ಬುದ್ಧಿಮಾಂದ್ಯ ಶಾಲೆಗೆ ನೆರವು ನೀಡಲು ಮನವಿ
ಚಾಮರಾಜನಗರ

ಬುದ್ಧಿಮಾಂದ್ಯ ಶಾಲೆಗೆ ನೆರವು ನೀಡಲು ಮನವಿ

November 16, 2018

ಗುಂಡ್ಲುಪೇಟೆ: ಬುದ್ಧಿಮಾಂದ್ಯ ಮಕ್ಕಳ ಆರೋಗ್ಯ, ಹಿತರಕ್ಷಣೆ ಮತ್ತು ವಿದ್ಯಾಭ್ಯಾಸ ಹೊಣೆ ಹೊತ್ತಿರುವ ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ದಾನಿಗಳು ಉದಾರವಾಗಿ ನೆರವು ನೀಡ ಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು ಮನವಿ ಮಾಡಿದರು.

ಪಟ್ಟಣದ ನಾಯಕರ ಬೀದಿಯಲ್ಲಿರುವ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ದಿನಾಚರಣೆಯಲ್ಲಿ ಜವಾಹರ್‍ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಆಗುಹೋಗುಗಳ ಪರಿಜ್ಞಾನವೇ ಇಲ್ಲದೇ ಬೆಳೆಯುತ್ತಿರುವ ಬುದ್ಧಿಮಾಂದ್ಯ ಮಕ್ಕಳ ಹಿತರಕ್ಷಣೆ ಮತ್ತು ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತಿರುವ ಸಂಸ್ಥೆಗೆ ದಾನಿಗಳು ಅಪಾರವಾದ ನೆರವನ್ನು ನೀಡುವುದರೊಂದಿಗೆ ಮಾನವೀಯತೆಯನ್ನು ಮೆರೆಯಬೇಕು ಎಂದರು. ಸಂಸ್ಥೆಯ ವ್ಯವಸ್ಥಾಪಕ ವಿರೂಪಾಕ್ಷ ಮಾತನಾಡಿ, ಹಲವು ದಾನಿಗಳ ನೆರ ವಿನಿಂದ ಈ ಶಾಲೆಯನ್ನು ಕಳೆದ ಒಂಭತ್ತು ವರ್ಷ ಗಳಿಂದ ಬಾಡಿಗೆ ಕಟ್ಟಡದಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.

ಈ ವೇಳೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಸೋಮಶೇಖರ್, ಕೆ.ಎನ್. ಮಹದೇವಸ್ವಾಮಿ, ಮಹೇಂದ್ರ, ಅಶ್ವಥ್, ಮಹೇಶ್, ಶಾಲಾ ಸಿಬ್ಬಂದಿಗಳಾದ ಯಶೋಧ, ವಿಮಲ, ಮಮತ, ಸವಿತ, ನಾಗವೇಣಿ, ಶಿವಮ್ಮ ಇತರರು ಹಾಜರಿದ್ದರು.

Translate »