Tag: Thalassery-Mysuru Railway Line

ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ಹೈ ಕೋರ್ಟ್ ಎರಡು ವಾರದ ಗಡುವು
ಕೊಡಗು

ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ಹೈ ಕೋರ್ಟ್ ಎರಡು ವಾರದ ಗಡುವು

July 28, 2018

ಬೆಂಗಳೂರು:  ಕೊಡಗು ಮೂಲಕ ಹಾದು ಹೋಗುವ ವಿವಾದಿತ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಕೈಗೆತ್ತಿಕೊಂಡಿಲ್ಲ ಎಂಬುದರ ಬಗ್ಗೆ ದಾಖಲೆ ಸಹಿತ ಸಾಕ್ಷ್ಯಾ ಧಾರಗಳನ್ನು ಒದಗಿಸಬೇಕೆಂದು ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಲಾಗಿದೆ. ಹೈ ಕೋರ್ಟ್‍ನಲ್ಲಿ ರೈಲ್ವೆ ಮಾರ್ಗದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಜು.25 ರಂದು ನಡೆದು, ಸರ್ಕಾರಿ ವಕೀಲರು ರಾಜ್ಯದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ ಎಂದು ವಾದಿಸಿದರು. ಈ ಯೋಜನೆ ಕೈಗೆತ್ತಿಕೊಂಡಿಲ್ಲ ಎಂಬುದನ್ನು ರಾಜ್ಯ ಸರ್ಕಾರ ದಾಖಲೆ ಸಹಿತ ಸಾಕ್ಷ್ಯಾಧಾರಗಳನ್ನು…

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ
ಮೈಸೂರು

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ

June 30, 2018

ನಾಳೆ ತಿರುವನಂತಪುರಂನಲ್ಲಿ ಟೆಕ್ನಿಕಲ್ ಬಿಡ್ ಓಪನ್ ಡಿಪಿಆರ್ ತಯಾರಿಸಲು ವಿದೇಶಿ ಕಂಪನಿಗಳ ಆಸಕ್ತಿ ಮೈಸೂರು: ಕೊಡಗು ಮತ್ತು ಮೈಸೂರು ಜನತೆ, ಜನಪ್ರತಿನಿಧಿಗಳು, ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಕೇರಳ ಸರ್ಕಾರವು ದಕ್ಷಿಣ ಕೊಡಗಿನ ವನಸಿರಿ ನಾಶಪಡಿಸಿ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ತಯಾರಿಸಲು ಮುಂದಾಗಿದೆ. ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಅನುಕೂಲವಾಗುವ ಈ ಯೋಜನೆಗೆ ಸಮಗ್ರ ಯೋಜನಾ ವರದಿ (DPR) ತಯಾರಿಸಲು ಹಲವು ವಿದೇಶಿ ಕಂಪನಿಗಳು ಆಸಕ್ತಿ ತೋರಿಸಿವೆ. ತಿರುವನಂತಪುರಂನಲ್ಲಿ ನಾಳೆ (ಜೂ.29) ತಾಂತ್ರಿಕ ಬಿಡ್…

ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ನಾವು ಬಿಡುವುದಿಲ್ಲ
ಮೈಸೂರು

ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ನಾವು ಬಿಡುವುದಿಲ್ಲ

June 30, 2018

ಮೈಸೂರು:  ಕೊಡಗು ಭಾಗದ ಅರಣ್ಯ ನಾಶವಾಗುವ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಮುಂದಾಗಿರುವ ಕೇರಳ ರಾಜ್ಯದ ಕ್ರಮ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಇಲ್ಲದಿದ್ದರೂ, ಕೊಡಗು ಭಾಗದ ನಾಗರಿಕರು, ಪರಿಸರ ಪ್ರೇಮಿಗಳು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಡಿಪಿಆರ್ ತಯಾರಿಕೆಗೆ ಬಿಡ್ ಕರೆದಿರುವುದು ಜನವಿರೋಧಿ ನೀತಿಯಾಗಿದೆ ಎಂದು ದೂರಿದ್ದಾರೆ. ಮೈಸೂರು-ತಲಚೇರಿ ರೈಲ್ವೇ ಮಾರ್ಗದಿಂದ ಕೇವಲ ಕೇರಳ…

