ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ಹೈ ಕೋರ್ಟ್ ಎರಡು ವಾರದ ಗಡುವು
ಕೊಡಗು

ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ಹೈ ಕೋರ್ಟ್ ಎರಡು ವಾರದ ಗಡುವು

July 28, 2018

ಬೆಂಗಳೂರು:  ಕೊಡಗು ಮೂಲಕ ಹಾದು ಹೋಗುವ ವಿವಾದಿತ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಕೈಗೆತ್ತಿಕೊಂಡಿಲ್ಲ ಎಂಬುದರ ಬಗ್ಗೆ ದಾಖಲೆ ಸಹಿತ ಸಾಕ್ಷ್ಯಾ ಧಾರಗಳನ್ನು ಒದಗಿಸಬೇಕೆಂದು ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಲಾಗಿದೆ.

ಹೈ ಕೋರ್ಟ್‍ನಲ್ಲಿ ರೈಲ್ವೆ ಮಾರ್ಗದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಜು.25 ರಂದು ನಡೆದು, ಸರ್ಕಾರಿ ವಕೀಲರು ರಾಜ್ಯದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ ಎಂದು ವಾದಿಸಿದರು. ಈ ಯೋಜನೆ ಕೈಗೆತ್ತಿಕೊಂಡಿಲ್ಲ ಎಂಬುದನ್ನು ರಾಜ್ಯ ಸರ್ಕಾರ ದಾಖಲೆ ಸಹಿತ ಸಾಕ್ಷ್ಯಾಧಾರಗಳನ್ನು ಒದಗಿಸಿ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ಎರಡು ವಾರಗಳು ಗಡುವು ನೀಡಲಾಗಿದೆ.

ಕೂರ್ಗ್ ವೈಲ್ಡ್‍ಲೈಫ್ ಸರ್ಕಾರೇತರ ಸಂಸ್ಥೆ ಅಧ್ಯಕ್ಷರೂ ಹಾಗೂ ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಮ ನ್ವಯಾಧಿಕಾರಿಯೂ ಆದ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ ಅವರು ಹೈಕೋ ರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) (ಡಬ್ಲ್ಯುಪಿ 17990/2018) ಅನ್ನು ಏಪ್ರಿಲ್ 24 ರಂದು ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತ್ತು. ಈ ಪ್ರಕರಣದ ವಿಚಾರಣೆಯು ಜುಲೈ 25 ರಂದು ನಡೆಯಿತು.

ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ, ಕರ್ನಾ ಟಕ ಮತ್ತು ಕೇರಳ ರಾಜ್ಯಗಳ ರೈಲ್ವೆ ಸಚಿವಾಲಯದ ಮುಖ್ಯ ಕಾರ್ಯ ದರ್ಶಿಗಳು ಮತ್ತು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅರ್ಜಿಯ ಪ್ರತಿ ವಾದಿಗಳಾಗಿದ್ದಾರೆ. ಮುತ್ತಣ್ಣ ಅವರು ತಮ್ಮ ಅರ್ಜಿಯಲ್ಲಿ ಕೇರಳದ ತಲಚೇರಿಗೆ ಸಂಪರ್ಕ ಕಲ್ಪಿಸುವ ಮೈಸೂರು-ಕೊಡಗು ಜಿಲ್ಲೆ ಮಾರ್ಗ ಮತ್ತು ಮೈಸೂರು ಕುಶಾಲ ನಗರ ಮತ್ತು ಮಡಿಕೇರಿ ಸಂಪರ್ಕ ಕಲ್ಪಿ ಸುವ ಎರಡು ಮಾರ್ಗಗಳಿಂದ ಹಸಿರು ಅರಣ್ಯ ಪ್ರದೇಶ ನಾಶವಾಗುತ್ತದೆ.

