‘ಸರ್ಜಿಕಲ್ ಸ್ಟ್ರೈಕ್’ಗೆ ಜಿಲ್ಲಾದ್ಯಂತ ವಿಜಯೋತ್ಸವ
ಕೊಡಗು

‘ಸರ್ಜಿಕಲ್ ಸ್ಟ್ರೈಕ್’ಗೆ ಜಿಲ್ಲಾದ್ಯಂತ ವಿಜಯೋತ್ಸವ

February 27, 2019

ಪಟಾಕಿ ಸಿಡಿಸಿ ಸಂಭ್ರಮಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು
ಮಡಿಕೇರಿ: ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಮಂಗಳವಾರ ಮುಂಜಾನೆ ಭಾರತೀಯ ವಾಯುಪಡೆ ನಡೆಸಿದ 2ನೇ ಸರ್ಜಿಕಲ್ ಸ್ಟ್ರೈಕ್‍ಗೆ ಜಿಲ್ಲೆಯ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳಿಂದ ವಿಜಯೋತ್ಸವ ಆಚರಿಸಿ, ಭಾರತೀಯ ಸೇನಾ ಪಡೆಗೆ ಅಭಿನಂದನೆ ಸಲ್ಲಿಸಲಾಯಿತು.

ಮಡಿಕೇರಿ ವರದಿ: ದಾಳಿಗೆ ಭಾರತದ ವಾಯು ಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‍ಗೆ ಹರ್ಷ ವ್ಯಕ್ತಪಡಿಸಿದ ಬಿಜೆಪಿ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳು ಮಡಿಕೇರಿ ಯಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ, ವಿವಿಧ ಸಂಘಟನೆ ಗಳ ಕಾರ್ಯಕರ್ತರು ‘ಪಾಕಿಸ್ತಾನ್ ತೇರೆ ತುಕಡೆ ಕರೇಂಗೆ’ ‘ಟೆರರಿಸಂ ಕೋ ದಫನಾ ದೇಂಗೆ’ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸೇನಾ ಪಡೆ ಪರ ಘೋಷಣೆ ಕೂಗಿದ ಕಾರ್ಯಕರ್ತರು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.

ಎಂಎಲ್‍ಸಿ ಸುನೀಲ್ ಸುಬ್ರಮಣಿ, ಭಾರ ತೀಯ ಸೈನಿಕ ದೀಕ್ಷಿತ್ ಮಾತನಾಡಿದರು.
ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ಪ್ರಮುಖರಾದ ಮನು ಮಂಜುನಾಥ್, ಅರುಣ್ ಶೆಟ್ಟಿ, ಅನಿತಾ ಪೂವಯ್ಯ, ಕನ್ನಿಕೆ, ವಿವಿಧ ಹಿಂದೂ ಪರ ಸಂಘಟನೆಗಳ ಮುಖಂ ಡರು ಹಾಜರಿದ್ದರು.

ವಿಶ್ವ ಹಿಂದೂ ಪರಿಷತ್, ಭಜರಂಗ ದಳ: ಪಾಕಿಸ್ತಾನದ ಉಗ್ರಗಾಮಿ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆ ಸಿದ ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿ ದಂತೆ ಸಂಘ ಪರಿವಾರದ ಕಾರ್ಯಕ ರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ವಿಶ್ವ ಹಿಂದೂ ಪರಿಷತ್‍ನ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ವಿಶ್ವ ಹಿಂದೂ ಪರಿಷತ್‍ನ ದಕ್ಷಿಣ ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ್ ಮಾತನಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿ ಷತ್ತಿನ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಪ್ರಧಾನ ಕಾರ್ಯದರ್ಶಿ ರಾಬಿನ್ ಸುಬ್ಬಯ್ಯ, ವಿಹಿಂಪ ಜಿಲ್ಲಾಧ್ಯಕ್ಷ ಟಾಟೂ ಬೋಪಯ್ಯ, ಪ್ರಾಂತೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಾಪೋಕ್ಲು ವರದಿ: ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾತರಿಸುತ್ತಿದ್ದ ಭಾರತ, ರಾತ್ರೋರಾತ್ರಿ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ, ಶತಕೋಟಿ ಭಾರತೀಯರ ಅಭಿಲಾಷೆ ಈಡೇರಿಸಿದ್ದು, ನಾಪೋಕ್ಲಿನಲ್ಲಿ ಹಿಂದೂಪರ ಸಂಘಟನೆ ಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪಟಾಕಿ ಸಿಡಿಸಿ ವಿಜ ಯೋತ್ಸವ ಆಚರಿಸಿದರು.

