ಕುಶಾಲನಗರ ಭಾಗಶಃ ಜಲಾವೃತ ರಕ್ಷಣಾ ಪಡೆಗಳಿಂದ ಹಲವರ ರಕ್ಷಣೆ
ಕೊಡಗು

ಕುಶಾಲನಗರ ಭಾಗಶಃ ಜಲಾವೃತ ರಕ್ಷಣಾ ಪಡೆಗಳಿಂದ ಹಲವರ ರಕ್ಷಣೆ

August 18, 2018

ಮಡಿಕೇರಿ: ಆಶ್ಲೇಷಾ ಮಳೆ ಆರ್ಭಕ್ಕೆ ಸಿಲುಕಿ ನಲುಗಿ ಹೋಗಿರುವ ಕುಶಾಲನಗರದಲ್ಲಿ ಶುಕ್ರವಾರ ಕೂಡ ಪ್ರವಾಹ ಮಂದೂವರೆದಿದೆ.
ಪಟ್ಟಣದಲ್ಲಿ ಶುಕ್ರವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಜಿಲ್ಲೆಯ ತಲಾಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಇದ್ದ ಪರಿಣಾಮ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಈ ಹಿನ್ನೆಲೆ ಯಲ್ಲಿ ನೀರಿನಲ್ಲಿ ಮುಳುಗಿರುವ ನೂರಾರು ಮನೆಗಳ ಜನರು ತೀವ್ರ ಆತಂಕವನ್ನು ಹೊಂದಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ 296 ಮನೆಗಳು, ಎರಡು ಅಂಗನ ವಾಡಿಗಳು ನೀರಿನಲ್ಲಿ ಮುಳುಗಿದ್ದು, 6ಕ್ಕೂ ಹೆಚ್ಚಿನ ಮನೆಗಳು ನೀರಿನಲ್ಲಿ ಕುಸಿದು ಬಿದ್ದಿವೆ. ಕೆಲವು ಮನೆಗಳ ತಡೆಗೋಡೆ ನೆಲಸಮಗೊಂಡಿವೆ. ಕೂಡಿಗೆ, ಗುಡ್ಡೆ ಹೊಸೂರು, ಕುಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕೂಡ ನದಿ ಅಂಚಿನಲ್ಲಿರುವ ಮನೆಗಳು, ಕೈಗಾರಿಕೆಗಳು ನೀರಿನಿಂದ ಜಲಾವೃತ್ತಗೊಂಡಿವೆ.

ಅರ್ಧಭಾಗಕ್ಕೆ ಮುಳುಗಿದ್ದ ಶ್ರೀಸಾಯಿ ಬಾಬ ಲೇಔಟ್, ಕುವೆಂಪು ಬಡಾವಣೆ, ರಸಲ್ ಲೇಔಟ್, ಸೀಗಾರಮ್ಮ ಬಡಾ ವಣೆ, ಇಂದಿರಾ ಬಡಾವಣೆ, ದಂಡಿನ ಪೇಟೆ, ವಿವೇಕಾನಂದ ಬಡಾವಣೆ, ಯೋಗಾ ನಂದ ಬಡಾವಣೆ, ಆದಿ ಶಂಕರಚಾರ್ಯ ಬಡಾವಣೆಗಳು ಶುಕ್ರವಾರ ಸಂಜೆ ನುಗ್ಗಿದ ನೀರಿಗೆ ಸಂಪೂರ್ಣ ಮುಳುಗಡೆಯಾ ಗಿವೆ. ಗಂಧದಕೋಟೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಅರಣ್ಯ ತರಬೇತಿ ಕೇಂದ್ರಗಳಿಗೂ ಸೇರಿದಂತೆ ಹತ್ತಾರೂ ಮನೆಗಳಿಗೆ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತ್ತಗೊಂಡಿವೆ.

