ಸಿಎಂ ಕಾರು ತಡೆದು ನೋವು ತೋಡಿಕೊಂಡ ಸಂತ್ರಸ್ತರು
ಕೊಡಗು

ಸಿಎಂ ಕಾರು ತಡೆದು ನೋವು ತೋಡಿಕೊಂಡ ಸಂತ್ರಸ್ತರು

August 20, 2018

ಕುಶಾಲನಗರ:  ನೆರೆ ಪ್ರವಾಹ ದಿಂದ ಕುಶಾಲನಗರದ ಪಟ್ಟಣ ಭಾಗಶಃ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭೇಟಿ ನೀಡಿದ ಸಂದರ್ಭ ಸಿಎಂ ಅವರ ಕಾರನ್ನು ಅಡ್ಡಗಟ್ಟಿದ ಮಹಿಳೆ ಯರು ನಮ್ಮ ಬಡಾವಣೆಗಳಿಗೂ ಭೇಟಿ ನೀಡಿ ನಮಗೂ ಸಹಾಯ ಮಾಡಿ ಎಂದು ಅಂಗಲಾಚಿದ ಪ್ರಸಂಗ ನಡೆಯಿತು.

ಧಾರಾಕಾರವಾಗಿ ಸುರಿದ ಮಳೆಯಿಂ ದಾಗಿ ನದಿ ದಂಡೆ ಮೇಲಿರುವ ಬಡಾವಣೆ ಗಳು ಮುಳುಗಡೆಯಾಗಿದ್ದು, ಇಲ್ಲಿನ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿದ ಸಂದರ್ಭ ಸಿಎಂ ಮುಂದೆ ತಮ್ಮ ಅಳಲನ್ನು ತೊಡಿ ಕೊಂಡ ಸಂತ್ರಸ್ತರು ಕಣ್ಣೀರು ಹಾಕಿದರು. ಮಹಿಳೆಯರು ನಮ್ಮ ಬಡಾವಣೆಯಲ್ಲೂ ನೆರೆಪ್ರವಾಹದಿಂದ ಮನೆಗಳು ಮುಳುಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾ ಗಿದೆ. ಆದರೆ ಯಾವುದೇ ನಾಯಕರು ಅಲ್ಲಿಗೆ ಬರುತ್ತಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ನಾವು ನಿಮ್ಮನ್ನು ಏನು ಕೇಳುವುದಿಲ್ಲ ನೀವು ಒಮ್ಮೆ ಬಂದು ಅಲ್ಲಿನ ನೈಜ ಪರಿಸ್ಥಿತಿಯನ್ನು ನೋಡಿ ಎಂದು ಸಿಎಂ ಅವರನ್ನು ಮಹಿಳೆಯರು ಅಂಗಲಾಚಿದರು. ಸಂತ್ರಸ್ತರನ್ನು ಸಮಾಧಾನ ಪಡಿಸಿದ ಕುಮಾರಸ್ವಾಮಿ, ಇನ್ನೊಂದು ವಾರ ತಾಳ್ಮೆ ತೆಗೆದುಕೊಳ್ಳಿ, ಎಲ್ಲವೂ ಸರಿ ಯಾಗಲಿದೆ. ನಿಮ್ಮ ಜೊತೆ ನಾವಿದ್ದೇವೆ. ನಿಮಗೆ ಸೂಕ್ತ ಸೂರು ಕಲ್ಪಿಸುವುದರ ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮಳೆ ನಿಂತ ಬಳಿಕ ಎಲ್ಲ ಪರಿಹಾರ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಜಿ.ಪಂ.ಸದಸ್ಯೆ ಕೆ.ಪಿ. ಚಂದ್ರಕಲಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿ ಕಾರಿ ಸುಮಾನ್ ಪಣ್ಣೇಕರ್, ಡಿವೈಎಸ್ಪಿ ಮುರುಳೀಧರ್, ಪ.ಪಂ.ಮುಖ್ಯಾಧಿಕಾರಿ ಶ್ರೀಧರ್, ಪಕ್ಷದ ಮುಖಂಡರು ಇದ್ದರು.

Translate »