ಕಾಡಾನೆ ಬಲ ಗಾಲಿಗೆ ಗಂಭೀರ ಗಾಯ ಅರಣ್ಯ ಇಲಾಖೆಯಿಂದ ಆರೈಕೆ
ಕೊಡಗು

ಕಾಡಾನೆ ಬಲ ಗಾಲಿಗೆ ಗಂಭೀರ ಗಾಯ ಅರಣ್ಯ ಇಲಾಖೆಯಿಂದ ಆರೈಕೆ

July 28, 2018

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನರಕ ಯಾತನೆ ಅನುಭವಿಸುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡುವ ಮೂಲಕ ಆರೈಕೆಗೆ ಕ್ರಮ ಕೈಗೊಂಡಿದೆ.

ಅರಣ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಈ ಆನೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು.

ಬಲಗಾಲಿಗೆ ಪೆಟ್ಟು ಬಿದ್ದು ಊತ ಕಾಣಿಸಿ ಕೊಂಡದ್ದು, ನಡೆದಾಟಲು ಸಾಧ್ಯವಾಗದೆ ತೊಂದರೆಯಾಗಿತ್ತು. ಈ ಕಾಡಾನೆ ಕೆಲವು ದಿನಗಳಿಂದ ಆಹಾರ ನೀರು ಇಲ್ಲದೆ ಸೂರಗಿ ಹೋಗಿದೆ. ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಾಕಾನೆಗಳ ಸಹಾ ಯದಿಂದ ಕಾಡಾನೆಯನ್ನು ಆನೆಕಾಡು ಶಿಬಿರಕ್ಕೆ ತರಲಾಯಿತು.

ಶುಕ್ರವಾರ ಸಾಕಾನೆ ಶಿಬಿರದಲ್ಲಿ ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾ ಧಿಕಾರಿ. ಡಾ.ಮುಜೀಬ್ ಆನೆಗೆ ಕಾಲು ಊತ ಕಡಿಮೆಯಾಗಲು ನೋವು ನಿರೋ ಧಕ ಚುಚ್ಚುಮದ್ದು ನೀಡಿದರು. ಸಾಕಾನೆ ಶಿಬಿರದಲ್ಲಿ ವಿಶ್ರಾಂತಿ ಪಡೆ ಯುತ್ತಿರುವ ಆನೆಯ ಆರೈಕೆಯಲ್ಲಿ ಅರಣ್ಯ ಸಿಬ್ಬಂದಿಗಳು ಮತ್ತು ಮಾವುತರು ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಈ ಸಂದರ್ಭ ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿಗಳು, ಮಾವುತರು ಇದ್ದರು.

Translate »