ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ
ಚಾಮರಾಜನಗರ

ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ

July 28, 2018

ಗುಂಡ್ಲುಪೇಟೆ: ಜಮೀನಿನ ಬೆಳೆಗಳಿಗೆ ನೀರು ಹಾಯಿ ಸಲು ಮೋಟಾರ್ ಸ್ಪಾರ್ಟ್ ಮಾಡಲು ಹೋಗಿದ್ದ ರೈತನೋರ್ವನಿಗೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲೂಕಿನ ಹಂಗಳ ಗ್ರಾಮ ದಲ್ಲಿ ನಡೆದಿದೆ.

ಗ್ರಾಮದ ರೈತ ಪ್ರಕಾಶ್(45) ಎಂಬು ವರೇ ವಿದ್ಯುತ್‍ಸ್ಪರ್ಶಕ್ಕೆ ಬಲಿಯಾದ ರೈತನಾಗಿದ್ದು, ಈತ ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಸ್ಟಾರ್ಟ ರ್‍ನಲ್ಲಿರುವ ಸ್ವಿಚ್‍ಗೆ ಕೈಹಾಕುತ್ತಿ ದ್ದಂತೆಯೇ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಗುಂಡ್ಲುಪೇಟೆ ಪಟ್ಟಣ ಠಾಣೆ ಪೋಲೀಸರು ಕಳೇ ಬರವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಿಸಿ. ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Translate »