ಪಾಕ್‍ಗೆ ತಕ್ಕ ಪ್ರತ್ಯುತ್ತರ: ಮೇಜರ್ ಬಿದ್ದಂಡ ನಂದಾ
ಕೊಡಗು

ಪಾಕ್‍ಗೆ ತಕ್ಕ ಪ್ರತ್ಯುತ್ತರ: ಮೇಜರ್ ಬಿದ್ದಂಡ ನಂದಾ

February 27, 2019

ಮಡಿಕೇರಿ: ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರ ದಾಳಿಯಲ್ಲಿ ಬಲಿಯಾದ ಭಾರತೀಯ ಸೈನಿಕರ ಹತ್ಯೆಗೆ ಭಾರತ ವಾಯು ಪಡೆ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವುದು ಹೆಮ್ಮೆ ತಂದಿದೆ ಎಂದು ನಿವೃತ್ತ ಮೇಜರ್ ಬಿದ್ದಂಡ ನಂದಾ ಸಂತಸ ವ್ಯಕ್ತಪಡಿಸಿದ್ದಾರೆ.

‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮೀರಾಜ್ ಯುದ್ಧ ವಿಮಾನಗಳ ಪೈಲಟ್‍ಗಳು ಈ ಕಾರ್ಯಾಚರಣೆಯ ನಿಜವಾದ ಹೀರೊಗಳೆಂದು ಬಣ್ಣಿಸಿದರು. ಫ್ರಾನ್ಸ್‍ನ ಡಸಾಲ್ಟ್ ಕಂಪೆನಿ ನಿರ್ಮಿತ ಮೀರಾಜ್ ಯುದ್ಧ ವಿಮಾನಗಳನ್ನು ಈ ಕಾರ್ಯಾಚರ ಣೆಗೆ ಬಳಸಿಕೊಂಡಿದ್ದು, ಬಹುದೊಡ್ಡ ಯಶಸ್ಸು ಸಿಗಲು ಕಾರಣ ಎಂದರು.

ಕ್ಲಿಷ್ಟಕರ ಸನ್ನಿವೇಶದಲ್ಲೂ ಶತ್ರು ಪಾಳೆಯದ ನೆಲೆಯನ್ನು ಧ್ವಂಸ ಮಾಡುವ ಸಾಮಥ್ರ್ಯ ಮೀರಾಜ್ ಯುದ್ಧ ವಿಮಾನ ಹೊಂದಿವೆ. ಈಗ ಭಾರತ ಖರೀದಿ ಮಾಡಲು ಹೊರಟಿ ರುವ ರಫೇಲ್ ಯುದ್ಧ ವಿಮಾನಗಳು ಮೀರಾಜ್‍ಗಿಂತ 10 ಪಟ್ಟು ಶಕ್ತಿಶಾಲಿಯಾಗಿವೆ ಎಂದು ಸಮರ್ಥಿಸಿಕೊಂಡರು.

Translate »