ಪ್ರವಾಸೋದ್ಯಮ ಅಥವಾ ವಾಣಿಜ್ಯೀಕರಣ ಅಭಿವೃದ್ಧಿ ಉದ್ದೇಶದಿಂದ ಇಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು. ತಲಚೇರಿ-ಮೈಸೂರು ರೈಲ್ವೆ ಮಾರ್ಗವು ಕರ್ನಾಟಕ ಮತ್ತು ಕೇರಳ ಅಂತರ್‌ಸಂಪರ್ಕ ಕಲ್ಪಿಸುವುದಲ್ಲದೆ ಇದರಿಂದ ಕೊಡಗು ಜಿಲ್ಲೆಯಲ್ಲಿನ ಸಸ್ಯ, ಸೂಕ್ಷ್ಮ ಜೀವ ವೈವಿಧ್ಯತೆ ಹಾಗೂ ಪ್ರಾಣಿ ಸಂಕುಲ ನಾಶವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಪ್ರವಾಸೋದ್ಯಮ ಮತ್ತು ವಾಣಿಜ್ಯೀಕರಣ ಅಭಿವೃದ್ಧಿ ನೆಪದಲ್ಲಿ ಇಂತಹ ಯೋಜನೆಗಳಿಗೆ ಕೋರ್ಟ್ ಅನು ಮತಿ ನೀಡಬಾರದೆಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಮನವಿ ಮಾಡಿದೆ.

ಕೇರಳದ ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಸ್ಥರು ಕೇರಳ ಸರ್ಕಾರದ ಮೂಲಕ ಕೇಂದ್ರ ಸರ್ಕಾರವನ್ನು ಕೊಡಗು ಮೂಲಕ ಮೈಸೂರು-ತಲಚೇರಿ ರೈಲು ಮಾರ್ಗ ಸಂಪರ್ಕ ಯೋಜನೆಗೆ ಒತ್ತಾ ಯಿಸುವ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಡಗಿನ ಹಸಿರು ಸಂಪತ್ತು ಮತ್ತು ಜೀವ ವೈವಿದ್ಯ ತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ಗಣನೆಗೆ ತೆಗೆದುಕೊಂಡು ಈ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಬಾರದೆಂದು ತಿಳಿಸಿದ್ದರು.

ಪಿಐಎಲ್ ಅಕಾಲಿಕವಾಗಿದ್ದು, ಸರ್ಕಾರ ಇಂತಹ ಯಾವುದೇ ರೈಲ್ವೆ ಯೋಜನೆ ಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಅಥವಾ ಅಂತಹ ಉದ್ದೇಶವೂ ಇಲ್ಲ ಎಂದು ಕರ್ನಾ ಟಕ ಸರ್ಕಾರದ ಪರ ವಕೀಲರು ವಾದಿಸಿ ದರು. ರೈಲ್ವೆ ಯೋಜನೆಗೆ ಸಂಬಂಧಿಸಿ ದಂತೆ ಕರ್ನಾಟಕ ಮತ್ತು ಕೇರಳ ಸರ್ಕಾರ ಗಳ ನಡುವೆ ಯಾವುದೇ ನಿರ್ಧಾರ ಅಥವಾ ಚರ್ಚೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಅವರು ವಾದಿಸಿದರು.

ಅರ್ಜಿದಾರರ ಪರ ವಕೀಲ ಬಿ.ಆರ್. ದೀಪಕ್ ಮಾತನಾಡಿ, ರೈಲ್ವೆ ಯೋಜನೆ ಕೈಗೊಳ್ಳುತ್ತಿರುವುದನ್ನು ಸಾಬೀತುಪಡಿಸಲು ಆರ್‍ಟಿಐ ಮೂಲಕ ಹಲವಾರು ದಾಖಲೆ ಗಳು ದೊರೆತಿದ್ದು, ಕರ್ನಾಟಕ ಸರ್ಕಾರವು ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದರು.

ಅರ್ಜಿದಾರರ ವಕೀಲರು, ರೈಲ್ವೆ ಮಾರ್ಗದ ಸಮಗ್ರ ಸಮೀಕ್ಷೆಗೆ ಕೇರಳ ಸರ್ಕಾರ ಸುಮಾರು 45 ಲಕ್ಷ ರೂ.ಗಳನ್ನು ಮಂಜೂರು ಮಾಡಿರುವುದನ್ನು ಕೋರ್ಟ್ ಮುಂದೆ ಮಂಡಿ ಸಿದರು. ಅಲ್ಲದೆ, ಮುತ್ತಣ್ಣ ಅವರು ಬರೆ ದಿರುವ ಪತ್ರದಂತೆ ರೈಲ್ವೆ ಯೋಜನೆ ಯಿಂದ ಕೊಡಗು ಜಿಲ್ಲೆಯಲ್ಲಿ ಹೇಗೆ ಸೂಕ್ಷ್ಮ ಪರಿಸರ ಮತ್ತು ಜೀವ ವೈವಿದ್ಯತೆ ನಾಶವಾ ಗುತ್ತದೆ ಎಂದು ವಕೀಲರು ವಿವರಿಸಿದರು.

