ಇಂದಿನಿಂದ ಹಾಕಿ ಲೀಗ್ ಪಂದ್ಯಾವಳಿ ಆರಂಭ
ಮೈಸೂರು

ಇಂದಿನಿಂದ ಹಾಕಿ ಲೀಗ್ ಪಂದ್ಯಾವಳಿ ಆರಂಭ

November 12, 2018

ಗೋಣಿಕೊಪ್ಪಲು: ಹಾಕಿ ಕೂರ್ಗ್ ವತಿಯಿಂದ ನಾಳೆ (ಸೋಮವಾರ) ಯಿಂದ ಪೊನ್ನಂ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಬಿ. ಡಿವಿಜನ್ ಹಾಕಿ ಲೀಗ್ ಆರಂಭಗೊಳ್ಳಲಿವೆ.

20 ತಂಡಗಳು ‘ಬಿ’ ಡಿವಿಜನ್‍ನಲ್ಲಿ ಸೆಣಸಾಟ ನಡೆಸಲಿವೆ. ಇಲ್ಲಿನ ಟಾಪ್ 4 ತಂಡಗಳು ‘ಎ’ ಡಿವಿಜûನ್‍ಗೆ ಲಗ್ಗೆ ಇಡಲಿವೆ.
‘ಬಿ’ ಡಿವಿಜûನ್ ಹಾಕಿ ನವೆಂಬರ್ 12 ರಿಂದ ನವೆಂಬರ್ 19 ರವರೆಗೆ ನಡೆಯ ಲಿದೆ. ಈ ಪಂದ್ಯಾವಳಿಯಲ್ಲಿ ಪೊನ್ನಂ ಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಮಹಾದೇವ ಸ್ಪೋಟ್ರ್ಸ್ ಕ್ಲಬ್, ಶ್ರಿಮಂಗಲ ನಾಡ್ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಅಕಾಡೆಮಿ, ಮರೆನಾಡ್ ಸ್ಪೋಟ್ರ್ಸ್ ಕ್ಲಬ್, ಎಸ್‍ಆರ್‍ಸಿ ಕಾಕೋಟುಪರಂಬು, ಎಎಸ್‍ಸಿ ಅಮ್ಮತ್ತಿ, ನಾಪೋಕ್ಲು ಶಿವಾಜಿ, ಕಿರಗೂರು ಸ್ಪೋಟ್ರ್ಸ್ ಕ್ಲಬ್, ಕಾಲ್ಸ್, ಬೇರಳಿನಾಡ್, ಬೇತು ಯೂತ್ ಕ್ಲಬ್, ಕೆಎಸ್‍ಸಿವಿ, ಗುಂಡಿ ಯತ್ ಅಯ್ಯಪ್ಪ, ಟಾಟಾ, ಕೋಣನಕಟ್ಟೆ ಇಲೆವೆನ್, ಮರೆನಾಡ್, ಡಿಹೆಚ್‍ಬಿ, ಕಿಸಾನ್ ಯೂತ್ ಕ್ಲಬ್ ಪಾರಣೆ, ಬೊಟ್ಯತ್‍ನಾಡ್ ತಂಡಗಳು ಸೆಣೆಸಾಟ ನಡೆಸಲಿವೆ.
ನವೆಂಬರ್ 25 ರಿಂದ ಎ. ಡಿವಿಜûನ್ ಹಾಕಿ ನಡೆಯಲಿದ್ದು, ಡಿಸೆಂಬರ್ 3 ಕ್ಕೆ ಕೊನೆಗೊಳ್ಳಲಿದೆ. ಎ. ಡಿವಿಜûನ್‍ನಲ್ಲಿ 12 ತಂಡಗಳು ಈಗಾಗಲೇ ಇವೆ. ಈ ಗುಂಪಿಗೆ ಬಿ. ಡಿವಿಷನ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ 4 ತಂಡಗಳು ಸೇರ್ಪ ಡೆಯಾಗಲಿವೆ. ನಂತರ ಲೀಗ್ ಕಪ್‍ಗೆ ಪೈಪೋಟಿ ನಡೆಸಲಿವೆ.

‘ಎ’ ಡಿವಿಜನ್‍ನಲ್ಲಿ ಹಾತೂರು ಸ್ಪೋಟ್ರ್ಸ್ ಕ್ಲಬ್, ಮಹಾದೇವ ಬೇಗೂರು, ಸೋಮವರಪೇಟೆ ಡಾಲ್ಪಿನ್ಸ್, ಪೊದ್ದಮಾನಿ ಬ್ಲೂಸ್ಟಾರ್, ಎಂಆರ್‍ಎಫ್, ಮಡಿಕೇರಿ ಚಾರ್ಮರ್ಸ್, ಬಿಬಿಸಿ, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಮರ್ಕಾರ ಯುನೈಟೆಡ್, ಟವರ್ಸ್ ವಿರಾಜಪೇಟೆ, ಈಗಲ್ಸ್ ತಂಡಗಳು ಪಾಲ್ಗೊಳ್ಳುತ್ತಿವೆ.

ಇಂದಿನ ‘ಬಿ’ ಡಿವಿಜನ್ ಪಂದ್ಯಗಳು
ಬೆ.9ಕ್ಕೆ ಕೋಣನಕಟ್ಟೆ-ಡಿಹೆಚ್‍ಬಿ.
ಬೆ.10.30ಕ್ಕೆ ಎಸ್‍ಆರ್‍ಸಿ-ಕಾಲ್ಸ್
ಮ.12ಕ್ಕೆ ಅಮ್ಮತ್ತಿ- ಕಿರುಗೂರು
ಮ.1.30ಕ್ಕೆ ಬೇತು – ಕೆಎಸ್‍ಸಿವಿ
ಮ.2.30ಕ್ಕೆ ಟಾಟಾ-ಗುಂಡಿಯತ್ ಅಯ್ಯಪ್ಪ

Translate »