ವಿರಾಜಪೇಟೆಯಲ್ಲಿ ಮನೆಗಳ ಕುಸಿತ
ಕೊಡಗು

ವಿರಾಜಪೇಟೆಯಲ್ಲಿ ಮನೆಗಳ ಕುಸಿತ

August 18, 2018

ವಿರಾಜಪೇಟೆ:  ವಿರಾಜಪೇಟೆ ಸುತ್ತಮುತ್ತು ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ.50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಪಟ್ಟಣದ ಸುಂಕದಕಟ್ಟೆಯ ವಾಸು ಎಂಬು ವರ ಆರ್‍ಸಿಸಿ ಮನೆಯೋಂದು ಭಾಗಶ ಕುಸಿದು ಅಂದಾಜು 3 ಲಕ್ಷ ನಷ್ಟ ಸಂಭ ವಿಸಿದೆ. ಸುಂಕದ ಕಟ್ಟೆಯ ನಾಲ್ಕು ಮನೆಗಳು ಭಾಗಶಃ ಹಾನಿಯಾಗಿರು ವುದರಿಂದ ಸಲೇಖ, ರೇಖ, ಆನಂದ ಹಾಗೂ ಮಹಾದೇವ ಎಂಬುವರ ನಾಲ್ಕು ಮನೆಯ ವರನ್ನು ಗಂಜಿ ಕೇಂದ್ರಕ್ಕೆ ಸಾಗಿಸಿದ್ದು. ನೆಹರು ನಗರದಲ್ಲಿ 7 ಮನೆಗಳು ಭಾಗಶಃ ಹಾನಿ ಯಾಗಿ ಮನೆಗಳು ಬೀಳುವ ಸಾಧ್ಯತೆ ಇರುವುದರಿಂದ 7 ಮನೆಗಳ 30 ಮಂದಿ ಯನ್ನು ಗಂಜಿ ಕೇಂದ್ರದಲ್ಲಿ ಇರಿಸಲಾಗಿದೆ. ಹಾಗೂ ನಿನ್ನೆದಿನ ಭಾರೀ ಮಳೆಯಿಂ ದಾಗಿ ಅರಸು ನಗರದ ಸಾರ್ವಜನಿಕ ರಸ್ತೆಬದಿ ಬರೆ ಕುಸಿದು ವಾಹನ ಸಂಚಾ ರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೂ ಅಡಚಣೆ ಉಂಟಾಗಿದೆ. ಅರಸುನಗರದ ರಾಜ ತಂಗಮಣಿ ಮತ್ತು ಮಂಜುಳ ಎಂಬು ವರ ಮನೆ ಭಾಗಷ ಕುಸಿದಿದೆ, ಮಲೆ ತಿರಿಕೆ ಬೆಟ್ಟದ ರವಿ ಅವರ ಮನೆ ಹಾಗೂ ಇನ್ನು ಮೂರು ಮನೆಗಳು ಭಾಗಶಃ ಕುಸಿದಿರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ

ವಿರಾಜಪೇಟೆ-ಗೋಣಿಕೊಪ್ಪ ರಸ್ತೆಯ ರಾಜಾ ಕಾಲುವೆ ಸೇತುವೆ ನೀರು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಈ ಸಂದರ್ಭ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾವೇರಿ ನದಿ ಬೇತ್ರಿಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದ ರಿಂದ ವಿರಾಜಪೇಟೆ-ಮಡಿಕೇರಿ ಬಸ್ ಸಂಚಾರ ಅಡಚಣೆಯಾಗಿತ್ತು, ನಾಲ್ಕೇರಿ, ಹೆಮ್ಮಾಡು ಗ್ರಾಮದಲ್ಲಿ ಜಲಾವೃತ ಗೊಂಡಿತ್ತು. ಅಲ್ಲಿನ 55ಕ್ಕೂ ಹೆಚ್ಚು ಕುಟುಂಬ ಗಳನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರಿಸ ಲಾಗಿದೆ. ವಿರಾಜಪೇಟೆ ಸುತ್ತಮುತ್ತು ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು. ತಾಲೂ ಕಿನ ಕೊಟ್ಟಳ್ಳಿಯಲ್ಲಿ 3 ಮನೆಗಳು, ಬೇಟೋಳಿ, ಕಡಂಗ ಮೊರೂರು, ಕದನೂರು ಗ್ರಾಮ ದಲ್ಲಿಯು ಮನೆಗಳು ಹಾನಿಯಾಗಿದ್ದು, ಅಂದಾಜು ರೂ.10 ಲಕ್ಷ ನಷ್ಟ ಸಂಭವಿಸಿರು ವುದಾಗಿ ಕಂದಾಯ ಇಲಾಖೆಯಿಂದ ತಿಳಿದು ಬಂದಿದೆ. ಶುಕ್ರವಾರ ಮಳೆರಾಯ ಸ್ವಲ್ಪ ಬಿಡುವು ನೀಡಿ ಕಂಡು ಬಂತು.

Translate »