ಗೃಹಿಣಿ ಆತ್ಮಹತ್ಯೆ
ಚಾಮರಾಜನಗರ

ಗೃಹಿಣಿ ಆತ್ಮಹತ್ಯೆ

November 16, 2018

ಚಾಮರಾಜನಗರ: ನಾದಿನಿಯ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಾಲೂಕಿನ ಹಂಡ್ರಕಳ್ಳಿಮೋಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹದೇವಶೆಟ್ಟಿ ಎಂಬುವವರ ಪತ್ನಿ ಭಾನುಮತಿ (35) ಆತ್ಮಹತ್ಯೆ ಮಾಡಿಕೊಂಡವರು.

ವಿವರ: ಮಹದೇವಶೆಟ್ಟಿ ಹಾಗೂ ಭಾನುಮತಿ ದಂಪತಿ ವಾಸವಿದ್ದ ಮನೆಯಲ್ಲಿಯೇ ಮಹದೇವ ಶೆಟ್ಟಿ ಅವರ ಸಹೋದರಿ (ಭಾನುಮತಿ ಅತ್ತಿಗೆ) ಸಾಕಮ್ಮ ವಾಸವಿದ್ದರು. ಮನೆಯಲ್ಲಿ ಭಾನುಮತಿ ಹಾಗೂ ಸಾಕಮ್ಮ ಅವರಿಗೆ ಹೊಂದಣಿಕೆ ಇರಲಿಲ್ಲ. ಇದರಿಂದ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಭಾನುಮತಿ ಅವರು ಬುಧವಾರ ಬೆಳಗಿನ ಜಾವ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ರಾಮಸಮುದ್ರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಾಕಮ್ಮ ಅವರನ್ನು ವಶಕ್ಕೆ ಪಡೆಯಲಾಗಿದೆ.

Translate »