ಗುಡಿಗೆರೆ ಕಾಲೋನಿಯಲ್ಲಿ ಯೋಧ ಗುರು ಪುಣ್ಯಸ್ಮರಣೆ
ಮಂಡ್ಯ

ಗುಡಿಗೆರೆ ಕಾಲೋನಿಯಲ್ಲಿ ಯೋಧ ಗುರು ಪುಣ್ಯಸ್ಮರಣೆ

February 27, 2019

ಭಾರತೀನಗರ: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಇಲ್ಲಿನ ಗುಡಿಗೆರೆ ಕಾಲೋನಿ ಯೋಧ ಎಚ್.ಗುರು ಅವರ ಪುಣ್ಯತಿಥಿ ಮಂಗಳವಾರ ನಡೆಯಿತು.

ಮಳವಳ್ಳಿ-ಮದ್ದೂರು ಮುಖ್ಯರಸ್ತೆ ಬದಿಯಲ್ಲಿರುವ ಸಮಾಧಿ ಸ್ಥಳದಲ್ಲಿ ಬೆಳಿಗ್ಗೆ ಯಿಂದಲೇ ಮಡಿವಾಳ ಸಂಪ್ರದಾಯ ದಂತೆ ಪೂಜಾ ವಿಧಿ ವಿಧಾನಗಳ ಮೂಲಕ ತಿಥಿ ಕಾರ್ಯ ನೆರವೇರಿಸಲಾಯಿತು.

ಯೋಧನ ಸಮಾಧಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ, ಹೊಂಬಾಳೆ ಯನ್ನಿಟ್ಟು ಯೋಧ ಗುರು ಭಾವಚಿತ್ರವ ನ್ನಿಟ್ಟು ದೀಪ ಹಚ್ಚಲಾಗಿತ್ತು. ಬಾಳೆ ಎಲೆ ಮೇಲೆ ತಿಂಡಿ, ತಿನಿಸು, ಬಗೆಬಗೆಯ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸ ಲಾಯಿತು. ಹೂ-ಹೊಂಬಾಳೆಗೆ ಹಾಲು-ತುಪ್ಪ ಎರೆಯುವ ಮೂಲಕ ಅಂತಿಮ ಪೂಜೆ ಸಲ್ಲಿಸಲಾಯಿತು.

ಗುರು ಪತ್ನಿ ಕಲಾವತಿ ಸಮಾಧಿ ಸ್ಥಳ ದಲ್ಲಿ ಕಣ್ಣೀರು ಹಾಕುತ್ತಿದದ್ದು ಎಲ್ಲರ ಮನ ಕಲಕುವಂತಿತ್ತು. ತಂದೆ ಹೊನ್ನಯ್ಯ, ತಾಯಿ ಚಿಕ್ಕತಾಯಮ್ಮ ದುಃಖತಪ್ತರಾಗಿ ದ್ದರು. ಸಹೋದರ ಮಧು ಕೇಶಮುಂಡನ ಮಾಡಿಸಿಕೊಂಡು ಗಡಿಗೆ ಹೊಡೆದರು.

ತಿಥಿ ಕಾರ್ಯದ ಸಂಪೂರ್ಣ ಜವಾಬ್ದಾರಿ ಯನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೊತ್ತಿದ್ದರು. ಸಾವಿರಾರು ಮಂದಿ ಸಾರ್ವ ಜನಿಕರು ಗುರು ಸಮಾಧಿಗೆ ಅಂತಿಮ ನಮನ ಸಲ್ಲಿಸಿ ಬೂಂದಿ, ಪಾಯಸ, ಮಸಾಲ್‍ವಡೆ, ಜಾಂಗೀರ್, ಹಪ್ಪಳ, ಉಪ್ಪಿನ ಕಾಯಿ, ಅವರೆಕಾಳು ಗೊಜ್ಜು, ಅನ್ನ-ಸಾಂಬಾರ್, ಮಜ್ಜಿಗೆ ಊಟವನ್ನು ಸವಿದರು.
ತಿಥಿ ಕಾರ್ಯದಲ್ಲಿ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರಿಂದ ಗೀತಗಾಯನ ಕಾರ್ಯ ಕ್ರಮ ಆಯೋಜಿಸಲಾಗಿತ್ತು.

