ಮಾ.1, 2ರಂದು ಸುತ್ತೂರಿನಲ್ಲಿ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ
ಮೈಸೂರು

ಮಾ.1, 2ರಂದು ಸುತ್ತೂರಿನಲ್ಲಿ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ

February 27, 2019

ಮೈಸೂರು: ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಮಾ.1 ಮತ್ತು 2ರಂದು ಆಯೋಜಿಸಲಾಗಿರುವ ಪತ್ರಕರ್ತರ ರಾಜ್ಯಮಟ್ಟದ 34ನೇ ಸಮ್ಮೇ ಳನದ ಪೂರ್ವ ಸಿದ್ಧತೆಗಳ ಕುರಿತು ಸಮ್ಮೇ ಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ಗಳನ್ನು ನೀಡಿದ ಅವರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದೆ. ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಹೆಸರನ್ನು ವಸ್ತು ಪ್ರದರ್ಶ ನಕ್ಕೆ ಇಡಲಾಗಿದೆ. ಮೊಳೆ ಅಚ್ಚು ಮುದ್ರಣ ಯಂತ್ರ, ಹಳೇ ಕಾಲದ ರೇಡಿಯೋಗಳು, ಕ್ಯಾಮೆರಾ ಹಾಗೂ ಹಳೇ ಟವಿಗಳನ್ನು ಪ್ರದರ್ಶನ ಕ್ಕಿಡಲಾಗುವುದು. ಆಕಾಶವಾಣಿ ತಾಂತ್ರಿಕ ಮಾಹಿತಿ ಯನ್ನು ಮೈಸೂರು ಆಕಾಶವಾಣಿ ತಂತ್ರಜ್ಞರು ಪ್ರಸ್ತು ಪಡಿಸಲಿದ್ಧಾರೆ ಎಂದರು.

ಪತ್ರಿಕಾ ಛಾಯಾಗ್ರಾಹಕರ ಛಾಯಾ ಚಿತ್ರಗಳ ಪ್ರದರ್ಶನಕ್ಕೆ ಟಿ.ಎಸ್.ಸತ್ಯನ್ ಹೆಸರಿಡ ಲಾಗಿದೆ. ವಸ್ತುಪ್ರದರ್ಶನದಲ್ಲಿ ನಾಲ್ಕು ಎಲ್‍ಇಡಿ ಪರದೆಗಳಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟ ಗೊಂಡಿರುವ ಅತ್ಯುತ್ತಮ ವರದಿಗಳನ್ನು ಪ್ರಕಟಿಸಲಾ ಗುವುದು ಎಂದು ಹೇಳಿದರು.

ನಾಲ್ಕು ಮಹಾದ್ವಾರಗಳಿಗೆ ಹಿರಿಯ ಪತ್ರಕರ್ತರ ಹೆಸರು: ಸುತ್ತೂರಿನ ಮಾರ್ಗ ದಲ್ಲಿ 4 ಕಡೆ ನಿರ್ಮಿಸಿರುವ ಮಹಾ ದ್ವಾರಕ್ಕೆ ಪ್ರಜಾಮತ ಪತ್ರಿಕೆ ಸಂಪಾದಕರಾಗಿದ್ದ ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ಎಸ್. ಗುರುಪಾದಸ್ವಾಮಿ, ಹಿರಿಯ ಪತ್ರಕರ್ತ ರಾದ ದಿ.ವೆಂಕಟಕೃಷ್ಣಯ್ಯ (ತಾತಯ್ಯ) ಅಗರಂ ರಂಗಯ್ಯ ಅವರ ಹೆಸರನ್ನು ನಾಮ ಕರಣ ಮಾಡಲಾಗಿದೆ. ಪ್ರಧಾನ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಹಾಗೂ ಮಹಾ ಮಂಟಪಕ್ಕೆ ಡಿ.ವಿ.ಗುಂಡಪ್ಪ ಹೆಸರಿಡ ಲಾಗಿದೆ. ಇದೇ ಮೊದಲ ಬಾರಿಗೆ ಸಮಾ ನಾಂತರ ವೇದಿಕೆ ಸೃಷ್ಟಿಸಲಾಗಿದ್ದು, ಆ ಸಭಾಂಗಣಕ್ಕೆ ದಿ.ಚಂದ್ರಶೇಖರ ಕುಕ್ಕಿಕಟ್ಟೆ ಹಾಗೂ ವೇದಿಕೆಗೆ ನಂಜನಗೂಡು ತಿರು ಮಲ ಹೆಸರಿಡಲಾಗಿದೆ. ಉಳಿದಂತೆ ಮೈಸೂ ರಿನಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಪ್ರತಿಮೆಗಳನ್ನು ನಿರ್ಮಿ ಸಲಾಗಿದೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿಯಿಂದ ಚಾಲನೆ: ಮಾ.1ರಂದು ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾ ನಂದ ತಗಡೂರು ಅಧ್ಯಕ್ಷತೆ ವಹಿಸುವರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜು ನಯ್ಯ ಆಶಯ ಭಾಷಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರಿಂದ ಸಾಧ್ವಿ ಸುದ್ದಿಕೋಶ ಬಿಡುಗಡೆ, ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯಚಿತ್ರ ವಸ್ತು ಪ್ರದರ್ಶನ ಉದ್ಘಾಟನೆ, ಸಚಿವ ಸಾ.ರಾ.ಮಹೇಶ್ ಸಾಕ್ಷ್ಯಚಿತ್ರ ಬಿಡು ಗಡೆ, ಶಾಸಕ ಡಾ.ಯತೀಂದ್ರ ಸಿದ್ದರಾಮ ಯ್ಯರಿಂದ ಛಾಯಾಚಿತ್ರ ವಸ್ತುಪ್ರದರ್ಶನ ಉದ್ಘಾಟನೆ ನೆರವೇರಲಿದೆ. ಅತಿಥಿಗಳಾಗಿ ಶಾಸಕ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಹರ್ಷವರ್ಧನ್, ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ವಿಶೇಷ ಆಹ್ವಾನಿತರಾಗಿ ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲ ಕೃಷ್ಣ ಇನ್ನಿತರರು ಭಾಗವಹಿಸುವರು.

