ಪತ್ರಿಕೆಗಳಿಂದ ಸಮಾಜ ತಿದ್ದುವ ಕೆಲಸ
ಚಾಮರಾಜನಗರ

ಪತ್ರಿಕೆಗಳಿಂದ ಸಮಾಜ ತಿದ್ದುವ ಕೆಲಸ

July 28, 2018

ಗುಂಡ್ಲುಪೇಟೆ:  ಪ್ರತಿಕೆಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕೆಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿ, ನಾಲ್ಕನೇ ಅಂಗವಾದ ಪತ್ರಿಕಾರಂಗ ಸಮಾಜವನ್ನು ತಿದ್ದುವ ಹಾಗೂ ಸರಿದಾರಿಗೆ ತರುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ಅದನ್ನು ನಿಷ್ಠೆಯಿಂದ ಮಾಡುವುದರ ಮುಖಾಂತರ ತನ್ನ ವಿಶ್ವಾಸಾರ್ಹತೆಯನ್ನು ಗಳಿಸಿರುವುದು ಕಂಡುಬರುತ್ತಿದೆ ಎಂದರು.

ದೃಶ್ಯ ಮಾಧ್ಯಮದ ನಡುವೆಯೂ ಪ್ರತಿಕೆ ಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ಸು ಸಾಧಿಸಿದೆ. ಸುದ್ದಿಗಳು ಕೇವಲ ರಂಜನೆಯ ವಸ್ತುವಾಗದೇ ಸಮಾಜ ಏಳಿಗೆಗೆ ಶ್ರಮಿ ಸುವಂತಾಗಬೇಕು ಎಂದರು.

ಜನರು ಪತ್ರಿಕೆಯ ವರದಿಗಳು ಸತ್ಯ ಎಂಬ ಭಾವನೆಯನ್ನು ಹೊಂದಿರುವುದ ರಿಂದ ಕೇವಲ ಕಲ್ಪನಾಲೋಕಕ್ಕೆ ಜನತೆ ಯನ್ನು ತಳ್ಳದೇ ಜನಪರವಾಗಿ, ಜನರ ಕಷ್ಟ ಸುಖಗಳಿಗೆ ಸ್ಪಂದಿಸುವಂತಾಗಬೇಕು ಎಂದು ಪತ್ರಕರ್ತರಿಗೆ ಸಲಹೆ ನೀಡಿದರಲ್ಲದೆ, ಪಟ್ಟಣದಲ್ಲಿ ಪತ್ರಕರ್ತರ ಭವನ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಎಚ್.ಎಂ. ಗಣೇಶ್‍ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿನ ಪತ್ರಕರ್ತರ ಸಂಘವು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ದನಿಯಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರ ಸಾಮಾಜಿಕ ಕಳಕಳಿಯನ್ನು ಮೆಚ್ಚಬೇಕಾಗಿದೆ ಎಂದರು. ಮುಖ್ಯ ಭಾಷಣ ಮಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್ ಪತ್ರಕರ್ತರು ಯಾವುದೇ ಆಮಿ ಷಗಳಿಗೆ ಒಳಗಾಗದೇ ವಸ್ತು ನಿಷ್ಠ ವರದಿ ಯನ್ನು ಮಾಡಬೇಕೆಂದು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತ ನಾಡಿ, ಕೆಲವು ದೃಶ್ಯ ಮಾಧ್ಯಮಗಳು ಇತ್ತೀ ಚಿನ ದಿನಗಳಲ್ಲಿ ವಾಣಿಜ್ಯೊದ್ಯಮದ ಕಡೆಗೆ ವಾಲುತ್ತಿರುವುದು ಕಂಡು ಬರುತ್ತಿದೆ. ಆದರೆ ಪತ್ರಿಕೆಗಳು ಯಾರ ಮುಖವಾಣಿಯೂ ಆಗದೇ ತಮ್ಮ ಅತ್ಯುತ್ತಮ ಜವಾಬ್ದಾರಿ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಸ್ಥಳೀಯ ಕುಂದು ಕೊರತೆಗಳನ್ನು ಎತ್ತಿ ಹಿಡಿಯುವ ಮೂಲಕ ಪತ್ರಕರ್ತರು ನಮ್ಮ ಗಮನ ಸೆಳೆದು ಸಮಸ್ಯೆಗಳನ್ನು ಬಗೆಹರಿ ಸುತ್ತಿರುವುದು ಅವರ ಸಾಮಾಜಿಕ ಕಳಕಳಿ ಯನ್ನು ತೋರುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ರಾ.ಬಾಬು ಮಾತನಾಡಿ ದ್ಯಶ್ಯ ಮಾಧ್ಯಮದ ಹಾವಳಿಯ ನಡುವೆಯೂ ಪತ್ರಿಕೆಗಳು ತನ್ನ ತನವನ್ನು ಉಳಿಸಿ ಕೊಂಡು ಬೆಳೆಯುತ್ತಿದೆ. ಇದಕ್ಕೆ ಸಹೃ ದಯಿ ಓದುಗರು ಕಾರಣ ಎಂದರು.

ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ವನ್ಯ ಜೀವಿ ಪರಿಪಾಲಕ ನವೀನಕುಮಾರ್, ತಾಪಂ ಅಧ್ಯಕ್ಷ ಜಗದೀಶಮೂರ್ತಿ, ಜಿಪಂ ಸದಸ್ಯ ಕೆ.ಎಸ್.ಮಹೇಶ್, ಚಾಮುಲ್ ನಿರ್ದೇಶಕ ಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಲ್ಲಿ ಕಾರ್ಜುನ್, ವಿ.ಎಸ್.ಎಸ್.ಜಿಲ್ಲಾಧ್ಯಕ್ಷ ಎನ್.ಮಲ್ಲೇಶ್, ಅಂತರಾಷ್ಟ್ರೀಯ ವನ್ಯ ಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಹಿಮಗಿರಿ ಟ್ರಸ್ಟ್‍ನ ಮುಖ್ಯಸ್ಥ ರಘುರಾಮ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸೋಮಶೇಖರ್ ಸೇರಿದಂತೆ ಸಂಘದ ಪದಾ ಧಿಕಾರಿಗಳನ್ನು ಶಾಸಕ ಸಿ.ಎಸ್.ನಿರಂಜನ ಕುಮಾರ್ ಮತ್ತು ಗಣ್ಯರು ಸನ್ಮಾನಿಸಿದರು.

ಸಮಾರಂಭದಲ್ಲಿ ಸಂಘದ ನಿರ್ದೇಶಕ ಸೋಮಶೇಖರ್, ಕೆ.ಎನ್.ಮಹಾದೇವ ಸ್ವಾಮಿ, ದೀಪಾ ಶ್ರೀನಿವಾಸ್, ಚಿಕ್ಕತುಪ್ಪೂರು ಮಲ್ಲು, ರಾಘವಾಪುರ ದೇವಯ್ಯ, ಭೈರೇಶ್ ಗಾಣಿಗ್, ಅಂಕಹಳ್ಳಿ ವೀರಭದ್ರಪ್ಪ, ಹೆಗ್ಗಡ ಹಳ್ಳಿ ಸಿದ್ದು, ರಾಜಗೋಪಾಲ್, ಸತೀಶ್, ಪವನ್, ಹಸಗೂಲಿ ಮಹೇಂದ್ರ, ವೀರೇಂದ್ರ ಪ್ರಸಾದ್, ಸಹಾಯಕ ಪ್ರಾಧ್ಯಾಪಕರಾದ ಕೃ.ಪಾ.ಗಣೇಶ್, ಚಾಮರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Translate »