ಮಾ.9, ರಾಷ್ಟ್ರೀಯ ಲೋಕ ಅದಾಲತ್
ಮೈಸೂರು

ಮಾ.9, ರಾಷ್ಟ್ರೀಯ ಲೋಕ ಅದಾಲತ್

February 27, 2019

ಮೈಸೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾ.9ರಂದು ಮೈಸೂರು ಮತ್ತು ತಾಲೂ ಕಿನ ನ್ಯಾಯಾಲಯಗಳಲ್ಲಿ `ರಾಷ್ಟ್ರೀಯ ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ವಂಟಿಗೋಡಿ ಇಂದಿಲ್ಲಿ ತಿಳಿಸಿದರು.

ಮೈಸೂರಿನ ನ್ಯಾಯಾಲಯದ ಆವ ರಣದಲ್ಲಿರುವ ವೀಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜೀ ಯಾಗಬಲ್ಲ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳು, ಚೆಕ್ಕು ಬೌನ್ಸ್, ಬ್ಯಾಂಕ್ ವಸೂಲಾತಿ, ಮೋಟಾರು ವಾಹನ, ಅಪ ಘಾತ ಪ್ರಕರಣ, ಕೌಟುಂಬಿಕ ಪ್ರಕರಣ, ಜೀವನಾಂಶ ಪ್ರಕÀರಣ, ದೌರ್ಜನ್ಯ ತಡೆ ಕಾಯ್ದೆ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸ ಲಾಗುವುದು ಎಂದರು.

ಈ ಬಾರಿ ವ್ಯಾಜ್ಯ ಪೂರ್ವ ಪ್ರಕರಣ ಗಳು ಸೇರಿದಂತೆ ಒಟ್ಟು 2009 ಪ್ರಕರಣ ಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೈಸೂ ರಿನಲ್ಲಿ 10ರಿಂದ 15 ಬೆಂಚ್‍ಗಳು, ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ತಲಾ ಒಂದು ಬೆಂಚ್‍ಗಳಿರುತ್ತವೆ. ಪ್ರತಿ ಬೆಂಚ್‍ಗೂ ಒಬ್ಬರು ನ್ಯಾಯಾಧೀಶರಿ ರುತ್ತಾರೆ ಎಂದು ಹೇಳಿದರು.

ಯಾರಿಗಾದರೂ ಯಾವುದೇ ರೀತಿಯ ಕಾನೂನು ತೊಂದರೆ ಇದ್ದಲ್ಲಿ ಮತ್ತು ನೆರವಿನ ಅಗತ್ಯತೆ ಇದ್ದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರವನ್ನು ಸಂಪರ್ಕಿಸಿ ಕಾನೂನು ಸಲಹೆ ಮತ್ತು ನೆರವು ಪಡೆದು ಕೊಳ್ಳಬಹುದಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 0821- 2330130, 1821-2330040 ಸಂಪರ್ಕಿಸ ಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಉಪಸ್ಥಿತರಿದ್ದರು.

 

Translate »