ಹುತಾತ್ಮ ಯೋಧನ ಆತ್ಮಕ್ಕೆ ಶಾಂತಿ: ಉಗ್ರರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವುದು ಹುತಾತ್ಮ ಯೋಧ ಎಚ್.ಗುರು ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಯೋಧನ ಸಮಾಧಿ ಸ್ಥಳದಲ್ಲಿ ಮಾತ ನಾಡಿದ ಅವರು, ಇಂದಿನ ದಾಳಿಯನ್ನು ನಮ್ಮ ಜನ ಎದುರು ನೋಡುತ್ತಿದ್ದರು. ಭಾರತ ದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು. ದೇಶದ ವಿಷಯ ಬಂದಾಗ ನಾವೆಲ್ಲಾ ಒಂದೇ ಎಂದು ತೋರಿಸಿದ್ದೇವೆ ಎಂದರು.
ಯೋಧರು ಚಳಿ, ಮಳೆ, ಗಾಳಿ ಎನ್ನದೇ ದೇಶವನ್ನು ರಕ್ಷಣೆ ಮಾಡುತ್ತಿರುವುದರಿಂದ ನಾವು ನೆಮ್ಮದಿಯಾಗಿದ್ದೇವೆ. ಹುಟ್ಟು, ಸಾವಿನ ನಡುವೆ ದೇಶಕ್ಕಾಗಿ, ಜನರಿಗಾಗಿ ಏನು ಮಾಡುತ್ತೇವೆಂಬುವುದು ಮುಖ್ಯ ಎಂದರು.

ರಕ್ತದಾನ ಶಿಬಿರಕ್ಕೆ ಚಾಲನೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪ್ರಜಾಪ್ರಿಯ ಸೇವಾಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಡಿ.ಸಿ.ತಮ್ಮಣ್ಣ ಚಾಲನೆ ನೀಡಿದರು. ಕೆಂಪೇಗೌಡ ವೈದ್ಯಕೀಯ ಸೇವಾಟ್ರಸ್ಟ್, ಮಿಲೇನಿಯಂ ರಕ್ತನಿಧಿ ಇವರ ಸಹಯೋಗದಲ್ಲಿ 170ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಟ್ರಸ್ಟ್‍ನ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಅರುಣ್, ಕಾರ್ಯದರ್ಶಿ ನಂದನ್, ಎಚ್.ಎನ್. ಅರುಣ್, ಯೋಗೇಶ್, ಸಚಿನ್ ಸೇರಿದಂತೆ ಇತರರಿದ್ದರು.

ದೇಶಕ್ಕೆ ತುಂಬಲಾರದ ನಷ್ಟ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಯೋಧರನ್ನು ಕಳೆದು ಕೊಂಡಿರುವುದು ದೇಶಕ್ಕೆ ತುಂಬಲಾರದ ನಷ್ಟ ಎಂದು ಚಿತ್ರನಟ ನಿಖಿಲ್ ಕುಮಾರ ಸ್ವಾಮಿ ಹೇಳಿದರು. ಯೋಧನ ಪುಣ್ಯತಿಥಿ ಯಲ್ಲಿ ಮಾತನಾಡಿದ ಅವರು, ಹುಟ್ಟಿದ ಮೇಲೆ ಹಣ ಸಂಪಾದಿಸುವ ಬದಲು ಜನ ಸಂಪಾದಿಸ ಬೇಕೆಂದು ನನ್ನ ತಂದೆ ನನಗೆ ಆಗಾಗ್ಗೆ ಹೇಳುತ್ತಿದ್ದರು. ಹಾಗೆಯೇ ಹುತಾತ್ಮ ಯೋಧ ಗುರು ಜನರ ಪ್ರೀತಿ, ವಿಶ್ವಾಸ ಸಂಪಾದಿಸಿದ್ದಾರೆ. ಇದಕ್ಕೆ ಇಲ್ಲಿ ನೆರೆದಿರುವ ಜನರೇ ಸಾಕ್ಷಿ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮನೆಯ ಮಗನಂತೆ ಈ ಕಾರ್ಯವನ್ನು ನೆರವೇರಿಸಿಕೊಟ್ಟಿದ್ದಾರೆ. ಗುರು ಆತ್ಮಕ್ಕೆ ಶಾಂತಿ ಸಿಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು.

ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ: ನಮ್ಮ ಭಾರ ತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಪುಲ್ವಾಮಾ ದಾಳಿಗೆ ಏರ್ ಸರ್ಜಿಕಲ್ ಸ್ಟೈಕ್ ಮೂಲಕ ಭಾರತ ಪ್ರತಿಕಾರ ತೀರಿಸಿಕೊಂಡಿರುವುದು ಶ್ಲಾಘನೀಯ. ಈ ಕಾರ್ಯದಿಂದ ಗುರು ಆತ್ಮಕ್ಕೆ ಶಾಂತಿ ತಂದಿದೆ ಎಂದರು.

ಈ ವೇಳೆ ಜೆಡಿಎಸ್ ಮುಖಂಡ ಸಂತೋಷ್ ತಮ್ಮಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ರಾಜಣ್ಣ, ವೆಂಕಟೇಶ್, ಜಿಪಂ ಸದಸ್ಯೆ ಸುಕನ್ಯಾ, ಮಾಯಪ್ಪ, ಶಿಕ್ಷಕ ಚಂದ್ರಶೇಖರ್, ಅಮರ್‍ನಾಥ್, ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಸೇರಿದಂತೆ ಇತರರಿದ್ದರು.

Translate »