ನಾಪೋಕ್ಲು ಬಸ್ ನಿಲ್ದಾಣದಲ್ಲಿ ಸಮಾ ವೇಶಗೊಂಡ ನಾಗರಿಕರು, ಪಾಕಿಸ್ತಾನದ ಉಗ್ರ ನೀತಿಯನ್ನು ಖಂಡಿಸಿದರು. ಇದೇ ವೇಳೆ, ಪುಲ್ವಾಮ ದಾಳಿಗೆ ಪ್ರತೀಕಾರ ತೀರಿ ಸಿಕೊಂಡ ಭಾರತೀಯ ಸೇನಾ ಯೋಧರ ಶಕ್ತಿ ಸಾಮಥ್ರ್ಯಗಳನ್ನು ಕೊಂಡಾಡಿದರು. ಜಿಪಂ ಸದಸ್ಯ ಮುರುಳಿ ಕರುಂಬಯ್ಯ, ಪ್ರಮುಖರಾದ ಅಂಬಿ ಕಾರ್ಯಪ್ಪ, ಕಗಂಡ ಜಾಲಿ ಪೂವಪ್ಪ, ಶಿವಚಾಳಿ ಯಂಡ ಜಗದೀಶ್, ಚೋಕಿರ ಪ್ರಭು, ಕನ್ನಂಬಿರ ಸುದಿ, ಕೇಟೋಳಿರ ಜಾಲಿ ಅಪ್ಪಚ್ಚ, ಚೇನಂಡ ಗಿರೀಶ್, ಕೇಲೇಟಿರ ದೀಪು ಮತ್ತಿತರರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು ವರದಿ: ಪಾಕ್ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿ ಉಗ್ರ ಚಟುವಟಿಕೆ ವಿರುದ್ಧ ಭಾರತೀಯ ಸೈನಿ ಕರು ನಡೆಸಿದ ಕಾರ್ಯಾಚರಣೆಗೆ ಗೋಣಿ ಕೊಪ್ಪದಲ್ಲಿ ಹಿಂದೂ ಸಂಘಟನೆಯಿಂದ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ಬಸ್ ನಿಲ್ದಾಣದ ಎದುರು ಜಮಾಯಿಸಿದ ಹಿಂದೂ ಸಂಘಟನೆಗಳ ಕಾಯಕರ್ತರುಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜೈಭಾರತ್ ಮಾತಾಕಿ ಎಂಬ ಘೋಷಣೆ ಕೂಗಿದರು.

ನಮ್ಮ ಸೈನಿಕರ ಮೇಲೆ ದಾಳಿ ನಡೆಸಿ ಬಲಿ ಪಡೆದ ಪಾಕ್‍ಗೆ ತಕ್ಕ ಉತ್ತರ ನೀಡಿದೆ. ಭಾರತೀಯರಾದ ನಾವುಗಳು ಇದನ್ನೇ ಬಯಸಿದ್ದೆವು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ದಲ್ಲಿ ತಾಪಂ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸಂಘಟನೆ ಪ್ರಮುಖ ಸುಬ್ರ ಮಣಿ ಸೇರಿದಂತೆ ನೂರಾರು ಕಾಯಕರ್ತ ರುಗಳು ಪಾಲ್ಗೊಂಡಿದ್ದರು.

Translate »