ಬಂಧಿತ ಆರೋಪಿಯಾಗಿ ದ್ದಾನೆ. ಸೋಮವಾರ ರಾತ್ರಿ ಏಳು ಗಂಟೆ ಸಮಯದಲ್ಲಿ ಅರಣ್ಯ ದಂಚಿನಲ್ಲಿ ಉರುಳು ಹಾಕಿ ಹತ್ಯೆ ಮಾಡಿದ ಮುಳ್ಳು ಹಂದಿಯನ್ನು ಟಿವಿಎಸ್ ಬೈಕ್…

2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ
ಕೊಡಗು

2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ

July 23, 2018

ಕುಶಾಲನಗರ:  ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಮಾಲನ್ನು ವಶಪಡಿಸಿಕೊಂಡ ಘಟನೆ ಕೂಡ್ಲೂರು ಬಳಿ ನಡೆದಿದೆ. ಮರೂರು ಗ್ರಾಮದ ಹೆಚ್.ಡಿ.ಮಹೇಶ್, 6ನೇ ಹೊಸಕೋಟೆ ನಿವಾಸಿ ಹೆಚ್.ಎನ್. ಪ್ರಕಾಶ್ ದ್ವಿಚಕ್ರ ವಾಹನದಲ್ಲಿ (ಕೆಎ.09.ಎಚ್‍ಎನ್.1538) 2 ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ದೊರೆತ ಅಧಿಕಾರಿಗಳು ಆರೋಪ ಗಳನ್ನು ಬಂಧಿಸಿ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ದೊಡ್ಡಬೆಟಗೇರಿ ಗ್ರಾಮದ ಡಿ.ಎಸ್.ದೊರೆ, ಚಂದ್ರ ಅಲಿಯಾಸ್ ಗುಂಡ…

ನಾಳೆ ಸಿಎಂ ಕುಮಾರಸ್ವಾಮಿಯಿಂದ ಹಾರಂಗಿಗೆ ಬಾಗಿನ
ಕೊಡಗು

ನಾಳೆ ಸಿಎಂ ಕುಮಾರಸ್ವಾಮಿಯಿಂದ ಹಾರಂಗಿಗೆ ಬಾಗಿನ

July 18, 2018

ಕುಶಾಲನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.19 ರಂದು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿ ಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯಿಂದ ಮುಖ್ಯಮಂತ್ರಿ ಸ್ವಾಗತಕ್ಕೆ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಾರಂಗಿ ಜಲನಯನ ಪ್ರದೇಶದಲ್ಲಿ ವ್ಯಾಪಕ ವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಜಲಾ ಶಯದಿಂದ 21423 ಕ್ಯುಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇದೀಗ ಮೈದುಂಬಿರುವ ಹಾರಂಗಿ ಜಲಾಶಯಕ್ಕೆ ಗುರುವಾರ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿ ಬಾಗಿನ…

ದುಬಾರೆ ಸಾಕಾನೆ ಶಿಬಿರದ ಹೆಣ್ಣಾನೆ ಸಾವು
ಕೊಡಗು

ದುಬಾರೆ ಸಾಕಾನೆ ಶಿಬಿರದ ಹೆಣ್ಣಾನೆ ಸಾವು

July 11, 2018

ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಬಳಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿನ ಹೆಣ್ಣಾನೆ ಮೈಥಿಲಿ ಮಂಗಳವಾರ ಮೃತಪಟ್ಟಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದ 52 ವರ್ಷದ ಮೈಥಿಲಿ ಆನೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಸೋಮವಾರ ಮೈಥಿಲಿಯ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿತು. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಚಿಕಿತ್ಸೆ ನೀಡಿದ್ದರು. ಮಂಗಳವಾರ ಬೆಳಿಗ್ಗೆ ಮೈಥಿಲಿ ಹೃದಯಾಘಾತದಿಂದ ಮೃತಪಟ್ಟಿತು. ವೈದ್ಯಾಧಿಕಾರಿ ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ಬಳಿಕ ದುಬಾರೆ ಅರಣ್ಯ ಪ್ರದೇಶದಲ್ಲಿ…

1 2 3 4 5 6 7
Translate »