ಸಂತ್ರಸ್ತರಿಗೆ ಬಾಂಬೆ ಕೂರ್ಗ್ ನೆರವು
ಕೊಡಗು

ಸಂತ್ರಸ್ತರಿಗೆ ಬಾಂಬೆ ಕೂರ್ಗ್ ನೆರವು

November 13, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನಗರದ ಭಾರತೀಯ ವಿದ್ಯಾಭವನ ಸಭಾಂಗಣ ದಲ್ಲಿ ‘ಬಾಂಬೆ ಕೂರ್ಗ್’ ಅಸೋಸಿಯೇಷನ್ ವತಿಯಿಂದ ಸಹಾಯ ಹಸ್ತ ನೀಡಲಾಯಿತು.

ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂಬೈನಿಂದ ಆಗಮಿಸಿದ ತಂಡ ತೀವ್ರ ಹಾನಿಗೊಳಗಾದ 39 ಸಂತ್ರಸ್ತ ಕುಟುಂಬಗಳಿಗೆ ತಲಾ 25 ಸಾವಿರದಂತೆ 12 ಲಕ್ಷ ರೂ.ಗಳ ನೆರವು ಹಸ್ತ ನೀಡಿದರು.

ಈ ಸಂದರ್ಭ ಬಾಂಬೆ ಕೂರ್ಗ್ ಅಸೋಸಿಯೇಷನ್ ಟ್ರಸ್ಟಿ ಬಿದ್ದಂಡ ಜಗ ದೀಶ್ ನಂಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಲ ವಾರು ಜನರು ತಮ್ಮ ಮನೆ, ಆಸ್ತಿಗಳನ್ನು ಕಳೆದುಕೊಂಡು ತೊಂದರೆಗೀಡಾಗಿದ್ದಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ 39 ಕುಟುಂಬಗಳಿಗೆ ಪರಿಹಾರ ವಿತರಿಸುತ್ತಿರು ವುದಾಗಿ ತಿಳಿಸಿದರು.

ಅಸೋಸಿಯೇಷನ್‍ನ ಇನ್ನೋರ್ವ ಟ್ರಸ್ಟಿ ನಾಪಂಡ ರಮೇಶ್ ಮಾತನಾಡಿ, ಆಸ್ತಿ, ಮನೆ ಕಳೆದುಕೊಂಡು ಸಂಕಷ್ಟದಲ್ಲಿರು ವವರಿಗೆ ನಮ್ಮ ನಾಡಿನ ಇಗ್ಗುತ್ತಪ್ಪ ಹಾಗೂ ತಾಯಿ ಕಾವೇರಿ ಮಾತೆ ಧೈರ್ಯತುಂಬಿ ಕಾಪಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಮಚ್ಚಂಗಡ ಅಪ್ಪಯ್ಯ, ಕರ್ತಮಾಡ ತಿಮ್ಮಯ್ಯ, ಕರ್ತಮಾಡ ವಿವೇಕ್, ನಾಪಂಡ ಹೇಮಂತ್ ಉಪಸ್ಥಿತರಿದ್ದರು.

Translate »