ಜೇನುಕಲ್ಲು ಅರಣ್ಯದಲ್ಲಿ ಹಂದಿ ಬೇಟೆ: ಆರೋಪಿ ಬಂಧನ
ಕೊಡಗು

ಜೇನುಕಲ್ಲು ಅರಣ್ಯದಲ್ಲಿ ಹಂದಿ ಬೇಟೆ: ಆರೋಪಿ ಬಂಧನ

July 25, 2018

ಕುಶಾಲನಗರ:  ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನು ಕಲ್ಲುಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಭೇಟೆ ಉರುಳು ಅಳವಡಿಸಿ ಮುಳ್ಳು ಹಂದಿ ಬೇಟೆ ಯಾಡಿದ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಚಿನ್ನೇಹಳ್ಳಿ ಗ್ರಾಮದ ನಿವಾಸಿ ರಾಮಪ್ಪ ರೆಡ್ಡಿ ಎಂಬುವವರ ಮಗ ಎಚ್.ಆರ್. ಹನುಮಂತ ರೆಡ್ಡಿ(70 ವರ್ಷ) ಬಂಧಿತ ಆರೋಪಿಯಾಗಿ ದ್ದಾನೆ. ಸೋಮವಾರ ರಾತ್ರಿ ಏಳು ಗಂಟೆ ಸಮಯದಲ್ಲಿ ಅರಣ್ಯ ದಂಚಿನಲ್ಲಿ ಉರುಳು ಹಾಕಿ ಹತ್ಯೆ ಮಾಡಿದ ಮುಳ್ಳು ಹಂದಿಯನ್ನು ಟಿವಿಎಸ್ ಬೈಕ್ ನಲ್ಲಿ ಹಾಕಿಕೊಂಡು ಸಾಗಿಸುವ ಸಂದರ್ಭ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಂದಿ, ಸಾಗಾಟಕ್ಕೆ ಬಳಸಿದ್ದ ಬೈಕ್ ಸಮೇತ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನು ಮಂತರೆಡ್ಡಿ ವಿರುದ್ಧ ವನ್ಯ ಜೀವಿ ಕಾಯ್ದೆ ಯಡಿ ಅರಣ್ಯ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖಾ ಕಾರ್ಯ ಮುಂದುವರೆದಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎನ್.ಲಕ್ಷ್ಮೀಕಾಂತ್, ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಅರಣ್ಯ ರಕ್ಷಕ ಪ್ರಮೋದ್, ವಾಹನ ಚಾಲಕ ಚಂದನ್ ಪಾಲ್ಗೊಂಡಿದ್ದರು.

Translate »