ಮೈಸೂರು ನಗರ ಪಾಲಿಕೆ ಚುನಾವಣೆ: ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ
ಮೈಸೂರು

ಮೈಸೂರು ನಗರ ಪಾಲಿಕೆ ಚುನಾವಣೆ: ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ

August 20, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ(ಆ.20) ಕಡೇ ದಿನವಾಗಿದ್ದು, ಮೂರು ಪಕ್ಷಗಳಲ್ಲೂ ಅಂತಿಮ ಗಳಿಗೆಯಲ್ಲಿ ಅಭ್ಯರ್ಥಿಗಳಿಗೆ `ಬಿ’ ಫಾರಂ ವಿತರಿಸುವ ಕಸರತ್ತು ನಡೆದಿದೆ.

ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸುವಲ್ಲಿ ಒಂದಷ್ಟು ಗೊಂದಲವಾಗಿದ್ದು, ನಾಲ್ಕೈದು ವಾರ್ಡ್‍ಗಳಲ್ಲಿ ಟಿಕೆಟ್‍ಗಾಗಿ ಜಟಾಪಟಿ ನಡೆಯುತ್ತಿದೆ. ಒಂದೆರಡು ವಾರ್ಡ್‍ಗಳ ಸಂಭಾವ್ಯ ಅಭ್ಯರ್ಥಿಗಳೇ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಇಂದಿನ (ಆ.19) `ಮೈಸೂರು ಮಿತ್ರ’ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಬಹುತೇಕ ಸಂಭಾವ್ಯ ಅಭ್ಯರ್ಥಿಗಳೇ ಅಧಿಕೃತವಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಗೊಂದಲವಿರುವ ವಾರ್ಡ್‍ಗಳಿಂದ ಅಂತಿಮ ಗಳಿಗೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.

