ಕಾನ್‍ಬೈಲು ಬೈಚನಹಳ್ಳಿಯಲ್ಲಿ ಆನೆ ಹಾವಳಿ
ಕೊಡಗು

ಕಾನ್‍ಬೈಲು ಬೈಚನಹಳ್ಳಿಯಲ್ಲಿ ಆನೆ ಹಾವಳಿ

October 8, 2018

ಸುಂಟಿಕೊಪ್ಪ:  ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ಕಾನ್‍ಬೈಲು ಬೈಚನಹಳ್ಳಿ ನಿವಾಸಿ ಅಣ್ಣುನಾಯ್ಕ ಎಂಬುವರ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡಿ ಸುಮಾರು 50 ಸಾವಿರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.

ಈ ಬಾರಿ ಅತಿವೃಷ್ಠಿಯಿಂದ ಬೆಳೆ ನಷ್ಟಗೊಂಡಿದ್ದು, ಇದೀಗ ಕಾಡಾನೆಗಳು ನಾಟಿ ಮಾಡಿದ ಗದ್ದೆಗಳಿಗೆ ದಾಳಿ ಮಾಡಿ ಪೈರುಗಳನ್ನು ತಿಂದು ತುಳಿದು ದ್ವಂಸ ಗೊಳಿಸಿ ನಂತರ ಬಾಳೆ ತೆಂಗು ಭಾರಿ ಪ್ರಮಾಣದಲ್ಲಿ ನಷ್ಟ ಪಡಿಸಿವೆ ಎಂದು ಕಾನ್‍ಬೈಲು ಬೈಚನಹಳ್ಳಿ ಗ್ರಾಮದ ಅಣ್ಣು ನಾಯ್ಕ ಬೆಳೆ ನಷ್ಟ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆ ಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುತ್ತಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸುವಂತೆ ಅಣ್ಣುನಾಯ್ಕ ಹಾಗೂ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Translate »