ಅರ್ಜಿದಾರರು ಕಡೆಯಿಂದ ಒದಗಿಸಿರುವ ಸಾಕ್ಷ್ಯಚಿತ್ರ ಸಾಕ್ಷ್ಯವನ್ನು ಹೈಕೋರ್ಟ್ ಪರಿಗಣಿಸಿ, ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರದಿರುವ ಬಗ್ಗೆ ಸರ್ಕಾರಿ ವಕೀಲರು ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಸಾಬೀ ತುಪಡಿಸಬೇಕೆಂದು ಹೈ ಕೋರ್ಟ್ ಎರಡು ವಾರ ಗಳ ಕಾಲಾವಕಾಶ ನೀಡಿ ನಿರ್ದೇಶನ ನೀಡಿದೆ.

ಮುತ್ತಣ್ಣ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕರ್ನಾಟಕ ಸರ್ಕಾರಕ್ಕೆ ತನ್ನ ನಿಲುವನ್ನು ತಿಳಿಸಲು ಒತ್ತಾಯ ಬರುತ್ತಿದ್ದು, `ಈಗ ವಿವಾದಿತ ರೈಲ್ವೆ ಯೋಜನೆಗೆ ಕರ್ನಾಟಕ ಸರ್ಕಾರ ಹೌದು ಅಥವಾ ಇಲ್ಲ ಎಂದು ಹೇಳಲೇಬೇಕು’ ಎಂದು ಹೇಳ ಬೇಕು. ಈ ಸಂಬಂಧ ಅಫಿಡವಿಟ್ ಅನ್ನು ಸಲ್ಲಿಸಲು ಒತ್ತಾಯಿಸಬಹುದು ಎಂದು ಅವರು ಹೇಳಿದರು.

ಟಿಪ್ಪಣಿ: ಉದ್ದೇಶಿತ ಕೊಡಗಿನ ಮೂಲಕ ತಲಚೇರಿ-ಮೈಸೂರು ರೈಲ್ವೆ ಯೋಜನೆ ಸರ್ವೇಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ನಿಗಧಿತ ಅನುಮತಿ ಪಡೆಯಬೇಕೆಂಬ ಕೇರಳ ಸರ್ಕಾರಕ್ಕೆ ರೈಲ್ವೆ ಸಚಿವಾಲಯದ ‘ಸಲಹೆ’ ಅದೇನು ಯೋಜನೆಗಿರುವ ವಾಸ್ತವಿಕ ತೊಡಕಲ್ಲ. ರೈಲ್ವೆಯು ಯೋಜನೆಗಿರುವ ಅಡೆತಡೆಗಳನ್ನು ನಿವಾರಿಸಿದರೆ ಅದರಿಂದ ಯೋಜನೆ ಕೈಬಿಡಬೇಕೆಂದು ಬಯಸುವವರಿಗೆ ಒಂದು ಅವಕಾಶ ಸಿಕ್ಕಂತ್ತಾಗು ತ್ತದೆ ಮತ್ತು ಇದು ನ್ಯಾಯಾಲಯದ ಮೊರೆ ಹೋಗಲು ಒಂದು ಅವಕಾಶ ಲಭಿಸಿದಂತಾಗುತ್ತದೆ. ರೈಲ್ವೆ ‘ಸಲಹೆ’ ಕೇವಲ ಯೋಜನೆಯೂ ಈಗಾಗಲೇ ಜಾರಿ ಹಂತದಲ್ಲಿದೆ ಎಂಬುದರ ಪುನರ್ ದೃಢೀಕರಣವಷ್ಟೇ. – ಕೆಬಿಜಿ, ಪ್ರಧಾನ ಸಂಪಾದಕ

Translate »