ಸಂಕೇತ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ
ಕೊಡಗು

ಸಂಕೇತ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ

July 25, 2018

ಗೋಣಿಕೊಪ್ಪಲು: ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾದಳ ಪಕ್ಷದ ಆಸ್ತಿ ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಬಣ್ಣಿಸಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾ ರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ರುವ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೀಡಿ ರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಪಕ್ಷದ ವರಿಷ್ಠರು ಅಂಗೀ ಕರಿಸಬಾರದು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಪಡೆ ಇವರ ಬೆನ್ನ ಹಿಂದೆ ಇದೆ. ಅಧಿಕಾರದ ಆಸೆಗಾಗಿ ಕೆಲವು ಬೆರಳಣಿಕೆಯ ವಿರೋದಿ ಗುಂಪು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿ ದ್ದಾರೆ. ಜಿಲ್ಲೆಯ ಪ್ರಾಮಾಣಿಕ ಕಾರ್ಯ ಕರ್ತರು ಇವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ಗುಂಪುಗ ಳಿಂದ ಪಕ್ಷ ಸಂಘಟನೆ ಸಾಧ್ಯವಿಲ್ಲ. ಸಂಕೇತ್ ಪೂವಯ್ಯನವರೇ ಅಧ್ಯಕ್ಷರಾಗಿ ಮುಂದುವರೆ ಯಬೇಕೆಂದು ಮುತ್ತಮ್ಮ ಆಗ್ರಹಿಸಿದ್ದಾರೆ.

ದಕ್ಷಿಣ ಕೊಡಗಿನ ಭಾಗದಲ್ಲಿ ರೈತರ ಆತ್ಮಹತ್ಯೆ, ಬೆಳೆ ಹಾನಿ ಸಂದರ್ಭ ಜಿಲ್ಲಾ ಧ್ಯಕ್ಷರು ನೊಂದ ಕುಟುಂಬದೊಂದಿಗೆ ಬೆರೆತಾಗ ಸಮೀಪದಲ್ಲೆ ಇದ್ದಂತಹ ಪಕ್ಷದ ಮುಖಂಡರೆನಿಸಿಕೊಂಡವರು ಪಾಲ್ಗೊಳ್ಳ ಲಿಲ್ಲ. ಸಂಕೇತ್ ಅವರು ತನ್ನ ಕರಿಮೆಣಸನ್ನು ಮಾರುವ ಮೂಲಕ ಆತ್ಮಹತ್ಯೆ ಮಾಡಿ ಕೊಂಡ ರೈತನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೆಗೌಡ, ಕುಮಾರಸ್ವಾಮಿಯ ವರಿಂದ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ದಕ್ಷಿಣ ಕೊಡಗಿನಲ್ಲಿ ನೆಲೆ ಇಲ್ಲದ ಪಕ್ಷಕ್ಕೆ ನೆಲೆ ತಂದಿದ್ದಾರೆ. ಸಂಕೇತ್ ಪೂವಯ್ಯ ಪಕ್ಷದಲ್ಲಿ ಅಧ್ಯಕ್ಷ ರಾಗಿ ಮುಂದುವರೆಯುವಂತೆ ವರಿಷ್ಠರು ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Translate »