ಚಾಮರಾಜನಗರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಚಾಮರಾಜನಗರ

ಚಾಮರಾಜನಗರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

July 28, 2018

ಚಾಮರಾಜನಗರ:  ಹಿಂದುಳಿದ ವರ್ಗಗಳ ಜನರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಸಮಾಜದಲ್ಲಿ ಏಳಿಗೆಯಾಗಲು ಸಾಧ್ಯವಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಡ ಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಜನರು ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಬೇಕು. ಎಷ್ಟೇ ಕಷ್ಟವಾದರೂ ಸರಿ ಮಕ್ಕಳ ವ್ಯಾಸಂಗಕ್ಕೆ ಅನು ಕೂಲ ಮಾಡಿಕೊಡಬೇಕು. ವಿದ್ಯೆ ಇಲ್ಲದೆ ಹೋದರೆ ಉತ್ತಮ ಅವಕಾಶಗಳು ಇಂದು ಲಭಿಸುವುದಿಲ್ಲ. ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಹಾಗೂ ಆರ್ಥಿಕ ವಾಗಿ ಮುನ್ನಡೆಯಲು ಶಿಕ್ಷಣ ನೀಡಬೇಕಾದುದು ಇಂದಿನ ಅವಶ್ಯಕತೆಯಾಗಿದೆ ಎಂದು ಸಚಿವರು ತಿಳಿಸಿದರು.

ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಜನಾಂಗದವರು ಶಿಕ್ಷಣ ಪಡೆಯಲು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ವಸತಿ ಶಾಲೆ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಸೇರಿದಂತೆ ವ್ಯಾಸಂಗಕ್ಕೆ ಪೂರಕವಾಗಿರುವ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಈ ಎಲ್ಲ ಅನುಕೂಲತೆಗಳನ್ನು ಸದುಪಯೋಗ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಉತ್ತೇಜಿಸಬೇಕೆಂದು ಸಚಿವರು ಸಲಹೆ ಮಾಡಿದರು.

ಹಡಪದ ಅಪ್ಪಣ್ಣನವರು ಬಸವಣ್ಣನವರಂತೆ ಕಾಯಕವೇ ಕೈಲಾಸ ಎಂಬ ತತ್ವ ವನ್ನು ಪ್ರತಿಪಾದಿಸಿ ತಮ್ಮದೇ ಆದ ವಿಶಿಷ್ಟ ಶ್ರದ್ಧೆಯ ಮೂಲಕ ಪ್ರಮುಖರಾದರು. ಅಪ್ಪಣ್ಣನವರ ವಚನ, ಸಂದೇಶ ಹಾಗೂ ಮೌಲ್ಯ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಜಯಂತಿ ಕಾರ್ಯಕ್ರಮಕ್ಕೂ ಅರ್ಥ ಬರುತ್ತದೆ ಎಂದು ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.

ಸವಿತಾ ಸಮಾಜದ ಜನರಿಗೆ ವಸತಿ, ನಿವೇಶನ, ರುದ್ರಭೂಮಿ ಇತರೆ ಬೇಕಿರುವ ಸೌಲಭ್ಯಗಳಿಗೆ ಪೂರಕವಾಗಿ ಸ್ಪಂದಿಸಲಾಗುತ್ತದೆ. ಗಂಗಾಕಲ್ಯಾಣ ಯೋಜನೆ, ನೇರಸಾಲ, ವಿದ್ಯಾಭ್ಯಾಸಕ್ಕೆ ನೆರವು ಇತರೆ ಅಗತ್ಯ ಸೌಲಭ್ಯಗಳನ್ನು ಸಹ ಪಡೆಯಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಕೃಷ್ಣ, ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಜತೆ ನಿಂತು ಸಮಾಜದ ಉನ್ನತಿಗೆ ವಚನಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ. ಮೇಲುಕೀಳು ತೊರೆದು ಪ್ರತಿಯೊಬ್ಬರೂ ಸಮಾಜದಲ್ಲಿ ತಲೆಎತ್ತಿ ನಿಲ್ಲಬೇಕು ಎಂಬ ವೈಶಾಲ್ಯ ಭಾವನೆ ಹೊಂದಿದ್ದರು ಎಂದರು.

