ಮೈಸೂರು: ಶ್ರೀ ವೀರಾಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣದ ಅಂಗವಾಗಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 7ರಂದು ವಿವಿ ಮೊಹಲ್ಲಾದಲ್ಲಿ ರುವ ಆಂಡಾಳ್ ಮಂದಿರದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಸ್ವಸ್ತಿರ್ವಾಚನ, ಅನೋಘ್ನೆ ವೇದಘೋಷ, ಸಭಾ ಪ್ರಾರ್ಥನೆ, ವಿಶ್ವಕ್ಷೇನ ಪೂಜೆ, ಉದಕ ಶಾಂತಿ, ಅಂಕುರಾರ್ಪಣೆ, ಮಹಾಮಂಗಳಾ ರತಿ, ತೀರ್ಥ-ಪ್ರಸಾದ ವಿನಿಯೋಗವಿರುತ್ತದೆ. ಜುಲೈ 8ರಂದು ಬೆಳಿಗ್ಗೆ ಸುಪ್ರಭಾತ, ವೇದ ಪಾರಾಯಣ, ಪುಣ್ಯಾಹ, ಉಪನಯನ ಕಾರ್ಯಕ್ರಮ, ಶುಭ ಮುಹೂರ್ತದಲ್ಲಿ ಬ್ರಹ್ಮೋಪದೇಶ ನಂತರ ಸಮಾಶ್ರಯಣ, ಶಾತ್ತುಮುರೈ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಜು. 8ರ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಶ್ರೀ ವೈಷ್ಣವ ಬಂಧುಗಳು ಮುಂಚಿತ ವಾಗಿ ಹೆಸರನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9342112477, 9980263685, 9739000919 ಸಂಪರ್ಕಿಸಿ.