ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ
ಮೈಸೂರು

ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ

July 10, 2018

ಮೈಸೂರು:  ಮೈಸೂರಿನ ಯರಗನಹಳ್ಳಿಯ ವೀರಾಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣವನ್ನು ಒಂಟಿಕೊಪ್ಪಲಿನ ಆಂಡಾಳ್ ಮಂದಿರದಲ್ಲಿ ಪುರೋಹಿತರ ಬಳಗದ ಅಧ್ಯಕ್ಷರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಟುಗಳಿಗೆ ಕರ್ಕಾಟಕ ಲಗ್ನದಲ್ಲಿ ಬ್ರಹ್ಮೋಪದೇಶ ಸಮಾಶ್ರಯಣ ಶಾತ್ತುಮೊರೈ ಹಾಗೂ ಸಾಮೂಹಿಕ ಉಪನಯನ ನೆರವೇರಿದ ಬಳಕ ಸ್ವಸ್ತ್ರಿರ್ವಾಚನ ಅನುಜ್ಞೆ ಹಾಗೂ ಇನ್ನಿತರ ಶೋಡಪೋಚಾರ ಪೂಜಾ ಕೈಂಕರ್ಯಗಳೊಂದಿಗೆ ಪ್ರಸಾದ ವಿನಿಯೋಗಿಸಲಾಯಿತು.

ಇದೇ ವೇಳೆ ವೀರಾಂಜನೇಯ ಟ್ರಸ್ಟ್ ಅಧ್ಯಕ್ಷರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ಮಾತನಾಡಿ, ಬ್ರಾಹ್ಮಣನಾಗಿ ಹುಟ್ಟಿದ್ದಾನೆ ಎಂದರೇ ಲೋಕಕಲ್ಯಾಣಕ್ಕಾಗಿ ಅಥವಾ ಧರ್ಮರಕ್ಷಣೆಗಾಗಿ ಎಂದರ್ಥ ಅದರ ಜವಬ್ದಾರಿ ಬರುವುದು. ಉಪನಯನ ನಂತರ ಪ್ರತಿನಿತ್ಯ ಸೂರ್ಯದೇವನಲ್ಲಿ ಸರ್ವ ಜನರು ಸುಖವಾಗಿರಬೇಕು. ಲೋಕಾ ಸಮಸ್ತ ಸುಖಿನೋ ಭವಂತು ಎಂದು ಪ್ರಾರ್ಥಿಸುತ್ತಾನೆ. ಆದ್ದರಿಂದಲೇ ರಾಜಮಹರಾಜರ ಕಾಲದಿಂದಲೂ ಬ್ರಾಹ್ಮಣರಿಗೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನವಿದೆ. ಬಾಲಕನಿಗೆ ಏಳೆಂಟು ವರ್ಷಕ್ಕೆ ಉಪನಯನವಾದರೆ ವಿದ್ಯಾವಂತನಾಗಿ ಸಾಮಾಜಿಕ ಜವಬ್ದಾರಿ ಬರುತ್ತದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಎರಡು ತಿಂಗಳಲ್ಲಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ರಚಿಸಿರುವುದು ಸ್ವಾಗತಾರ್ಹ. ಶಿಕ್ಷಣ, ಉದ್ಯೋಗ, ವೈದ್ಯಕೀಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಪುರೋಹಿತರು ಅಡುಗೆಯವರ ಬಡ ಬ್ರಾಹ್ಮಣರ ಕುಟುಂಬದ ಆರ್ಥಿಕ ಸಮಸ್ಯೆ ನಿರ್ವಹಣೆಯಾಗುತ್ತದೆ ಎಂದರು.

ಸಾಮೂಹಿಕ ಉಪನಯನದಲ್ಲಿ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಶ್ರೀ ಭಾಷ್ಯಂ ಸ್ವಾಮೀಜಿ, ಶ್ರೀ ಅಭಿನವ ರಾಮಾನುಜ ನರಸಿಂಹ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಉಪಕುಲಪತಿ ಡಾ. ಶೆಲ್ವಪಿಳೈ ಅಯ್ಯಂಗಾರ್, ಶಾಸಕರಾದ ಎಸ್.ಎ ರಾಮದಾಸ್, ನಾಗೇಂದ್ರ, ಅಗಸ್ತ್ಯ ಬ್ಯಾಂಕಿನ ಪಾರ್ಥಸಾರಥಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಂಗನಾಥ್, ಸುಮಂತ್ ಶಾಸ್ತ್ರಿ, ರಂಗನ್ ಕೆ.ಅಯ್ಯಂಗಾರ್, ಮಂಜುನಾಥ್ ಶಾಸ್ತ್ರಿ ಮತ್ತಿತರರು ಭಾಗವಹಿಸಿದ್ದರು.

Translate »