ಮುಖ್ಯ ಉಪನ್ಯಾಸ ನೀಡಿದ ಪ್ರಗತಿಪರ ಚಿಂತಕ ಅರಕಲವಾಡಿ ನಾಗೇಂದ್ರ, 12ನೇ ಶತಮಾನದಲ್ಲಿ ಬಸವಣ್ಣನವರನ್ನು ಅನುಸರಿಸಿ 1 ಲಕ್ಷ 96 ಸಾವಿರ ಶರಣರು ಇದ್ದರು. ಈ ಎಲ್ಲರ ಪೈಕಿ ಹಡಪದ ಅಪ್ಪಣ್ಣ ಅವರು ವಿಶೇಷವಾಗಿ ನಿಲ್ಲುತ್ತಾರೆ. ಕಾಯಕ ನಿಷ್ಟೆ, ದಾನದ ಮಹತ್ವ ಕುರಿತು ಅಪಾರವಾಗಿ ಪ್ರತಿಪಾದಿಸಿದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು ಎಂದರು.

ಹಡಪದ ಅಪ್ಪಣ್ಣ ಅವರು 200ಕ್ಕೂ ಹೆಚ್ಚು ಮೌಲ್ಯಯುತ ವಚನಗಳನ್ನು ರಚಿಸಿದ್ದಾರೆ. ಇವರ ಪತ್ನಿ ಲಿಂಗಮ್ಮ ಸಹ ಶರಣೆಯಾಗಿದ್ದರು. ಅಪ್ಪಣ್ಣನವರು ಎಂದೂ ಸಹ ಡಾಂಬಿಕತನವಾಗಿ ನಡೆದುಕೊಳ್ಳಲಿಲ್ಲ. ನಡೆನುಡಿಯಲ್ಲಿ ಶ್ರೇಷ್ಠರೆನಿಸಿ ಕೊಂಡರು. ಪ್ರಸ್ತುತ ಸಂದರ್ಭಗಳಿಗೂ ಮಾರ್ಗದರ್ಶನ ಮಾಡುವ ಸಂದೇಶಗಳು ಅಪ್ಪಣ್ಣನವರ ವಚನಗಳಲ್ಲಿ ಇವೆ ಎಂದು ನಾಗೇಂದ್ರ ತಿಳಿಸಿದರು.

ಸವಿತಾ ಸಮಾಜದ ಜನರು ಇಂದು ಸಂಕಷ್ಟದಲ್ಲಿದ್ದಾರೆ. ವಸತಿ, ನಿವೇಶನ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಾಲಸೌಲಭ್ಯಗಳನ್ನು ಪಡೆದು ಆರ್ಥಿಕ ವಾಗಿ ಮುನ್ನಡೆಯಲು ಪ್ರತ್ಯೇಕವಾಗಿ ನಿಗಮ ಸ್ಥಾಪನೆ ಮಾಡಬೇಕಾದ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಎಲ್ಲ ಈಡೇರಿದರೆ ಸವಿತಾ ಸಮಾಜದ ಜನರ ಬದುಕೂ ಸಹ ಹಸ ನಾಗಲಿದೆ ಎಂದು ನಾಗೇಂದ್ರ ಹೇಳಿದರು.

ನಗರಸಭೆ ಅಧ್ಯಕ್ಷರಾದ ಶೋಭ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಪಂ ಉಪಕಾರ್ಯದರ್ಶಿ ಮುನಿ ರಾಜಪ್ಪ, ಸಮಾಜದ ಮುಖಂಡರಾದ ಮುದ್ದು ಮಾದು, ನಂಜದೇವರು, ಚಿನ್ನಸ್ವಾಮಿ, ಮಂಜುನಾಥ್, ಮಂಜು ಇತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

Translate »