ಕೊಡಗು

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಗೆ ಸಿಎಂಗೆ ಮನವಿ

September 16, 2018

ಮಡಿಕೇರಿ: ಅತಿವೃಷ್ಟಿ ಹಾನಿ ಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಯಲ್ಲಿ ಮುಂದೆ ಸವಾಲಿನ ದಿನಗಳು ಎದು ರಾಗಲಿದ್ದು, ಶಾಶ್ವತ ಪರಿಹಾರದ ಚಿಂತ ನೆಗಳು ನಡೆಯಬೇಕಾಗಿದೆ. ಇದಕ್ಕಾಗಿ ರಾಜ ಕೀಯ ರಹಿತವಾದ ‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’ವನ್ನು ರಚಿಸಬೇ ಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಸಂಭ ವಿಸಿರುವ ಅನಾಹುತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಮುಂದೆ ಈ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಿರುವ ಚಿಂತನೆ ನಡೆಯಬೇಕಾಗಿದೆ. ಇದು ರಾಜ ಕಾರಣಿಗಳಿಲ್ಲದೆ ಜನರ ಸಲಹೆಗಳನ್ನು ಆಧರಿಸಿ, ಅಧಿಕಾರಿಗಳಿಂದ ಅನುಷ್ಟಾನ ಗೊಳ್ಳಬಹುದಾದ ಪ್ರಾಧಿಕಾರದಿಂದ ಸಾಧ್ಯ ವೆಂದು ವಿಶ್ವನಾಥ್ ಅಭಿಪ್ರಾಯಪಟ್ಟರು.
ಸಾಕಷ್ಟು ಪರಿಹಾರ ಧನ ಮತ್ತು ಸಾಮಾ ಗ್ರಿಗಳು ಬಂದಿದ್ದರು ಇದನ್ನು ಹೇಗೆ ವಿನಿ ಯೋಗಿಸಬೇಕು ಮತ್ತು ಅಭಿವೃದ್ಧಿ ಕಾರ್ಯ ಗಳಿಗೆ ಬಳಸಿಕೊಳ್ಳುವ ಬಗ್ಗೆ ಗೊಂದಲ ವಿದೆ. ಇದನ್ನು ನಿವಾರಿಸಲು ಪ್ರಾಧಿಕಾರದ ಅಗತ್ಯವಿದ್ದು, ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ತಮ್ಮ ನೇತೃತ್ವದಲ್ಲಿ ರಚಿಸಿರುವ ಇಂಜಿನಿ ಯರ್‍ಗಳ ತಂಡ ನೀಡಿರುವ ತಾಂತ್ರಿಕ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಪರಿ ಹಾರ ಕಾರ್ಯಗಳು ಸುಲಭವಾಗಿ ನಡೆ ಯುವಂತೆ ನೋಡಿಕೊಳ್ಳಲಾಗುವುದು. ನುರಿತ ಹಿರಿಯ ಇಂಜಿನಿಯರ್‍ಗಳು ನೀಡಿ ರುವ ಸಲಹೆ ಸೂಚನೆಗಳು ಹೆಚ್ಚು ಸಹಕಾರಿ ಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಕೊಡಗಿನ ಪುನರ್ ನಿರ್ಮಾಣ ವಿಚಾರದಲ್ಲಿ ದೊಡ್ಡ ಸವಾಲೇ ಇದೆಯೆಂದು ಅಭಿಪ್ರಾಯಪಟ್ಟ ಅವರು, ಎಲ್ಲರು ಕೈಜೋಡಿಸಿ ಕೊಡಗನ್ನು ಮತ್ತೆ ಕಟ್ಟಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಜನರು ಆಯ್ಕೆ ಮಾಡಿರುವ ಶಾಸಕರು, ಸಂಸದರಿದ್ದಾರೆ, ಆದರೆ ಪ್ರಧಾ ನಿಗಳ ಬಳಿಗೆ ನಿಯೋಗ ತೆರಳಿ ಕೊಡಗಿಗೆ ವಿಶೇಷ ಪ್ಯಾಕೇಜ್ ಯಾಕೆ ಕೋರುತ್ತಿಲ್ಲ. ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾಗ ಕೂಡ ಬಿಜೆಪಿ ಮಂದಿ ಜೊತೆಯಲ್ಲಿ ತೆರಳ ಲಿಲ್ಲ, ಬಿಜೆಪಿಗೆ ರಾಜಕಾರಣವೇ ಮೇಲಾ ಯಿತೆ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಕೊಡಗನ್ನು ಪುನರ್ ನಿರ್ಮಿಸುವುದ ರೊಂದಿಗೆ ಜನರ ಮನಸ್ಸನ್ನು ಕೂಡ ಕಟ್ಟ ಬೇಕಾಗಿದೆ. ಎಲ್ಲವನ್ನು ಕಳೆದುಕೊಂಡಿ ರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಕಾರ್ಯಗಳನ್ನು ನಡೆಸಬೇಕಾ ಗಿದೆ. ಈಗಾಗಲೆ ನಿವೃತ್ತ ಇಂಜಿನಿಯರ್ ಗಳ ತಂಡ ತಾಂತ್ರಿಕ ಸಲಹೆಗಳನ್ನು ನೀಡಿದ್ದು, ಸರ್ಕಾರ ಇದನ್ನು ಒಪ್ಪುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಅಭಿವೃದ್ಧಿ ಪರ ಚಿಂತನೆಯಿಲ್ಲದ ಬಿಜೆಪಿ ಕೇವಲ ರಾಜಕಾರಣ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದೆ. ರಾಜ್ಯ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿ ರುವ ಬಿಜೆಪಿ ಪತನ ವ್ಯಸನದಲ್ಲಿ ಮುಳು ಗಿರುವುದರಿಂದ ಇಷ್ಟಲ್ಲಾ ಗೊಂದಲಗಳು ಸೃಷ್ಟಿಯಾಗುತ್ತಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ಐದು ವರ್ಷಗಳನ್ನು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೇ, ಮುಂಬರುವ ಲೋಕ ಸಭಾ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಯಾಗಿ ಎದುರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಸರ ಕಾರಕ್ಕೂ ಸಮನ್ವಯ ಸಮಿತಿಗೂ ಯಾವುದೇ ಸಂಬಂಧವಿಲ್ಲ, ನಾವೆಲ್ಲರೂ ಸಮನ್ವಯತೆ ಯನ್ನು ಕಾಯ್ದುಕೊಂಡೆ ಬರುತ್ತಿದ್ದೇವೆ. ಕಾಂಗ್ರೆಸ್ ಇಂದಿಗೂ ನನಗೆ ತಾಯಿ ಇದ್ದಂತೆ, ನಾಯಕರಿಂದ ಕಾಂಗ್ರೆಸ್ ಹಾಳಾಗಿದೆಯೇ ಹೊರತು ಕಾಂಗ್ರೆಸ್ ಹಾಳಾ ಗಿಲ್ಲವೆಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

Translate »