ಕುಶಾಲನಗರ: ಪಟ್ಟಣದ ಬೈಚನಹಳ್ಳಿ ಯೋಗಾನಂದ ಬಡಾವಣೆಯ ಶ್ರೀಮುತ್ತಪ್ಪನ್ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುತ್ತರಿ ವೆಳ್ಳಾಟಂ ವಿಜೃಂಭಣೆಯೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಕೇರಳದ ಸನಲ್ ಮಡಯನ್ ಅವರಿಂದ ಮಲೈಇರಕ್ಕಲ್ ನಿಂದ ಆರಂಭಗೊಂಡ ಪೂಜಾ ಕಾರ್ಯಕ್ರಮ ಶ್ರೀಮುತ್ತಪ್ಪನ್ ದೇವರ ಆಗಮನದವರೆಗೂ ನಡೆಯಿತು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಮುತ್ತಪ್ಪನ ದರ್ಶನ, ಆಶೀರ್ವಾದ ಹಾಗೂ ಪ್ರಸಾದ ಪಡೆದು ಪುನೀತರಾದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವರದ ಹಾಗೂ ಕಾರ್ಯದರ್ಶಿ ಕೆ.ಕೆ.ದಿನೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಇದೇ ಸಂದರ್ಭ ನೂತನವಾಗಿ ಪಪಂಗೆ ಚುನಾ ಯಿತರಾದ ಡಿ.ಕೆ.ತಿಮ್ಮಪ್ಪ, ಪ್ರಮೋದ್, ಜಯಲಕ್ಷ್ಮಿ, ಜಗದಿಶ್, ರೇಣುಕಾ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಸಮಿತಿ ಉಪಾಧ್ಯಕ್ಷ ಬೋಬಿ, ಹರೀಂದ್ರನ್, ಕಾರ್ಯದರ್ಶಿ ರಂಜಿತ್, ಖಜಾಂಚಿ ಶೇಖರ್, ನರೇಶ್, ಅನ್ನ ಸಂತರ್ಪಣಾ ಸಮಿತಿ ಸದಸ್ಯರಾದ ರಾಜೀವ್, ಪವನ್, ಸತೀಶ್ ಇತರರಿದ್ದರು.