ಜಿಂಕೆ ಬೇಟೆಗಾರ ಬಂಧನ
ಕೊಡಗು

ಜಿಂಕೆ ಬೇಟೆಗಾರ ಬಂಧನ

July 25, 2018

ಮಡಿಕೇರಿ: ಮತ್ತಿಗೋಡು ಅರಣ್ಯ ವ್ಯಾಪ್ತಿಯ ಬಾಳೆಲೆ ಹೊಸಕೆರೆ ಬಳಿ ಉರುಳು ಹಾಕಿ ಜಿಂಕೆಯನ್ನು ಭೇಟಿಯಾಡಿದ ಆರೋಪಿಯನ್ನು ಮಾಂಸ ಸಹಿತ ವಶಕ್ಕೆ ಪಡೆಯಲಾಗಿದೆ.

ಮತ್ತಿಗೋಡು ರಾಮಾಪುರ ಪೈಸಾರಿ ನಿವಾಸಿ ಆರ್ಮುಘ ಎಂಬಾತನೆ ಬಂಧಿತ ಆರೋಪಿಯಾಗಿದ್ದು, ಈತನಿಂದ 30 ಕೆ.ಜಿ. ಜಿಂಕೆ ಮಾಂಸ, ಮಾಂಸ ಮಾಡಲು ಬಳಸಿದ 2 ಕತ್ತಿ ಮತ್ತು ಕೃತ್ಯಕ್ಕೆ ಬಳಸಿದ ಉರುಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಉರುಳು ಬಳಸಿ ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ಖಚಿತ ಮಾಹಿತಿ ಪಡೆದ ಆನೆಚೌಕೂರು ಹುಲಿ ಸಂರಕ್ಷಣಾ ವಲಯದ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಆರ್ಮುಘನನ್ನು ಬಂದಿಸಿದ್ದಾರೆ.

Translate »