ವಿವಿಧ ಗೋಷ್ಠಿ: ಮಾ.1ರಂದು ಮಧ್ಯಾಹ್ನ 1.30ಕ್ಕೆ `ಮಾಧ್ಯಮ ಮತ್ತು ರಾಜಕಾರಣ’, ಮಧಾಹ್ನ 3 ಗಂಟೆಗೆ `ಸಮೂಹ ಮಾಧ್ಯಮ- ಸ್ವಯಂ ನೀತಿ ಸಂಹಿತೆ’, ಸಂಜೆ 4ಕ್ಕೆ ಶತಾಯುಷಿಗಳಿಗೆ ಸನ್ಮಾನ, ಮಾ.2ರಂದು ಬೆಳಿಗ್ಗೆ 9.30ಕ್ಕೆ `ಸಂಪಾದಕರ ಸಮ್ಮಿಲನ- ಸಂವಾದ’, ಬೆಳಿಗ್ಗೆ 11 ಗಂಟೆಗೆ `ಮಾಧ್ಯಮ ಮತ್ತು ಡಿಜಿಟಿಲೀಕರಣದ ಸವಾಲುಗಳು’, ಮಧ್ಯಾಹ್ನ 1.30ಕ್ಕೆ ಪ್ರತಿನಿಧಿಗಳ ಸಮಾವೇಶ, ಮಧ್ಯಾಹ್ನ 3.30ಕ್ಕೆ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಮಾ.1ರಂದು ಸಮಾನಾಂತರ ವೇದಿಕೆ ಯಾದ ನಂಜನಗೂಡು ತಿರುಮಲಾಂಬ ಮಂಟಪದಲ್ಲಿ ಮಧ್ಯಾಹ್ನ 1.30ಕ್ಕೆ `ಪತ್ರಿಕೋದ್ಯಮ ಮತ್ತು ಸ್ತ್ರೀ ಸಂವೇದನೆ’, ಮಧ್ಯಾಹ್ನ 3ಕ್ಕೆ `ಫೋಟೋ ಜರ್ನಲಿಸಂ; ಬದಲಾಗುತ್ತಿರುವ ಛಾಯಾ ಪ್ರಪಂಚ, ಸಂಜೆ 4.30ಕ್ಕೆ `ವಿಡಿಯೋ ಜರ್ನಲಿಸಂ- ಹೊಸ ಸವಾಲುಗಳು’ ಕುರಿತಂತೆ ಗೋಷ್ಠಿ ಗಳು ನಡೆಯಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಪದಾಧಿಕಾರಿಗಳಾದ ಎಂ.ಆರ್. ಸತ್ಯನಾರಾಯಣ, ಸುಬ್ರಹ್ಮಣ್ಯ, ಎಲ್.ಜಿ. ದಕ್ಷಿಣಾಮೂರ್ತಿ, ಬಿ.ರಾಘವೇಂದ್ರ, ಧರ್ಮಾಪುರ ನಾರಾಯಣ ಉಪಸ್ಥಿತರಿದ್ದರು.

Translate »