ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಶಾಸಕ ಬಾಲಕೃಷ್ಣ
ಹಾಸನ

ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಶಾಸಕ ಬಾಲಕೃಷ್ಣ

June 14, 2018

ಶ್ರವಣಬೆಳಗೊಳ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ರಸ್ತೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸ ಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.ಹೋಬಳಿಯ ಚಲ್ಯಾ ಗ್ರಾಮದಲ್ಲಿ ಎರಡನೇ ಬಾರಿಗೆ ಭಾರೀ ಬಹುಮತಗಳ ಅಂತರದಿಂದ ಆಯ್ಕೆಯಾದ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಲ್ಯಾ ಕೊರಕಲ್ಲಪ್ಪ ಮಠದ ರಸ್ತೆ ಯನ್ನು ಅಭಿವೃದ್ಧಿಪಡಿಸುವುದು. ಅಲ್ಲದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ಗ್ರಾಮದ ಶಾಲಾ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ಅಪೂರ್ಣ ಗೊಂಡಿ ರುವ ಬೀರನಹಳ್ಳಿಯ ಸಮುದಾಯ ಭವನದ ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ನೀಡಲಾ ಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜುಟ್ಟನಹಳ್ಳಿ ಗ್ರಾಪಂ ಅಧ್ಯಕ್ಷೆ ಲತಾ ರಾಜಶೇಖರ್, ಗ್ರಾಮ ಸದಸ್ಯರಾದ ದೀಪು, ರಮೇಶ್, ಪ್ರಭು, ಎಪಿಎಂಸಿ ಸದಸ್ಯ ಎಂ.ಶಂಕರ್, ಪಿ.ಕೆ. ಮಂಜೇಗೌಡ, ಬಸವರಾಜ್, ರೇಣುಕಾ ಹೊನ್ನೇಗೌಡ, ಮುಖಂಡರಾದ ಬಾಳಪ್ಪ, ಬಾಳೇಗೌಡ, ಜಯಣ್ಣ, ರಾಮಣ್ಣ, ಹೊನ್ನೇ ಗೌಡ, ಬೋರೇಗೌಡ, ವಿ.ರಾಮಣ್ಣ, ರಾಮಸ್ವಾಮಿ ಮುಂತಾದವರಿದ್ದರು.

Translate »