ಪ್ರಾಥಮಿಕ, ಪ್ರೌಢಶಾಲೆ ಒಂದೇ ಸೂರಿನಡಿ ನಿರ್ಮಿಸಲು ಯತ್ನ: ತಾಲೂಕು ಪಂಚಾಯಿತಿ ಸದಸ್ಯ ಜೆ.ಬಸವಣ್ಣ
ಚಾಮರಾಜನಗರ

ಪ್ರಾಥಮಿಕ, ಪ್ರೌಢಶಾಲೆ ಒಂದೇ ಸೂರಿನಡಿ ನಿರ್ಮಿಸಲು ಯತ್ನ: ತಾಲೂಕು ಪಂಚಾಯಿತಿ ಸದಸ್ಯ ಜೆ.ಬಸವಣ್ಣ

July 28, 2018

ಚಾಮರಾಜನಗರ: ಬದನಗುಪ್ಪೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಜಾಗದ ತೊಂದರೆ ಇದ್ದು, ಕೈಗಾರಿಕಾ ಭಿವೃದ್ಧಿ ಪ್ರದೇಶದಲ್ಲಿ 7 ಎಕರೆ ಸರ್ಕಾರಿ ಸ್ಥಳವನ್ನು ಮಂಜೂರು ಮಾಡಿಸಿಕೊಂಡು ಒಂದೇ ಸೂರಿನಡಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಸ್ಥಾಪನೆ ಮಾಡುವ ಗುರಿ ನಮ್ಮದಾಗಿದೆ ಎಂದು ತಾಪಂ ಸದಸ್ಯ ಜಿ.ಬಸವಣ್ಣ ತಿಳಿಸಿದರು.

ತಾಲೂಕಿನ ಬದನಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಗಳ ಸಂಘದ ವತಿಯಿಂದ ಆಯೋಜಿಸಿದ್ದ ನೋಟ್ ಬುಕ್, ಲೇಖನ ಸಾಮಗ್ರಿಗಳನ್ನು ವಿತರಣೆ ಸಮಾರಂಭದಲ್ಲಿ ಅವರು ಮಾತ ನಾಡಿದರು. ಬದನಗುಪ್ಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳದ ಅಭಾವದಿಂದಾಗಿ ಎರಡು ಕಡೆ ತರಗತಿಗಳನ್ನು ನಡೆಸಲಾಗುತ್ತದೆ. ಬಿಸಿಯೂಟಕ್ಕಾಗಿ ಎಲ್ಲಾ ಮಕ್ಕಳನ್ನು ಒಂದೆಡೆ ಸೇರಿಸಲು ರಾಷ್ಟ್ರೀಯ ಹೆದ್ದಾರಿ 150ಎ ಯನ್ನು ಹಾದು ಬರಬೇಕಾಗಿದೆ. ಈ ಸಂದರ್ಭದಲ್ಲಿ ಶಿಕ್ಷಕಿಯರು ನಿಂತು ಮಕ್ಕಳನ್ನು ರಸ್ತೆ ದಾಟಿಸುವ ಪರಿಸ್ಥಿತಿ ಉಂಟಾಗಿದೆ. ಇದನ್ನು ತಪ್ಪಿಸಲು ಒಂದೇ ಕಡೆ ಶಾಲೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಗ್ರಾಮದ ಶಾಲೆಯ ಅಭಿವೃದ್ಧಿಗಾಗಿ ಗ್ರಾಮದ ಹಳೇ ವಿದ್ಯಾರ್ಥಿಗಳು ಹಾಗೂ ಮುಖಂಡರು ಹಾಗೂ ಜನಪ್ರತಿನಿಧಿಗಳು, ಸಂಸದರು ಹಾಗೂ ಶಿಕ್ಷಣ ಸಚಿವರನ್ನು ಇಷ್ಟರಲ್ಲೇ ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸ ಲಾಗಿದೆ ಎಂದರು. ಶಾಲೆಯಲ್ಲಿ ಈಗಾಗಲೇ ಶೌಚಾಲಯ ನಿರ್ಮಾಣವಾಗಿದ್ದು, ಶೌಚಾಲಯಕ್ಕೆ ನೀರಿನ ಸೌಲಭ್ಯವನ್ನು ಕಲ್ಪಿಸುವುದಾಗಿ ತಾಪಂ ಸದಸ್ಯರ ಅನುದಾನದಲ್ಲಿ ಮಾಡುವುದಾಗಿ ಭರವಸೆ ನೀಡಿದರು. ಗ್ರಾಮದ ಮುಖಂಡರಾದ ಬಿ.ಪಿ. ನಾಗರಾಜಮೂರ್ತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ ಗಳ ಸಂಘದ ಪದಾಧಿಕಾರಿಗಳಾದ ಅಭಿಯಂತರ ಜಿ.ಪಿ. ಪರಶಿವಮೂರ್ತಿ, ಕೈಗಾರಿಕೋದ್ಯಮಿ ಆರ್. ರಾಮದಾಸ್, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ್, ಮಾಜಿ ಸದಸ್ಯ ಜಿ.ನಂಜುಂಡಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷ ಬಿ.ಎಸ್. ಶಿವ ಸ್ವಾಮಿ, ಎಂ.ರಾಜಶೇಖರ್, ಗೋಪಾಲ ನಾಯಕ, ಗೋಪಾಲರಾವ್, ದೊರೆಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ, ಸಹ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Translate »