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ
ಕೊಡಗು

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ

June 14, 2018

ಮಡಿಕೇರಿ: ಮೈಸೂರು-ಕೊಡಗು-ಕೇರಳ ರೈಲು ಮಾರ್ಗದ ಸರ್ವೆ ಕಾರ್ಯ ಕೇರಳ ರಾಜ್ಯದ ಕುತಂತ್ರ ವಾಗಿದ್ದು, ಈ ಯೋಜನೆಯಲ್ಲಿ ಯಾವುದೇ ಜೀವಂತಿಕೆ ಇಲ್ಲ ಎಂದು ಕೊಡಗು ಏಕೀಕರಣ ರಂಗ ಅಭಿಪ್ರಾಯಪಟ್ಟಿದೆ. ಅಂದಾಜು 6 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆಯಾದರೂ, ಕೊಂಕಣ ರೈಲ್ವೆ ಕಾರ್ಪೊರೇಷನ್ ವೆಬ್‍ಸೈಟ್‍ನಲ್ಲೂ ಈ ಕುರಿತು ಯಾವುದೇ ಮಾಹಿತಿ ಪ್ರಕ ಟಗೊಂಡಿಲ್ಲ. ರಾಜ್ಯ ಸರಕಾರದಿಂದಲೂ ಯಾವುದೇ ಪ್ರಸ್ತಾಪಗಳು ಕೇಂದ್ರ ಸರ ಕಾರಕ್ಕೆ ಇಂದಿಗೂ ಸಲ್ಲಿಕೆಯಾಗದೇ ಇರುವ ಸಂದರ್ಭ ಕೊಂಕಣ ರೈಲ್ವೆ ಕಾರ್ಪೊ ರೇಷನ್ ಹೆಸರಲ್ಲಿ ಕೆಲವು ಸಿಬ್ಬಂದಿ…

ಮೈಸೂರು-ತಲಚೇರಿ ರೈಲ್ವೆ ಮಾರ್ಗ ಅಕ್ರಮ ಸರ್ವೇ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಕೊಡಗು

ಮೈಸೂರು-ತಲಚೇರಿ ರೈಲ್ವೆ ಮಾರ್ಗ ಅಕ್ರಮ ಸರ್ವೇ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

June 14, 2018

ಗೋಣಿಕೊಪ್ಪ: ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸಲು ನಡೆಸುತ್ತಿರುವ ರೈಲ್ವೆ ಮಾರ್ಗಕ್ಕೆ ಅಕ್ರಮವಾಗಿ ಸರ್ವೇ ನಡೆಸುತ್ತಿರುವ ಕಾರ್ಯದ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿರಾಜಪೇಟೆ ಕ್ಷೇತ್ರ ಬಿಜೆಪಿ ಎಚ್ಚರಿಕೆ ನೀಡಿದೆ. ಕಾನೂರು, ಕೋತೂರು ಸುತ್ತಮುತ್ತ ಈಗಾಗಲೇ ಅನಧಿಕೃತ ವಾಗಿ ಸರ್ವೇ ನಡೆಸಲಾಗುತ್ತಿದ್ದು, ಬೆಳೆಗಾರರು ಕೃಷಿ ಭೂಮಿ ಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ವಿರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಞಂಗಡ ಅರುಣ್ ಭೀಮಯ್ಯ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು. ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ…

ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ
ಕೊಡಗು

ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ

June 11, 2018

ಮಡಿಕೇರಿ: ಕೊಡಗಿನ ಜನರ ವಿರೋಧದ ನಡುವೆಯೂ ಕೊಡಗು ಜಿಲ್ಲೆಯ ಮೂಲಕ ಸಾಗುವ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ದಕ್ಷಿಣ ಕೊಡಗಿನಲ್ಲಿ ಸರ್ವೆ ಕಾರ್ಯ ನಡೆಸಿ ರುವ ಕ್ರಮವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ದಕ್ಷಿಣ ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ. ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ರೈಲು ಮಾರ್ಗ ನಿರ್ಮಾಣ ಮಾಡಲು…

ಉದ್ದೇಶಿತ ಮೈಸೂರು-ತಲಚೇರಿ ರೈಲ್ವೆ ಮಾರ್ಗ  ಸರ್ವೇಗೆ ಬಾಡಗ-ಕಮಟೂರು ಗ್ರಾಮಸ್ಥರ ತಡೆ
ಕೊಡಗು, ಮೈಸೂರು

ಉದ್ದೇಶಿತ ಮೈಸೂರು-ತಲಚೇರಿ ರೈಲ್ವೆ ಮಾರ್ಗ  ಸರ್ವೇಗೆ ಬಾಡಗ-ಕಮಟೂರು ಗ್ರಾಮಸ್ಥರ ತಡೆ

June 9, 2018

ತೀವ್ರ ವಿರೋಧದ ನಡುವೆಯೂ ಸದ್ದು-ಗದ್ದಲವಿಲ್ಲದೆ ನಡೆಯುತ್ತಿರುವ ಯೋಜನೆ ಜಾರಿ ಯತ್ನ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಂಸದ ಪ್ರತಾಪ್ ಸಿಂಹ ನೀಡಿದ್ದ ಭರವಸೆ ಸುಳ್ಳೆ!? ಪೊನ್ನಂಪೇಟೆ: ಕೊಡಗಿನ ಜನತೆಯ ಪ್ರತಿಭಟನೆಯನ್ನೂ ಲೆಕ್ಕಿಸದೆ ದಕ್ಷಿಣ ಕೊಡಗು ಮೂಲಕ ಕೇರಳಗೆ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆಯನ್ನು ಅನುಷ್ಟಾನಗೊಳಿಸಿದ ಬೆನ್ನಲ್ಲೇ ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ ಅನುಷ್ಟಾನಕ್ಕೆ ಸದ್ದಿಲ್ಲದೆ ಚಾಲನೆ ನೀಡಿರುವ ಅಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‍ನ ಗುತ್ತಿಗೆ…

Translate »