ಶ್ರೀರಂಗಪಟ್ಟಣ ಬಳಿ ಅಪಘಾತ; ಸುಂಟಿಕೊಪ್ಪ ವ್ಯಕ್ತಿಗೆ ಗಾಯ
ಕೊಡಗು

ಶ್ರೀರಂಗಪಟ್ಟಣ ಬಳಿ ಅಪಘಾತ; ಸುಂಟಿಕೊಪ್ಪ ವ್ಯಕ್ತಿಗೆ ಗಾಯ

November 16, 2018

ಸುಂಟಿಕೊಪ್ಪ: ಶ್ರೀರಂಗಪಟ್ಟಣ ಸಮೀಪ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಸುಂಟಿಕೊಪ್ಪದ ವ್ಯಕ್ತಿ ಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಡವಾಗಿ ವರದಿಯಾಗಿದೆ. ಅದೃಷ್ಟ ವಶಾತ್ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.

ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ನಿವಾಸಿ, ಗ್ರಾಮ ಪಂಚಾ ಯಿತಿಯ ಸ್ವಚ್ಚತಾಗಾರರಾಗಿರುವ ಎನ್. ರಾಮ ಚಂದ್ರ ಅವರು ಪತ್ನಿ ಯಶೋದ ಅವರೊಂದಿಗೆ ಶ್ರೀರಂಗ ಪಟ್ಟಣದ ನಗುವನಳ್ಳಿಯಲ್ಲಿರುವ ನಾದಿನಿಯ ಮನೆಗೆ ಹೋಗಿದ್ದು, ನ. 13 ರಂದು ಸಂಜೆ 4 ಗಂಟೆ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ (ಕೆ.ಎ. 12ಕ್ಯೂ 4310) ಸುಂಟಿಕೊಪ್ಪಕ್ಕೆ ಹಿಂದಿರುಗುತ್ತಿದ್ದರು.

ನಗುವನಹಳ್ಳಿ ಗೇಟ್ ಬಳಿ ಬೆಂಗ ಳೂರು-ಮೈಸೂರು ಹೆದ್ದಾರಿ ದಾಟಲೆಂದು ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ದ್ದರು. ಈ ಸಂದರ್ಭ ಬೆಂಗಳೂರು ಕಡೆ ಯಿಂದ ಅತೀ ವೇಗದಿಂದ ಬಂದ ಕಾರು (ಕೆ.ಎ.03-ಎಎಫ್4021) ನಿಂತಿದ್ದ ರಾಮಚಂದ್ರ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಯಶೋಧ ಅವರ ಸಹಿತ ರಸ್ತೆಗೆ ಬಿದ್ದ ರಾಮಚಂದ್ರ ಅವರ ಬಲಕೈ, ಸೊಂಟ, ಎದೆ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಶ್ರೀರಂಗಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶೋಧರವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ಅಪಘಾತದ ನಂತರ ಕಾರನ್ನು ನಿಲ್ಲಿಸದೇ ಚಾಲಕ ವೇಗವಾಗಿ ಮೈಸೂರಿನತ್ತ ಚಲಾಯಿಸಿಕೊಂಡು ಹೋಗಿ ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಬೈಕ್ ನಲ್ಲಿ ಕಾರನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದ ಕಾರು ತಪ್ಪಿಸಿಕೊಳ್ಳುವ ಭರದಲ್ಲಿ ಬೊಲೆರೋ ವಾಹನ ವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಅಪಘಾತ ಕುರಿತು ಗಾಯಾಳು ಯಶೋಧ ಅವರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ್ದಾರೆ.

Translate »