ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ
ಕೊಡಗು

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ

June 14, 2018

ಮಡಿಕೇರಿ: ಮೈಸೂರು-ಕೊಡಗು-ಕೇರಳ ರೈಲು ಮಾರ್ಗದ ಸರ್ವೆ ಕಾರ್ಯ ಕೇರಳ ರಾಜ್ಯದ ಕುತಂತ್ರ ವಾಗಿದ್ದು, ಈ ಯೋಜನೆಯಲ್ಲಿ ಯಾವುದೇ ಜೀವಂತಿಕೆ ಇಲ್ಲ ಎಂದು ಕೊಡಗು ಏಕೀಕರಣ ರಂಗ ಅಭಿಪ್ರಾಯಪಟ್ಟಿದೆ.

ಅಂದಾಜು 6 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆಯಾದರೂ, ಕೊಂಕಣ ರೈಲ್ವೆ ಕಾರ್ಪೊರೇಷನ್ ವೆಬ್‍ಸೈಟ್‍ನಲ್ಲೂ ಈ ಕುರಿತು ಯಾವುದೇ ಮಾಹಿತಿ ಪ್ರಕ ಟಗೊಂಡಿಲ್ಲ. ರಾಜ್ಯ ಸರಕಾರದಿಂದಲೂ ಯಾವುದೇ ಪ್ರಸ್ತಾಪಗಳು ಕೇಂದ್ರ ಸರ ಕಾರಕ್ಕೆ ಇಂದಿಗೂ ಸಲ್ಲಿಕೆಯಾಗದೇ ಇರುವ ಸಂದರ್ಭ ಕೊಂಕಣ ರೈಲ್ವೆ ಕಾರ್ಪೊ ರೇಷನ್ ಹೆಸರಲ್ಲಿ ಕೆಲವು ಸಿಬ್ಬಂದಿ ಜಿಲ್ಲೆಯ ತಿತಿಮತಿ-ಕುಟ್ಟ ಮಾರ್ಗದಲ್ಲಿ ಸರ್ವೇ ನಡೆಸಿರುವುದು ಕಾನೂನು ಬಾಹಿರವಾಗಿದೆ. ಈ ಕುರಿತು ತಾವು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿರು ವುದಾಗಿ ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ ‘ಮೈಸೂರು ಮಿತ್ರ’ಕ್ಕೆ ಪ್ರತಿಕ್ರಿಯಿಸಿದರು.

ಸರ್ವೇ ಕಾರ್ಯ ಕೇವಲ ದಕ್ಷಿಣ ಕೊಡ ಗಿನ ಜನರ ಪ್ರತಿಕ್ರಿಯೆ ಸಂಗ್ರಹಿಸುವ ಪ್ರಕ್ರಿಯೆಯಾಗಿರುವ ಸಾಧ್ಯತೆ ಇದೆ ಎಂದು ತಮ್ಮು ಪೂವಯ್ಯ ಹೇಳಿದರು. ಕೊಡಗು ಏಕೀಕರಣ ರಂಗ ಮತ್ತು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಪದಾಧಿಕಾರಿಗಳು ಈ ಹಿಂದೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರಿಯ ರೈಲ್ವೆ ಮಂಡಳಿ ಮುಖ್ಯಸ್ಥರಿಗೂ ಮನವಿ ಸಲ್ಲಿ ಸಿದ್ದೇವೆ. ಈ ಸಂದರ್ಭ ಮೈಸೂರು-ಕೊಡಗು-ಕೇರಳ ರೈಲು ಮಾರ್ಗದ ಕುರಿತು ಕೇಂದ್ರ ಸರಕಾರ ಕೂಡ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಯಲ್ಲಿ ವಿಚಾರ ಪ್ರಸ್ತಾಪವಾಗಿದ್ದು, ಯೋಜನೆ ಅನುಷ್ಠಾನ ಮಾಡುವುದಿಲ್ಲ ಎಂಬ ಸ್ಪಷ್ಟ ಹೇಳಿ ಕೆಯೂ ವ್ಯಕ್ತವಾಗಿದೆ. ಈ ನಡುವೆ ಕೊಡಗು ಜಿಲ್ಲಾಡಳಿತದ ಗಮನಕ್ಕೂ ಬಾರದೆ, ಕೊಂಕಣ ರೈಲ್ವೇ ಕಾರ್ಪೊರೇಷನ್ ಹೆಸ ರಲ್ಲಿ ಯಾವ ರೀತಿ ಸರ್ವೇ ಕಾರ್ಯ ನಡೆಸಲಾ ಗಿದೆ ಎಂದು ತಮ್ಮು ಪೂವಯ್ಯ ಪ್ರಶ್ನಿಸಿದರು.

ಸರ್ವೇ ಕಾರ್ಯ ನಡೆಸಿರುವ ಬಳಿ ಇದ್ದ ಗುರುತಿನ ಚೀಟಿಯಲ್ಲಿ ಕೊಂಕಣ ರೈಲು ಕಾರ್ಪೊರೇಷನ್ ಸಂಸ್ಥೆಯ ಹೆಸರಿದೆ, ಆದರೆ ಸಂಸ್ಥೆಯ ‘ಹಾಲೋ ಗ್ರಾಮ್’ ಇಲ್ಲ ದಿರುವುದು ಮತ್ತು ಸರ್ವೇ ಸಂದರ್ಭ ಪೊಲೀಸ್ ಭದ್ರತೆಯನ್ನು ಪಡೆಯದಿರು ವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಈ ಬಗ್ಗೆ ತನಿಖೆಗೆ ಒತ್ತಾಯಿಸಿ ರುವುದಾಗಿ ತಮ್ಮು ಪೂವಯ್ಯ ಹೇಳಿದ್ದಾರೆ.

Translate »