ಜನವಸತಿ ಪ್ರದೇಶಗಳು ಸೇರಿದಂತೆ ಹಳ್ಳ ಕೊಳ್ಳಗಳು ಹಾಗೂ ಹೊಲಗದ್ದೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ. ನೀರಿ ನಲ್ಲಿ ಮುಳುಗಿರುವ ಮನೆಗಳ ಜನರು ತಮ್ಮ ಸಂಬಂಧಿಕರ ಮನೆಗಳಿಗೆ, ಸ್ನೇಹಿ ತರ ಮನೆಗಳಿಗೆ ತೆರಳುತ್ತಿದ್ದಾರೆ. ಗೊಂದಿ ಬಸವನಹಳ್ಳಿ ರೊಂಡೆಕೆರೆ ಮತ್ತು ತಾವರೆ ಕೆರೆಗಳು ಸಂಪೂರ್ಣ ಭರ್ತಿಯಾಗಿ ಹೆಚ್ಚು ವರಿ ನೀರು ರಸ್ತೆ ಮೇಲೆ ಹರಿದ ಪರಿ ಣಾಮ ಕುಶಾಲನಗರ-ಮಡಿಕೇರಿ ಮಾರ್ಗ ಕೂಡ ಬಂದ್ ಆಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಅದೇ ರೀತಿ ಹಾರಂಗಿ ಜಲಾಶಯದಿಂದ ನದಿಗೆ ಅಪಾರ ಪ್ರಮಾಣ ದಲ್ಲಿ ನೀರು ಹರಿಸಿದ ಪರಿಣಾಮ ಮಡಿಕೇರಿ -ಹಾಸನ ರಾಜ್ಯ ಹೆದ್ದಾರಿಯ ರಸ್ತೆಗಳು ಜಲಾವೃತ್ತಗೊಂಡು ಸಂಪರ್ಕ ಕಡಿತಗೊಂಡಿದೆ. ನದಿ ಅಂಚಿನಲ್ಲಿರುವ ಅನೇಕ ದೇವಸ್ಥಾನಗಳು ನದಿ ನೀರಿನಿಂದ ಮುಳುಗಡೆ ಹೊಂದಿದ್ದು, ಪೂಜೆ ಪುರ ಸ್ಕಾರಗಳು ಇಲ್ಲದಂತಾಗಿವೆ.

ನೆರೆ ಪ್ರವಾಹದಿಂದ ತೊಂದರೆಗೆ ಸಿಲುಕಿ ರುವ ಸಂತ್ರಸ್ತರಿಗೆ ಕೊಡವ ಸಮಾಜದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಅದೇ ರೀತಿ ಕೂಡಿಗೆ ವ್ಯಾಪ್ತಿಯ ಸಂತ್ರಸ್ತರಿಗೆ ಕೂಡಿಗೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಟಾಟಾ ಕಂಪನಿಯವರು ಗಂಜಿ ಕೇಂದ್ರ ತೆರೆದಿ ದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಾಹಣಾ ಪಡೆ ಹಾಗೂ ನಾಗರೀಕ ರಕ್ಷಣಾ ಪಡೆ, ಅಗ್ನಿ ಶಾಮಕ ದಳ ಸಿಬ್ಬಂದಿಗಳು ಹಾಗೂ ದುಬಾರೆ ರ್ಯಾಫ್ಟಿಂಗ್ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡೇಗೌಡ, ತಹಶೀಲ್ದಾರ್ ಮಹೇಶ್, ಕಂದಾಯ ಅಧಿಕಾರಿ ಮಧುಸೂದನ್, ಪಪಂ ಅಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಗಳು ಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಡಾವಣೆಗಳ ಮನೆಗಳು ನೀರಿನಲ್ಲಿ ಮುಳುಗಿ ಹೋಗಿರುವ ವಿಷಯ ತಿಳಿದು ಅಕ್ಕಪಕ್ಕದ ಬಡಾವಣೆ ಗಳ ನಿವಾಸಿಗಳು, ಸಂಬಂಧಿಕರು ತಂಡೋ ಪತಂಡವಾಗಿ ಆಗಮಿಸಿ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಅದೇ ರೀತಿ ಕೊಪ್ಪ ಸೇತುವೆ ಬಳಿ ಕಾವೇರಿ ಮೈದುಂಬಿ ಹರಿಯುತ್ತಿರುವ ರಮಣೀಯ ದೃಶ್ಯವನ್ನು ಸೇತುವೆ ಮೇಲೆ ನಿಂತು ಸಾರ್ವಜನಿಕರು ನೋಡುತ್ತಿರುವ ದೃಶ್ಯ ಕಂಡುಬಂದಿತು.

Translate »