ಮೃಗಾಲಯ-ಕಾರಂಜಿ ಕೆರೆ ನಡುವಿನ ರಸ್ತೆ ಬದಿ ದಿಢೀರ್ ಬೇಲಿ ನಿರ್ಮಾಣ
ಮೈಸೂರು

ಮೃಗಾಲಯ-ಕಾರಂಜಿ ಕೆರೆ ನಡುವಿನ ರಸ್ತೆ ಬದಿ ದಿಢೀರ್ ಬೇಲಿ ನಿರ್ಮಾಣ

February 27, 2019

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ನಡುವಿನ ರಸ್ತೆ ಬದಿಯಲ್ಲಿ ದಿಢೀರ್ ಪೆನ್ಸಿಂಗ್ ಅಳವಡಿಸಲಾಗುತ್ತಿದ್ದು, ಈ ಬಗ್ಗೆ ಯಾವ ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ.

ನಜರ್‍ಬಾದ್‍ನಿಂದ ಲಲಿತ ಮಹಲ್ ರಸ್ತೆ ಸಂಪರ್ಕಿಸುವ ಈ ರಸ್ತೆಯಲ್ಲಿ ಕಾರಂಜಿ ಕೆರೆ ಭಾಗದಲ್ಲಿ ಈಗಾಗಲೇ ಪೆನ್ಸಿಂಗ್ ಇದೆ. ಇದೀಗ ಮೃಗಾಲಯ ಭಾಗಕ್ಕೆ ಪೆನ್ಸಿಂಗ್ ಅಳವಡಿಸಲು ಕಂಬಗಳನ್ನು ನೆಡಲಾಗಿದೆ. ಈ ಬಗ್ಗೆ ನಗರಪಾಲಿಕೆ ಅಧಿಕಾರಿಗಳಿಗಾಗಲೀ, ಮೃಗಾಲಯ, ಮುಡಾ ಅಧಿಕಾರಿಗಳಿಗಾಗಲೀ ಮಾಹಿತಿ ಇಲ್ಲ. ಯಾರು ಪೆನ್ಸಿಂಗ್ ಅಳವಡಿಸುತ್ತಿದ್ದಾರೆ ಎಂದು ಕೇಳಿದರೆ ಯಾರಿಂದಲೂ ಉತ್ತರವಿಲ್ಲ. ಈ ಹಿಂದೆ ರಸ್ತೆ ಕಿರಿದಾಗಿತ್ತಲ್ಲದೆ, ದುಸ್ಥಿತಿಯಲ್ಲಿತ್ತು. ಇಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಅಗಲೀಕರಣದೊಂದಿಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ರಾತ್ರಿ ವೇಳೆ ಕೆಲವರು ಕಟ್ಟಡ ತ್ಯಾಜ್ಯವನ್ನು ತಂದು ಮೃಗಾಲಯ ಭಾಗಕ್ಕೆ ಸುರಿದು ಹೋಗುತ್ತಿದ್ದಾರೆ. ಈ ಕೃತ್ಯವನ್ನು ತಡೆಯಲು ಮೃಗಾಲಯ ಅಥವಾ ಪಾಲಿಕೆ ವತಿಯಿಂದ ಪೆನ್ಸಿಂಗ್ ಅಳವಡಿಸುತ್ತಿರಬಹುದೆಂದು ವಿಚಾರಿಸಿದಾಗ ಯಾವ ಅಧಿಕಾರಿಗಳಲ್ಲೂ ಸ್ಪಷ್ಟ ಮಾಹಿತಿ ಲಭ್ಯವಾಗಲಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ನಾಳೆ(ಫೆ.27) ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

Translate »