ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ಕಡಿವಾಣಕ್ಕೆ ಚಿಂತನೆ
ಕೊಡಗು

ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ಕಡಿವಾಣಕ್ಕೆ ಚಿಂತನೆ

October 8, 2018

ಗೋಣಿಕೊಪ್ಪಲು: ಪಟ್ಟಣದ ರಸ್ತೆ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಲಾಗು ವುದು ಎಂದು ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಹೇಳಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಡೆದ ರಸ್ತೆ ಸಂಚಾರ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ವಾಹನ ದಟ್ಟಣೆ ನಿವಾರಣೆಗೆ ಅಂಗಡಿ ಮಾಲೀಕರ ಸಹಾಯ ಬೇಕಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು 50 ಮೀಟರ್‍ಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋ ಜಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಚಾಲಕರಿಗೆ ಟ್ರಾಫಿಕ್ ಸಮಸ್ಯೆ ಮಾಡ ದಂತೆ ಎಚ್ಚರ ನೀಡಲಾಗಿದೆ. ಸಾರ್ವಜನಿ ಕರು ಪೊಲೀಸ್ ಇಲಾಖೆಯೊಂದಿಗೆ ಸಹ ಕರಿಸಬೇಕು. ಯಾವುದೇ ಕಾರಣಕ್ಕೂ ಅಹಿತ ಕರ ಘಟನೆಗೆ ಆಸ್ಪದ ನೀಡುವುದಿಲ್ಲ ಎಂದರು.

ಪಟ್ಟಣದ ರಸ್ತೆಯ ಎರಡು ಬದಿಯ ಲ್ಲಿಯೂ ವಾಹನದಲ್ಲಿ ವ್ಯಾಪಾರ ನಡೆಸು ತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಂಡು ಅಂತಹ ವಾಹನಗಳ ಮೇಲೆ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಗೋಣಿ ಕೊಪ್ಪ ಚೇಂಬರ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮನವಿ ಮಾಡಿದರು.
ಪಟ್ಟಣದಲ್ಲಿ ವಾಹನ ದಟ್ಟಣೆ ನಿವಾರಿ ಸಲು ಬೈ ಪಾಸ್ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಬಳಸಿದಲ್ಲಿ ಅನುಕೂಲ, ಅನಾ ನುಕೂಲದ ಬಗ್ಗೆ ಚರ್ಚೆ ನಡೆಯಿತು. ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಕೊಂಡು ಹಣ್ಣು ತರಕಾರಿ, ಹೂವಿನ ಗಿಡ, ಬಟ್ಟೆ, ಇತ್ಯಾದಿ ವ್ಯಾಪಾರ ನಡೆಸುತ್ತಿರುವುದು ಹೆಚ್ಚಾಗಿದೆ ಎಂದು ಚೇಂಬರ್ ಪದಾಧಿಕಾ ರಿಗಳು ಅಧಿಕಾರಿಯ ಗಮನಕ್ಕೆ ತಂದರು.
ಚೇಂಬರ್ ಆಫ್ ಕಾಮರ್ಸ್‍ನ ಜಿಲ್ಲಾ ಧ್ಯಕ್ಷ ಬಿ.ಎನ್.ಪ್ರಕಾಶ್, ಗೋಣಿಕೊಪ್ಪ ಚೇಂಬರ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ನಿರ್ದೆಶಕರುಗಲಾದ ಸುಮಿ ಸುಬ್ಬಯ್ಯ, ಪ್ರಭಾಕರ್ ನೆಲ್ಲಿತ್ತಾಯ, ಗಿರೀಶ್ ಗಣಪತಿ, ಕೇಶವ್ ಕಾಮತ್, ರಾಜ ಶೇಖರ್, ಕೃಷ್ಣಪ್ಪ, ಅರವಿಂದ್ ಕುಟ್ಟಪ್ಪ, ಅರುಣ್ ಪೂಣಚ್ಚ, ಅಜಿತ್ ಅಯ್ಯಪ್ಪ ಕಾರ್ಯ ದರ್ಶಿ ತೆಕ್ಕಡ ಕಾಶಿ ಉಪಸ್ಥಿತರಿದ್ದರು.

Translate »