ಜೆಡಿಎಸ್‍ನಲ್ಲೂ ಕೆಲ ಅಭ್ಯರ್ಥಿಗಳಿಗೆ `ಬಿ’ಫಾರಂ ನೀಡಿದ್ದು, ಅವರು ನಾಮಪತ್ರವನ್ನೂ ಸಲ್ಲಿಸಿದ್ದಾಗಿದೆ. ನಾಲ್ಕೈದು ವಾರ್ಡ್ ಗಳನ್ನು ಹೊರತುಪಡಿಸಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಮಾಡಿ, ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ. ಆದರೆ ಪಟ್ಟಿಯನ್ನು ಗೌಪ್ಯವಾಗಿಡಲಾಗಿದೆ. ಈಗಾಗಲೇ ಸಿದ್ಧಗೊಂ ಡಿರುವ ಅಭ್ಯರ್ಥಿಗಳ ಪಟ್ಟಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ ಕೈಲಿದೆ ಯಂತೆ. ಆದರೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಅಂತಿಮವಾ ಗಿಲ್ಲ, ಸೋಮವಾರ ಬೆಳಿಗ್ಗೆ ಪ್ರಕಟಿಸಲಾಗು ವುದು ಎಂಬುದು ಪ್ರೊ.ರಂಗಪ್ಪ ಅವರ ಮಾತಾಗಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಭಾನು ವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೃಷ್ಣಭೈರೇಗೌಡ, ಶಾಸಕ ತನ್ವೀರ್‍ಸೇಠ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಅವರು ಚರ್ಚಿಸಿ, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಲಾಗಿದ್ದು, ಭಾನುವಾರ ರಾತ್ರಿ `ಬಿ’ ಫಾರಂ ವಿತರಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ: ವಾರ್ಡ್ ನಂ 1ರಿಂದ ರೇಣುಕಾ ಪುಟ್ಟರಾಜು, 2-ಗೀತಾ ರುಕ್ಮಾಂಗದ, 3- ಶಿವಮಾದು, 4- ಮಹೇಶ್, 5-ಉಷಾ, 7-ಸಿದ್ದರಾಜು, 8-ಅಕ್ಮಲ್ ಪಾಷಾ, 9-ಇರ್ಫಾನ್ ಪಾಷಾ, 10-ಜಸಿಂ ಮಹಮದ್, 12-ಆಯಾಜ್ ಪಾಷಾ(ಪಂಡು), 13-ಅಯೂಬ್ ಖಾನ್, 14-ಶಹಿನ್‍ಷಾ ಅಹಮದ್, 15-ಪ್ರದೀಪ್ ಚಂದ್ರ, 16-ಆರಿಫ್ ಹುಸೇನ್, 17-ಫೌಜಿಯಾ ಬಾನು, 18-ಎಸ್.ರವೀಂದ್ರ, 19-ತನುಜಾ ಯೋಗಾನಂದ್, 20-ರವಿ ರಾಮೇಗೌಡ, 21- ರೂಪ ವಿಶ್ವನಾಥ್, 22-ಸುಲೋಚನಾ, 23ರಿಂದ ಉರುಂದ ರಾಜೀವ್, 24- ಸುಂದರ್ ಕುಮಾರ್, 25-ಸುಹೇಲ್‍ಬೇಗ್, 26-ಷಾಜಿಯಾಬೇಗಂ, 27-ಮಹಮದ್ ಇರ್ಫಾನ್, 28- ಆರ್.ಕಮಲ, 29ರಿಂದ ಶಾಹಿದ್, 30-ರಶ್ಮಿ ದಿನೇಶ್, 31-ಅಬ್ದುಲ್ ಖಾದರ್, 32-ಶಾಂತಕುಮಾರಿ, 33-ಬಶೀರ್ ಅಹಮದ್, 34-ಅಜೀಜ್ ಶೀಮಾ, 35-ಜಿ.ಎನ್.ಮಂಜುನಾಥ್, 36-ರಜಿನಿ ಅಣ್ಣಯ್ಯ, 37-ಎಂ.ಎ.ಕಮಲ, 38-ಸಿ.ಶ್ರೀಧರ್, 39- ಸತ್ಯರಾಜ್, 40-ಆರ್.ಚಂದ್ರಶೇಖರ್, 41-ಪ್ರಶಾಂತ್‍ಗೌಡ, 42-ಶ್ರೀನಿವಾಸ ಕುಮಾರ್, 43-ಗೋಪಿ, 44-ಹೇಮಾವತಿ, 45-ಶಾಂತಕುಮಾರಿ, 46-ಕಾವ್ಯ, 47-ಗೋವಿಂದಪ್ಪ, 48-ನಾಗವೇಣಿ, 49-ಶಬೀನಾ ಜಬೀನ್, 50-ಲೋಕೇಶ್ ಪಿಯಾ, 51-ಶ್ರೀನಾಥ್‍ಬಾಬು, 52-ಕಲ್ಪನಾ ಸೋಮಶೇಖರ್, 53-ಬಿ.ಎನ್.ಆಶಾ, 54-ಪುಟ್ಟನಿಂಗಮ್ಮ, 56-ಅಂಬಿಕಾ, 57-ದೇಸೀಗೌಡ, 58-ಹೆಚ್.ಸಿ.ಕೃಷ್ಣ, 60-ಭುವನೇಶ್ವರಿ, 61-ಶೋಭಾ, 62-ನಾಗರತ್ನ, 63-ಗೀತಾ, 64ರಿಂದ ಶೋಭಾ ಅವರು ಕಣಕ್ಕಿಳಿಯುವುದು ಖಚಿತ ಎನ್ನಲಾಗಿದೆ.

ಬಂಡಾಯದ ಹೊಗೆ: ಮೂರು ಪಕ್ಷಗಳಲ್ಲೂ ನೂರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಅಂತಿಮ ಗಳಿಗೆಯಲ್ಲಿ ಅಧಿಕೃತ ಪಟ್ಟಿ ಸಿದ್ಧಪಡಿಸಿದ್ದು, ಕಡೇ ದಿನದಲ್ಲಿ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಾದ ಪ್ರಮೇಯ ಎದುರಾಗಿದೆ. ಇದು ಬಂಡಾಯದ ಬಿಸಿಯಿಂದ ತಪ್ಪಿಸಿಕೊಳ್ಳುವ ತಂತ್ರ ಎನ್ನಲಾಗಿದೆ. ಆದರೆ ಈಗಾಗಲೇ ಟಿಕೆಟ್ ಕೈತಪ್ಪಿರುವುದನ್ನು ಅರಿತಿರುವ ಅನೇಕರು ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಂದೀಶ್ ಪ್ರೀತಂ ಪಕ್ಷದ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾರೆ. ಇನ್ನು ಟಿಕೆಟ್ ಸಿಗದಿರುವ ಪಾಲಿಕೆ ಸದಸ್ಯ ಸ್ನೇಕ್‍ಶ್ಯಾಂ ಬಂಡಾಯವಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಳೆ(ಆ.20) ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಅಂತಿಮವಾಗಿ ಯಾರ್ಯಾರು ಕಣಕ್ಕಿಳಿಯುತ್ತಾರೆಂದು ತಿಳಿಯಲಿದೆ.

Translate »