2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ
ಕೊಡಗು

2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ

July 23, 2018

ಕುಶಾಲನಗರ:  ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಮಾಲನ್ನು ವಶಪಡಿಸಿಕೊಂಡ ಘಟನೆ ಕೂಡ್ಲೂರು ಬಳಿ ನಡೆದಿದೆ.

ಮರೂರು ಗ್ರಾಮದ ಹೆಚ್.ಡಿ.ಮಹೇಶ್, 6ನೇ ಹೊಸಕೋಟೆ ನಿವಾಸಿ ಹೆಚ್.ಎನ್. ಪ್ರಕಾಶ್ ದ್ವಿಚಕ್ರ ವಾಹನದಲ್ಲಿ (ಕೆಎ.09.ಎಚ್‍ಎನ್.1538) 2 ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ದೊರೆತ ಅಧಿಕಾರಿಗಳು ಆರೋಪ ಗಳನ್ನು ಬಂಧಿಸಿ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ದೊಡ್ಡಬೆಟಗೇರಿ ಗ್ರಾಮದ ಡಿ.ಎಸ್.ದೊರೆ, ಚಂದ್ರ ಅಲಿಯಾಸ್ ಗುಂಡ ಎಂಬವರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ಸಂದರ್ಭ ಕುಶಾಲನಗರ ವಲಯ ಅರಣ್ಯಾ ಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ, ಅನಿಲ್ ಡಿಸೋಜ, ಕೆ.ಪಿ.ರಂಜನ್, ಸುಬ್ರ ಮಣಿ, ಅರಣ್ಯ ರಕ್ಷಕರಾದ ಪುನಿತ್, ಪೂಣಚ್ಚ ಮತ್ತಿತರರು ಪಾಲ್ಗೊಂಡಿದ್ದರು.

Translate »